ಜೈಶ್ ಉಗ್ರ ಸಂಘಟನೆ ಶಾಲೆಗಳಿಗೆ ಬೀಗ ಹಾಕಿದ ಪೊಲೀಸರು
ಪಠಾಣ್‍ಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಉಗ್ರ ಸಂಘಟನೆ ಜೈಶ್ ಎಮೊಹಮಮ್ಮದ್ ವಿರುದ್ಧ ಕಠಿಣಕ್ರಮ ಮುಂದುವರಿಸಿದೆ. ಅಲ್ಲಿನ ತನಿಖಾ ಸಂಸ್ಥೆಗಳು ಪಂಜಾಬ್ ಪ್ರಾಂತ್ಯದ...

ನವದೆಹಲಿ: ಪಠಾಣ್‍ಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಉಗ್ರ ಸಂಘಟನೆ ಜೈಶ್ ಎಮೊಹಮಮ್ಮದ್ ವಿರುದ್ಧ ಕಠಿಣಕ್ರಮ ಮುಂದುವರಿಸಿದೆ. ಅಲ್ಲಿನ ತನಿಖಾ ಸಂಸ್ಥೆಗಳು ಪಂಜಾಬ್ ಪ್ರಾಂತ್ಯದ ಅಲ್ಲಲ್ಲಿ ಇರುವ ಸಂಘಟನೆಯ ಧಾರ್ಮಿಕ ಶಾಲೆಗಳಿಗೆ ಬೀಗ ಹಾಕಿವೆ.
ಈ ಬಗ್ಗೆ ಆ ಪ್ರಾಂತ್ಯದ ಕಾನೂನು ಸಚಿವ ರಾಣಾ ಸನವುಲ್ಲ ತಿಳಿಸಿದ್ದಾರೆ. ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‍ನನ್ನು ಬಂಧಿಸಲಾಗಿಲ್ಲ ಎಂದಿದ್ದಾರೆ. `ಡಾನ್ ನ್ಯೂಸ್ 'ಗೆ ನೀಡಿದ ಸಂದರ್ಶನದಲ್ಲಿ ``ಅಜರ್‍ನನ್ನು ಬಂಧಿಸಲಾಗಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ''ಎಂದು ಹೇಳಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಎರಡೂ ದೇಶಗಳು ಹೊಸತಾಗಿ ಮಾತುಕತೆಗೆ ದಿನಾಂಕ ನಿಗದಿ ಮಾಡುವ ಬಗ್ಗೆ ಚರ್ಚೆಯಲ್ಲಿ ನಿರತವಾಗಿವೆ ಎಂದಿದ್ದಾರೆ. ಆದರೆ ಅಜರ್ ಬಂಧನ ಅಥವಾ ವಶ ಎಂಬ ಬಗ್ಗೆ ಪಾಕ್ ಸರ್ಕಾರ ಇನ್ನೂ ಖಚಿತಪಡಿಸಿಲ್ಲ.
ಎಸ್‍ಪಿಗೆ ಸುಳ್ಳುಪತ್ತೆ ಪರೀಕ್ಷೆ: ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೆ ಹೇಳಿಕೆ ಬದಲು ಮಾಡುತ್ತಿರುವ ಗುರುದಾಸ್ಪುರ ಎಸ್‍ಪಿ ಸಲ್ವಿಂದರ್ ಸಿಂಗ್‍ರನ್ನು ಮುಂದಿನವಾರ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದಕ್ಕೆ ಅವರೂ ಒಪ್ಪಿಗೆ ಸೂಚಿಸಿದ್ದಾರೆ.
ಬಂಧನ:
ನವದೆಹಲಿಯಲ್ಲಿ ಪಾಕಿಸ್ತಾನ ಏರ್ ಲೈನ್ಸ್ ಕಚೇರಿಗೆ ದಾಳಿ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹಿಂದೂ ಸೇನೆ ಸಂಘಟನೆ ಮುಖ್ಯಸ್ಥ ವಿಷ್ಣು ಗುಪ್ತಾರನ್ನು ಬಂಧಿಸಿದ್ದಾರೆ. ಕೇಂದ್ರ ವಿದೇಶಾಂಗ ಇಲಾಖೆ ಏರ್‍ಲೈನ್ಸ್ ಕಚೇರಿಗೆ ಭದ್ರತೆ ಹೆಚ್ಚಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಎರಡೂ ದೇಶಗಳ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಮುಂದೂಡಿಕೆ ಮತ್ತು ರದ್ದು ಮಾಡುವುದು ಅಪಾಯಕಾರಿ ಪದ್ಧತಿ. ಮೂರನೇಯ ಪಕ್ಷ ಮಧ್ಯಪ್ರವೇಶಿಸುವುದಕ್ಕೆ ಮುನ್ನ ವಿಚಾರವನ್ನು ಪರಸ್ಪರ ಬಗೆಹರಿಸುವುದು ಮುಖ್ಯ.
- ಸೀತಾರಾಮ್ ಯೆಚೂರಿ ಸಿಪಿಎಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


