ಪ್ರಧಾನ ಸುದ್ದಿ

ಭಾರತದಲ್ಲಿ ಚೈನಾಗಿಂತಲೂ ಹೆಚ್ಚಿನ ವಾಯುಮಾಲಿನ್ಯ: ಗ್ರೀನ್ ಪೀಸ್ ವರದಿ

೨೦೧೫ರಲ್ಲಿ ಭಾರತದಲ್ಲಿ ವಾಯುಮಾಲಿನ್ಯ ಚೈನಾಗಿಂತಲೂ ಹೆಚ್ಚಿದ್ದು, ೨೧ನೆ ಶತಮಾನದಲ್ಲಿ ಮೊದಲ ಬಾರಿಗೆ ಇದು ಸಂಭವಿಸಿದೆ ಎಂದು ನಾಸಾದ ಸಟಲ್ಲೈಟ್ ಡಾಟ ಪರಿಶೀಲಿಸಿ

ಭಾರತದಲ್ಲಿ ಚೈನಾಗಿಂತಲೂ ಹೆಚ್ಚಿನ ವಾಯುಮಾಲಿನ್ಯ: ಗ್ರೀನ್ ಪೀಸ್ ವರದಿ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ೨೦೧೫ರಲ್ಲಿ ಭಾರತದಲ್ಲಿ ವಾಯುಮಾಲಿನ್ಯ ಚೈನಾಗಿಂತಲೂ ಹೆಚ್ಚಿದ್ದು, ೨೧ನೆ ಶತಮಾನದಲ್ಲಿ ಮೊದಲ ಬಾರಿಗೆ ಇದು ಸಂಭವಿಸಿದೆ ಎಂದು ನಾಸಾದ ಸಟಲ್ಲೈಟ್ ಡಾಟ ಪರಿಶೀಲಿಸಿ ನೀಡಿರುವ ವರದಿಯಲ್ಲಿ ಗ್ರೀನ್ ಪೀಸ್ ಎನ್ ಜಿ ಒ ತಿಳಿಸಿದೆ.

"ಈ ಶತಮಾನದಲ್ಲಿ ಮೊದಲ ಬಾರಿಗೆ ಭಾರತೀಯರು ಚೈನಾ ನಾಗರಿಕರಿಗಿಂತಲೂ ಹೆಚ್ಚಿನ ವಾಯುಮಾಲಿನ್ಯಕ್ಕೆ ಒಡ್ಡಿಕೊಂಡಿದ್ದಾರೆ. ವಾಯುಮಾಲಿನ್ಯ ತಡೆಯಲು ಚೈನಾ ಕೈಗೊಂಡ ಕ್ರಮಗಳಿಂದ ಉಸಿರಾಡುವ ಗಾಳಿಯ ಗುಣಮಟ್ಟ ಹೆಚ್ಚಿದ್ದು, ಕಳೆದ ದಶಕದಲ್ಲಿ ಭಾರತದಲ್ಲಿ ವಾಯುಮಾಲಿನ್ಯ ತೀವ್ರ ಏರಿಕೆ ಕಂಡಿದೆ" ಎಂದು ಗ್ರೀನ್ ಪೀಸ್ ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ೧೩ ರಿಂದ ೨೦ ವಿಶ್ವದ ಅತಿ ಹೆಚ್ಚಿನ ವಾಯುಮಾಲಿನ್ಯ ನಗರಿಗಳಿಗೆ ಭಾರತ ತವರಾಗಿದೆ ಎಂದಿರುವ ಗ್ರೀನ್ ಪೀಸ್, ಇದು ಉತ್ತರ ಭಾರತದಲ್ಲಿ ಅತಿ ಹೆಚ್ಚು ಎಂದಿದೆ.

ವಾಯುಮಾಲಿನ್ಯವನ್ನು ಕಡಿತಗೊಳಿಸಲು ಭಾರತ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿರುವ ಎನ್ ಜಿ ಒ "ಪ್ರಾದೇಶಿಕವಾಗಿ ಹಾಗು ನಗರಗಳಲ್ಲಿ ವಾಯುಮಾಲಿನ್ಯ ತಗ್ಗಿಸಲು ಸಮಗ್ರವಾದ ಅಧ್ಯಯನ ಮತ್ತು ಯೋಜನೆ ಅಗತ್ಯ" ಎಂದು ಕೂಡ ಗ್ರೀನ್ ಪೀಸ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.