ಪ್ರಧಾನ ಸುದ್ದಿ

'ಇನ್​ಕ್ರೆಡಿಬಲ್ ಇಂಡಿಯಾ' ನಂತರ ಅಮೀರ್ ಖಾನ್​ಗೆ ಮತ್ತೊಂದು ಶಾಕ್!

ಅಸಹಿಷ್ಣುತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಆಮಿರ್ ಖಾನ್ ಅವರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಎರಡು ದಿನಗಳ ಹಿಂದಷ್ಟೇ ಇನ್​...

'ಇನ್​ಕ್ರೆಡಿಬಲ್ ಇಂಡಿಯಾ' ನಂತರ ಅಮೀರ್ ಖಾನ್​ಗೆ ಮತ್ತೊಂದು ಶಾಕ್!
ಆಮೀರ್ ಖಾನ್
Published On :
ಮುಂಬೈ: ಅಸಹಿಷ್ಣುತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಆಮಿರ್ ಖಾನ್ ಅವರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಎರಡು ದಿನಗಳ ಹಿಂದಷ್ಟೇ ಇನ್​ಕ್ರೆಡಿಬಲ್ ಇಂಡಿಯಾ ರಾಯಭಾರಿ ಸ್ಥಾನದಿಂದ ಕೈಬಿಟ್ಟಿದ್ದ ಕೇಂದ್ರ ಸರ್ಕಾರ ಈಗ ರಸ್ತೆ ಸುರಕ್ಷತಾ ಪ್ರಚಾರಾಂದೋಲನದಿಂದಲೂ ಕೈಬಿಡಲಾಗಿದೆ.
ಟೆಲೆಗ್ರಾಫ್ ವರದಿಯ ಪ್ರಕಾರ, ಅಸಹಿಷ್ಣುತೆ ಕುರಿತ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ 2014 ರಲ್ಲಿ ಅಮೀರ್ ಖಾನ್ ಅವರನ್ನು ರಸ್ತೆ ಸುರಕ್ಷತಾ ಪ್ರಚಾರಾಂದೋಲನದಿಂದಲೂ ಕೈಬಿಡಲಾಗಿದೆ.
ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಪ್ರಸಾರಗೊಂಡ ‘ರಸ್ತೆ ಅಪಘಾತಗಳೋ ಅಥವಾ ಕೊಲೆಗಳೋ?’ಎಂಬ ಕಾರ್ಯಕ್ರಮ ವೀಕ್ಷಿಸಿದ ಬಳಿಕ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಆಮೀರ್ ಖಾನ್ ಅವರನ್ನು ರಸ್ತೆ ಸುರಕ್ಷತಾ ಪ್ರಚಾರಾಂದೋಲನದ ರಾಯಭಾರಿಯನ್ನಾಗಿ 2014 ಡಿಸೆಂಬರ್ ನಲ್ಲಿ ನೇಮಕ ಮಾಡಿದ್ದರು.
ಜನಸಾಮಾನ್ಯರಿಗೆ ಸಂಚಾರದ ಅರಿವು ಮೂಡಿಸಲು ಬ್ಯಾನರ್ ಮತ್ತು ಟಿ ವಿ ಜಾಹೀರಾತಿನಲ್ಲಿ ಅಮೀರ್ ಅವರನ್ನು ಬಿಂಬಿಸಲು ಓಗಿಲ್ವಿ ಮತ್ತು ಮ್ಯಾಥರ್ ಇಂಡಿಯಾ ಜಾಹೀರಾತು ಸಂಸ್ಥೆ ಮುಖ್ಯಸ್ಥ ಪಿಯೂಶ್ ಪಾಂಡೆ ಅವರಿಗೆ ಹೊಣೆಗಾರಿಕೆ ವಹಿಸಿದ್ದರು. ಆದರೆ ಇದೀಗ ಆಮೀರ್ ಬದಲಿಗೆ ಬೇರೆವರಿಗಾಗಿ ಹುಡುಕಾಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.