ಪ್ರಧಾನ ಸುದ್ದಿ

ಬಾಲ್ಯದಲ್ಲಿ ನಾನು ಸಾವಿನ ಸಮೀಪಕ್ಕೆ ಹೋಗಿದ್ದ ಅನುಭವವಾಗಿತ್ತು: ಸಚಿನ್ ತೆಂಡೂಲ್ಕರ್

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌‌ಗೆ ಬಾಲ್ಯದಲ್ಲಿ ಸಾವಿಗೆ ಸಮೀಪವಾಗಿದ್ದ ಅನುಭವ ಆಗಿತ್ತಂತೆ. ಅದಕ್ಕೆ ಸಂಬಂಧಿಸಿದ ಘಟನೆಯ ...

ಬಾಲ್ಯದಲ್ಲಿ ನಾನು ಸಾವಿನ ಸಮೀಪಕ್ಕೆ ಹೋಗಿದ್ದ ಅನುಭವವಾಗಿತ್ತು: ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
Published On :

ನವದೆಹಲಿ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌‌ಗೆ ಬಾಲ್ಯದಲ್ಲಿ ಸಾವಿಗೆ ಸಮೀಪವಾಗಿದ್ದ ಅನುಭವ ಆಗಿತ್ತಂತೆ. ಅದಕ್ಕೆ ಸಂಬಂಧಿಸಿದ ಘಟನೆಯ ಅನುಭವವೊಂದನ್ನು ಅವರು ಬಿಚ್ಚಿಟ್ಟಿದ್ದಾರೆ.

ಅವರ ಮುಂಬೈನ ಶಾಲಾ ದಿನಗಳಲ್ಲಿ ಕ್ರಿಕೆಟ್ ಅಭ್ಯಾಸದ ಬಳಿಕ ಊಟ ಮುಗಿಸಿ ಸಿನಿಮಾ ನೋಡೋದಕ್ಕೆ 6 ಮಂದಿ ಗೆಳೆಯರ ಜೊತೆ ಹೋಗುತ್ತಿದ್ದರು. ಸಿನಿಮಾ ನೋಡಿಕೊಂಡು ವಾಪಸ್ ಬರುವ  ವೇಳೆ ಮೈದಾನಕ್ಕೆ ಹಿಂದಿರುಗಲು ದಾದ್ರಾದ ರೈಲು ಹಳಿ ದಾಟುತ್ತಿದ್ದರು.

ಹಳಿ ದಾಟುತ್ತಿದ್ದಾಗ  ರೈಲು ವೇಗವಾಗಿ ಬಂದಿತ್ತು. ಇದರಿಂದ ನನಗೆ ಭಾರೀ ಭಯವಾಗಿತ್ತು. ಆಗ ನನಗೆ ಸಾವಿನ ಅನುಭವವಾಗಿತ್ತು ಎಂದು ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.

ಪ್ರತಿ ಭಾರಿ ರೈಲು ಹಳಿ ನೋಡಿದಾಗ ನನಗೆ ಅದೇ ಘಟನೆ ಮರುಕಳಿಸುತ್ತಿರುತ್ತದೆ ಎಂದು ಹೇಳಿರುವ ಸಚಿನ್ ತೆಂಡೂಲ್ಕರ್ ರೈಲಿನಲ್ಲಿ ಸಂಚರಿಸುವಾಗ ಜಾಗೃತೆಯಿಂದ ಇರಬೇಕು ಎಂದು ಹೇಳಿದ್ದಾರೆ. ಜೊತೆಗೆ ರೈಲಿನ ಮೇಲೆ ಕುಳಿತು ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕೆಂದು ಅವರು ಪ್ರಯಾಣಿಕರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.