ಪ್ರಧಾನ ಸುದ್ದಿ

ಆರ್ ಜೆ ಡಿ ಬಿಹಾರದ ಅಧ್ಯಕ್ಷರಾಗಿ ರಾಮ್ ಚರಣ್ ಪೂರ್ವೆ ಆಯ್ಕೆ

ರಾಷ್ಟ್ರೀಯ ಜನತಾ ದಳ ಪಕ್ಷದ ಬಿಹಾರ ರಾಜ್ಯಾಧ್ಯಕ್ಷರಾಗಿ ಶನಿವಾರ ರಾಮ್ ಚಂದ್ರ ಪೂರ್ವೆ ಅವರು ಆಯ್ಕೆಯಾಗಿದ್ದಾರೆ.

ಆರ್ ಜೆ ಡಿ ಬಿಹಾರದ ಅಧ್ಯಕ್ಷರಾಗಿ ರಾಮ್ ಚರಣ್ ಪೂರ್ವೆ ಆಯ್ಕೆ
ರಾಮ್ ಚಂದ್ರ ಪೂರ್ವೆ
Published On :

ಪಾಟ್ನಾ: ರಾಷ್ಟ್ರೀಯ ಜನತಾ ದಳ ಪಕ್ಷದ ಬಿಹಾರ ರಾಜ್ಯಾಧ್ಯಕ್ಷರಾಗಿ ಶನಿವಾರ ರಾಮ್ ಚಂದ್ರ ಪೂರ್ವೆ ಅವರು ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಜನತಾ ದಳದ ಸಂಸ್ಥೆಯ ಚುನಾವಣಾ ಪ್ರಕ್ರಿಯೆ ಕಳೆದ ತಿಂಗಳು ಆರಂಭವಾಗಿತ್ತು. ಈಗ ಈ ಆಯ್ಕೆಯನ್ನು ಪಕ್ಷದ ಮುಖ್ಯ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಎದುರು ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಘೋಷಿಸಿದ್ದಾರೆ.

ಮೂರು ದಶಕಗಳಿಂದ ಸಕ್ರಿಯ ರಾಜಕೀಯದಲ್ಲಿರುವ ಮಿತ ಭಾಷಿ, ಮಾಜಿ ಸಚಿವ ಪೂರ್ವೆ ಅವರನ್ನು ಲಾಲು ಪ್ರಸಾದ್ ಅವರ ನಿಕಟವರ್ತಿ ಎನ್ನಲಾಗಿದೆ.

ಆರ್ ಜೆ ಡಿ ರಾಜ್ಯಾಧ್ಯಕ್ಷರಾಗಿ ಪೂರ್ವೆ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಜನವರಿ ೧೭ ರಂದು ಲಾಲು ಪ್ರಸಾದ್ ಮರು ಆಯ್ಕೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.