ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ: ಅಧ್ಯಕ್ಷ ಮ್ಯಾಮ್ನೂನ್ ಹುಸೇನ್
ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದೊಂದಿಗೆ ಸಂಬಂಧ ವೃದ್ಧಿಗೆ ಯತ್ನಿಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಅಧ್ಯಕ್ಷ ಮ್ಯಾನ್ನೂನ್ ಹುಸೇನ್...

Published On :
ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದೊಂದಿಗೆ ಸಂಬಂಧ ವೃದ್ಧಿಗೆ ಯತ್ನಿಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಅಧ್ಯಕ್ಷ ಮ್ಯಾನ್ನೂನ್ ಹುಸೇನ್ ಅವರು, ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ ಎಂದು ಹೇಳಿದ್ದಾರೆ.
ಕಾಶ್ಮೀರಿಗಳಿಗೆ ನಮ್ಮ ದೇಶದ ಬೆಂಬಲ ಮುಂದುವರೆಯಲಿದೆ ಮತ್ತು ಸ್ವಯಂ ನಿರ್ಣಯ ತೆಗೆದುಕೊಳ್ಳುವ ಅವರ ಹಕನ್ನು ಪಾಕಿಸ್ತಾನ ಬೆಂಬಲಿಸಲಿದೆ ಎಂದು ಹುಸೇನ್ ಹೇಳಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ತಮ್ಮನ್ನು ಭೇಟಿಯಾದ ಹುರಿಯತ್ ನಿಯೋಗದೊಂದಿಗೆ ಮಾತನಾಡಿದ ಹುಸೇನ್, ಕಾಶ್ಮೀರ ಮುಗಿಯದ ಅಜೆಂಡಾ ಎಂದರು. ಅಲ್ಲದೆ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯನ್ನು ಭಾರತ ನಿಲ್ಲಿಸಬೇಕು ಎಂದರು.
ಪಾಕಿಸ್ತಾನದಲ್ಲಿರುವ 'ಕೆ' ಎಂಬ ಪದ ಕಾಶ್ಮೀರಕ್ಕಾಗಿ ಬಂದಿದೆ ಮತ್ತು ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ ಎಂದು ಪಾಕಿಸ್ತಾನ ಅಬ್ಸರ್ವರ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


