ಪ್ರಧಾನ ಸುದ್ದಿ

ಹೈದರಾಬಾದ್ ವಿವಿಯಲ್ಲಿ ಭುಗಿಲೆದ್ದ ಆಕ್ರೋಶ

ರೋಹಿತ್ ಪ್ರಕರಣ ಖಂಡಿಸಿ ಬೀದಿಗಿಳಿದಿರುವ ವಿದ್ಯಾರ್ಥಿ ಸಮುದಾಯವನ್ನು ಮಂಗಳವಾರ ಬಹಿರಂಗವಾದ ಕೇಂದ್ರ ಸಚಿವರ ಪತ್ರಗಳು ಮತ್ತಷ್ಟು ಕೆರಳಿಸಿವೆ...

ಹೈದರಾಬಾದ್ ವಿವಿಯಲ್ಲಿ ಭುಗಿಲೆದ್ದ ಆಕ್ರೋಶ
ಹೈದರಾಬಾದ್ ವಿವಿ ಆವರಣದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ (ಸಂಗ್ರಹ ಚಿತ್ರ)
Published On :

ಹೈದರಾಬಾದ್: ರೋಹಿತ್ ಪ್ರಕರಣ ಖಂಡಿಸಿ ಬೀದಿಗಿಳಿದಿರುವ ವಿದ್ಯಾರ್ಥಿ ಸಮುದಾಯವನ್ನು ಮಂಗಳವಾರ ಬಹಿರಂಗವಾದ ಕೇಂದ್ರ ಸಚಿವರ ಪತ್ರಗಳು ಮತ್ತಷ್ಟು ಕೆರಳಿಸಿವೆ.

ದೇಶಾದ್ಯಂತ ವಿದ್ಯಾರ್ಥಿ ಸಮೂಹ ಕೇಂದ್ರ, ವಿವಿ ವಿರುದ್ಧ ಸಿಡಿದೆದ್ದಿವೆ. ದೇಶಾದ್ಯಂತ ವಿವಿಧ ಐಐಟಿ, ಪೂನಾದ ಎಫ್ ಟಿಐಐ ಸೇರಿದಂತೆ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲೂ ಪ್ರತಿಭಟನೆ ಪ್ರತಿಧ್ವನಿಸಿದೆ.

ಬೇಡಿಕೆ ತಿರಸ್ಕರಿಸಿದ ಬಿಜೆಪಿ: ಇರಾನಿ ಮತ್ತು ಬಂಡಾರು ದತ್ತಾತ್ರೇಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಕಾಂಗ್ರೆಸ್ ಬೇಡಿಕೆಯನ್ನು ಬಿಜೆಪಿ ತಿರಸ್ಕರಿಸಿದೆ. ವಿವಿ ಆವರಣಕ್ಕೆ ತೆರಳಿ ರಾಹುಲ್  ಗಾಂಧಿ ಪ್ರಕರಣವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಟೀಕಿಸಿದೆ. ಆತ್ಮಹತ್ಯೆ ಪ್ರಕರಣಕ್ಕೂ ಬಂಡಾರು ದತ್ತಾತ್ರೇಯಗೂ ಯಾವುದೇ ಸಂಬಂಧ ಇಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ.

131 ಶಿಕ್ಷಣ ತಜ್ಞರಿಂದ ಕಳವಳ
ಹೈದರಾಬಾದ್ ಘಟನೆ ಬಗ್ಗೆ ಜಾಗತಿಕ ಶಿಕ್ಷಣ ಕ್ಷೇತ್ರದ 131 ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಘಟನೆಯನ್ನು ಖಂಡಿಸಿದ್ದಾರೆ. ``ಭಾರತದ ಯುವ ಜನರ ಬೌದ್ಧಿಕ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪೋಷಿಸುವ ಕನಿಷ್ಠ ಕರ್ತವ್ಯವನ್ನು ನಿಭಾಯಿಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ವಿಫಲವಾಗಿವೆ,'' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪೂರ್ವಗ್ರಹದಿಂದಾಗಿ ಭಾರಿ ಬೆಲೆ  ತೆರಬೇಕಾಯಿತು ಎಂದಿದ್ದಾರೆ.

ಹೈದರಾಬಾದ್ ವಿವಿಯಲ್ಲಿ ಐವರು ದಲಿತ ವಿದ್ಯಾರ್ಥಿಗಳಿಗೆ ವಾದ ಮಂಡಿಸಲು ಅವಕಾಶ ನೀಡದೆ ರಾಜಕೀಯ ಒತ್ತಡದಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಐವರ ವಿರುದ್ಧ  ಹೊರಿಸಲಾಗಿದ್ದ ಆರೋಪವನ್ನು ಮುಕ್ತಗೊಳಿಸಿದ್ದರೂ ರಾಜಕೀಯ ಪ್ರಭಾವದಿಂದ ವಿವಿ ಆಡಳಿತ ವರ್ಗ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಫಾ್ರನ್ಸ್‍ನ ಶಿಕ್ಷಣ  ತಜ್ಞ ಕ್ರಿಸ್ಟೋಫೆ ಜೆಫರ್ಲೊ, ಜರ್ಮನಿಯ ಗೊಟಿನ್‍ಜೆನ್ ವಿವಿಯ ರೂಪಾ ವಿಶ್ವನಾಥ್, ಪೆನ್ಸಿಲ್ವೇನಿಯಾ ವಿವಿಯ ಅನಿಯಾ ಲೂಂಬಾ ಸೇರಿದಂತೆ ಪ್ರಮುಖರು ಹೇಳಿಕೆಗೆ ಸಹಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.