ಪ್ರಧಾನ ಸುದ್ದಿ

ಬೆಳೆ ವಿಮೆ ಯೋಜನೆಗೆ ಕೇಂದ್ರ ಅಸ್ತು

ರೈತರು ಬಹಳ ವರ್ಷಗಳಿಂದ ಕಾಯುತ್ತಿದ್ದ ಬೆಳೆ ವಿಮೆ ಯೋಜನೆ ಸಾಕಾರವಾಗುವ ಕಾಲ ಸನ್ನಿಹಿತವಾಗಿದೆ. ಕೇಂದ್ರ ಸರ್ಕಾರ ಬುಧವಾರ ಬೆಳೆ ವಿಮೆ ಯೋಜನೆಗೆ ಅನುಮತಿ ನೀಡಿದೆ...

ಬೆಳೆ ವಿಮೆ ಯೋಜನೆಗೆ ಕೇಂದ್ರ ಅಸ್ತು
ಬೆಳೆ ವಿಮೆ (ಸಂಗ್ರಹ ಚಿತ್ರ)
Published On :

ನವದೆಹಲಿ: ರೈತರು ಬಹಳ ವರ್ಷಗಳಿಂದ ಕಾಯುತ್ತಿದ್ದ ಬೆಳೆ ವಿಮೆ ಯೋಜನೆ ಸಾಕಾರವಾಗುವ  ಕಾಲ ಸನ್ನಿಹಿತವಾಗಿದೆ. ಕೇಂದ್ರ ಸರ್ಕಾರ ಬುಧವಾರ ಬೆಳೆ ವಿಮೆ ಯೋಜನೆಗೆ ಅನುಮತಿ  ನೀಡಿದೆ.

ಕಳೆದ ಎರಡು ವರ್ಷಗಳಿಂದ ರೈತರು ಬರ ಮತ್ತು ಅನಿಯಮಿತ ಮಳೆಯಿಂದ ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದರು. ಕೇಂದ್ರ ಸರ್ಕಾರ ಹೊಸದಾಗಿ ಅನುಮೋದನೆ ನೀಡಿರುವ ಈ ವಿಮಾ  ಯೋಜನೆಯಲ್ಲಿ ಆಹಾರ ಧಾನ್ಯಗಳು ಮತ್ತು ತೈಲ ಬೀಜಗಳಿಗೆ ಪ್ರೀಮಿಯಂ ಮೊತ್ತವನ್ನು ಶೇ.1.5ರಿಂದ 2ರಷ್ಟು ನಿಗದಿಪಡಿಸಲಾಗಿದೆ. ತೋಟಗಾರಿಕೆ ಮತ್ತು ಹತ್ತಿ ಬೆಳೆಗೆ ಶೇ. 5ರಷ್ಟು ಪ್ರೀಮಿಯಂ  ನಿಗದಿ ಮಾಡಿದೆ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ (ಪಿಎಂಎಫ್ಬಿವೈ) ಪ್ರಸಕ್ತ ಮುಂಗಾರು ಋತುವಿನಿಂದ ಚಾಲನೆಗೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ  ಸಚಿವ ಸಂಪುಟ ಸಭೆ ಇದಕ್ಕೆ ಅನುಮೋದನೆ ನೀಡಿತು.

ಪಿಎಂಎಫ್ಬಿವೈ ಸದ್ಯ ಚಾಲ್ತಿಯಲ್ಲಿರುವ ರಾಷ್ಟ್ರೀಯ ಕೃಷಿ ವಿಮಾಯೋಜನೆ ಮತ್ತು ಎನ್‍ಎಐಎಸ್ ಯೋಜನೆಗಳನ್ನು ಇಲ್ಲವಾಗಿಸಲಿದೆ. ಕೃಷಿ ಇಲಾಖೆ ಈ ಹೊಸ ವಿಮಾ ಯೋಜನೆಯನ್ನು  ಮಂಡಿಸಿತ್ತು. ಆಹಾರ ಧಾನ್ಯ ಮತ್ತು ತೈಲ ಬೀಜಗಳಿಗೆ ಹಿಂಗಾರು ಬೆಳೆ ವಿಮಾ ಕಂತಿನ ಮೊತ್ತ ಶೇ.1.5ರಷ್ಟು ಇದ್ದರೆ ಮುಂಗಾರು ಬೆಳೆಗೆ ಈ ಮೊತ್ತ ಶೇ.2ರಷ್ಟಿದೆ. ತೋಟಗಾರಿಕೆ ಮತ್ತು ಹತ್ತಿ  ಬೆಳೆಯ ಎರಡೂ ಸೀಸನ್‍ಗೆ ಶೇ.5ರಷ್ಟು ನಿಗದಿ ಮಾಡಲಾಗಿದೆ. ಸದ್ಯ ಒಟ್ಟಾರೆ ಬಿತ್ತನೆ ಪ್ರದೇಶದ ಶೇ.25ರಿಂದ 27ಕ್ಕೆ ಮಾತ್ರ ವಿಮಾ ಸೌಲಭ್ಯ ಕಲ್ಪಿಸಲಾಗಿದೆ.

