ಪ್ರಧಾನ ಸುದ್ದಿ

ಸ್ಕಿಲ್ ರ್ಯಾಂಕ್: ಭಾರತದ ಸ್ಥಾನ ಕುಸಿತ

ಪ್ರತಿಭಾ ಸ್ಪರ್ಧಾತ್ಮಕತೆಯ ಜಾಗತಿಕ ಪಟ್ಟಿಯಲ್ಲಿ ಭಾರತ 11 ಸ್ಥಾನ ಕುಸಿದು 89ಕ್ಕೆ ತಲುಪಿದೆ. ಭಾರತ ಸ್ಕಿಲ್ ಹೊಂದಿರುವ ಕಾರ್ಮಿಕರು ಮತ್ತು ಉದ್ಯಮ ಸ್ನೇಹಿ ಪರಿಸರ ಕೊರತೆಯಿಂದ ನಲುಗುತ್ತಿದೆ..

ಸ್ಕಿಲ್ ರ್ಯಾಂಕ್: ಭಾರತದ ಸ್ಥಾನ ಕುಸಿತ
ಪ್ರತಿಭಾ ಸ್ಪರ್ಧಾತ್ಮಕತೆ (ಸಂಗ್ರಹ ಚಿತ್ರ)
Published On :

ದಾವೋಸ್: ಪ್ರತಿಭಾ ಸ್ಪರ್ಧಾತ್ಮಕತೆಯ ಜಾಗತಿಕ ಪಟ್ಟಿಯಲ್ಲಿ ಭಾರತ 11 ಸ್ಥಾನ ಕುಸಿದು 89ಕ್ಕೆ ತಲುಪಿದೆ. ಭಾರತ  ಸ್ಕಿಲ್ ಹೊಂದಿರುವ ಕಾರ್ಮಿಕರು ಮತ್ತು ಉದ್ಯಮ ಸ್ನೇಹಿ ಪರಿಸರ  ಕೊರತೆಯಿಂದ ನಲುಗುತ್ತಿದೆ ಎಂಬುದನ್ನು ಇದು ತೋರಿಸಿದೆ.

ಕಳೆದ ವರ್ಷ ಭಾರತ ಈ ಪಟ್ಟಿಯಲ್ಲಿ 78ನೇ ಸ್ಥಾನದಲ್ಲಿತ್ತು. ಜಾಗತಿಕ  ಪ್ರತಿಭಾ ಸ್ಪರ್ಧಾತ್ಮಕ  ಸೂಚ್ಯಂಕ (ಜಿಟಿಸಿ)ದ ಈ ಪಟ್ಟಿಯಲ್ಲಿ ಸ್ವಿಜರ್‍ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಸಿಂಗಾಪುರ,  ಲಕ್ಸೆಂಬಗ್ರ್ , ಅಮೆರಿಕ, ಡೆನ್ಮಾರ್ಕ್ಗಳು ನಂತರದ ಸ್ಥಾನಗಳಲ್ಲಿವೆ. ಬ್ರಿಕ್ಸ್ ದೇಶಗಳಲ್ಲಿ ಭಾರತದ ರ್ಯಾಂಕಿಂಗ್ ಕನಿಷ್ಟವಾಗಿದ್ದರೆ 48ನೇ ರ್ಯಾಂಕ್‍ನೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದೆ. ಸ್ಕಿಲ್ ಹೊಂದಿರುವವರು ವಲಸೆ ಹೋಗುವುದರಲ್ಲಿ ಭಾರತ ಮತ್ತು ಚೀನಾ ಈಗಲೂ ಮುಂದಿನ ಸ್ಥಾನಗಳಲ್ಲಿವೆ. ಈ ದೇಶಗಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಹಣ ವ್ಯಯ ಮಾಡುತ್ತಿದ್ದು ಸ್ಕಿಲ್ ಅಭಿವೃದ್ಧಿ  ಕ್ಷೇತ್ರವನ್ನು ನಿರ್ಲಕ್ಷಿಸಿವೆ ಎಂದು ವರದಿ ವಿವರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.