ಪ್ರಧಾನ ಸುದ್ದಿ

ಹಾಲು ದರ ರು.4 ಹೆಚ್ಚಳ

ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಗಮನದಲ್ಲಿಟ್ಟುಕೊಂಡು ಹಾಲು ಉತ್ಪಾದಕರಿಗೆ...

ಹಾಲು ದರ ರು.4 ಹೆಚ್ಚಳ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಗಮನದಲ್ಲಿಟ್ಟುಕೊಂಡು ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ `ನಂದಿನಿ' ಹಾಲಿನ ದರವನ್ನು ಲೀಟರ್‍ಗೆ 4 ರು.ಹೆಚ್ಚಿಸಿದೆ.

ಇದರೊಂದಿಗೆ ಮಂಗಳವಾರದಿಂದ `ನಂದಿನಿ' ಹಾಲಿನ ದರ ಲೀಟರ್‍ಗೆ 29 ರಿಂದ 33 ರೂ. ಆಗಲಿದೆ. ಜನವರಿ 5ರಿಂದ ನಂದಿನಿ ಹಾಲಿನ ಹೊಸ ದರ ಜಾರಿಗೆ ಬರಲಿದೆ. ರಾಜ್ಯದ ವಿವಿಧ ಹಾಲು ಉತ್ಪಾದಕ ಒಕ್ಕೂಟಗಳು ಹಾಲು ಉತ್ಪಾದಕರಿಗೆ ಲೀಟರ್‍ಗೆ ಕನಿಷ್ಠ 20 ರಿಂದ 22 ರು.ವರೆಗೆ ನೀಡುತ್ತಿವೆ.

ಜತೆಗೆ ರಾಜ್ಯ ಸರ್ಕಾರ ಲೀಟರ್‍ಗೆ 4 ರು.ಪ್ರೋತ್ಸಾಹ ಧನ ನೀಡುತ್ತಿದೆ. ಈಗ 4 ರು. ದರ ಹೆಚ್ಚಳ ಮಾಡಿರುವುದರಿಂದ ಅದರಲ್ಲಿ ಕನಿಷ್ಠ ರು.2.50 ರಿಂದ 3 ರು.ವರೆಗೆ ಉತ್ಪಾದಕರಿಗೆ ಲಭ್ಯವಾಗಲಿದೆ. ಹೀಗಾಗಿ ಹಾಲು ಉತ್ಪಾದಕರಿಗೆ ಎಲ್ಲಾ ಸೇರಿ ಲೀಟರ್‍ಗೆ 28 ರಿಂದ 30 ರು.ಗಳು ಲಭ್ಯವಾಗುತ್ತಿದೆ. ಸರ್ಕಾರ ನಗರ ಪ್ರದೇಶಕ್ಕೆ ವಿದ್ಯುತ್ ಲೋಡ್ ಶೆಡ್ಡಿಂಗ್ ರದ್ದುಪಡಿಸುವ `ವರ' ನೀಡಿದೆ.

ಇನ್ನೊಂದೆಡೆ ಹಾಲಿನ ದರ ಹೆಚ್ಚಿಸುವ ಮೂಲಕ `ಬರೆ' ಹಾಕಿದೆ. ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ನಿತ್ಯ 6 ರಿಂದ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ, ಹಾಲು ಉತ್ಪಾದಕರಿಗೆ ಅನುಕೂಲ ಆಗುವ ಉದ್ದೇಶ ದಿಂದ ಹಾಲಿನ ದರ ಹೆಚ್ಚಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರ ಓಲೈಕೆಗೆ ಮುಂದಾಗಿರುವುದು ಸ್ಪಷ್ಟವಾಗುತ್ತದೆ.

ವಿಧಾನಸೌಧದಲ್ಲಿ ಶುಕ್ರವಾರ ಸಂಜೆ ಪತ್ರಕರ್ತರ ಜತೆ ಮಾತನಾಡಿದ ಪಶುಸಂಗೋಪನೆ ಸಚಿವ ಎ.ಮಂಜು ಅವರು ಲೀಟರ್ ಹಾಲಿನ ದರವನ್ನು 5 ರು.ಹೆಚ್ಚಿಸುವಂತೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇನ್ನೂ ತೀರ್ಮಾನ ಆಗಿಲ್ಲ ಎಂದಿದ್ದರು. ಆದರೆ ಶುಕ್ರವಾರ ರಾತ್ರಿ ದಿಡಿsೀರನೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಚಿವ ಎ.ಮಂಜು ಹಾಲಿನ ದರ ಹೆಚ್ಚಳ ಆಗಿರುವುದನ್ನು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.