ಪಿಎಂಎಫ್ಬಿವೈ ದೇಶದಲ್ಲಿರುವ ಒಟ್ಟಾರೆ ಬಿತ್ತನ ಪ್ರದೇಶ 194.40 ದಶಲಕ್ಷ ಹೆಕ್ಟೇರ್‍ಗೂ ವಿಸ್ತರಿಸಲಾಗಿದೆ. ಇದಕ್ಕೆ ರು.17,600 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ  ಪಿಎಂಎಫ್ಬಿವೈನಲ್ಲಿ ವಿಮಾ ಕಂತಿನ ಮೇಲೆ ಯಾವುದೇ ಮಿತಿ ಇಲ್ಲ ಮತ್ತು ಖಾತರಿಮೊತ್ತದಲ್ಲಿ ಯಾವುದೇ ಕಡಿತ ಮಾಡುವಂತಿಲ್ಲ. ಇದರ ಜೊತೆಗೆ ಕ್ಲೇಮ್ನ ಶೇ.25ರಷ್ಟನ್ನು ನೇರವಾಗಿ ರೈತರ  ಖಾತೆಗೆ ಜಮಾ ಮಾಡಲಾಗು ವುದು . ಒಂದು ರಾಜ್ಯಕ್ಕೆ ಒಂದೇ ವಿಮಾ ಕಂಪನಿ ಇರಲಿದೆ. ಕೃಷಿ ಮಟ್ಟದ ಮೌಲ್ಯೀಕರಣ, ಬೆಳೆ ನಾಶವಾಗಲು ಇದ್ದ ಸ್ಥಳೀಯ ಕಾರಣಗಳು ಮತ್ತು ಕೊಯ್ಲಿನ  ನಂತರ ಆದ ನಷ್ಟವನ್ನು ಇದೇ ಕಂಪನಿ ಮೌಲ್ಯೀಕರ ಣ ಮಾಡಲಾಗಿದೆ ಭಾರತೀಯ ಕೃಷಿ ವಿಮಾ ಕಂಪನಿ ಲಿ. ಜೊತೆಗೆ ಖಾಸಗಿ ಕಂಪನಿಗಳು ಯೋಜನೆಯನ್ನು ಜಾರಿಗೊಳಿಸಲಿವೆ.

ಎಲ್ಲ ಕ್ಲೇಮ್ಗಳು ಕೃಷಿಕರಿಗೆ ಸಂಬಂಧಿಸಿದ್ದು ಆರಂಭಿಕ ಪ್ರೀಮಿಯಂ ಸಹಾಯಧನವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಮುಂಗಾರು ಕೊರತೆಯಿಂದ ಸತತ ಎರಡು ವರ್ಷಗಳಿಂದ ದೇಶ ಬರ ಇರುವ  ಹಿನ್ನಲೆಯಲ್ಲಿ ಈ ಯೋಜನೆ ಪ್ರಮುಖವಾಗಿದೆ. ಕಳೆದ ಎರಡು ವರ್ಷಗಳಿಂದ ಮುಂಗಾರು ಹಿನ್ನಡೆ ಮತ್ತು ಅನಿಯಮಿತ ಮಳೆಯಿಂದ ಬೆಳೆ ನಷ್ಟದಿಂದ ನೂರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.