ನೇಪಾಳದ ಸ್ಥಿರತೆಗೂ ಭಾರತದ ಭದ್ರತೆಗೂ ಸಂಬಂಧವಿದೆ: ಮೋದಿ
ನೇಪಾಳದ ಸ್ಥಿರತೆಗೂ ಮತ್ತು ಭಾರತದ ಭದ್ರತೆಗೂ ಸಂಬಂಧವಿದೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ನೇಪಾಳದ ಪ್ರಧಾನಿ ಕೆ ಪಿ ಶರ್ಮ ಓಲಿ ಅವರೊಂದಿಗೆ ಶನಿವಾರ ನೀಡಿದ ಜಂಟಿ ಪತ್ರಿಕಾ ಹೇಳಿಕೆಯಲ್ಲಿ
ನವದೆಹಲಿ: ನೇಪಾಳದ ಸ್ಥಿರತೆಗೂ ಮತ್ತು ಭಾರತದ ಭದ್ರತೆಗೂ ಸಂಬಂಧವಿದೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ನೇಪಾಳದ ಪ್ರಧಾನಿ ಕೆ ಪಿ ಶರ್ಮ ಓಲಿ ಅವರೊಂದಿಗೆ ಶನಿವಾರ ನೀಡಿದ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
"ನಿಮ್ಮ ನಾಯಕತ್ವದಲ್ಲಿ ಭಾರತ ಮತ್ತು ನೇಪಾಳದ ಸಂಬಂಧಗಳು ಇನ್ನೂ ಗಟ್ಟಿಯಾಗಿ ಉನ್ನತ ಮಟ್ಟಕ್ಕೆ ಏರಲಿದೆ ಎಂಬ ನಂಬಿಕೆ ನನಗಿದೆ" ಎಂದು ಓಲಿ ಅವರಿಗೆ ಮೋದಿ ಹೇಳಿದ್ದು "ನೇಪಾಳದ ಸ್ಥಿರತೆಗೂ ಮತ್ತು ಭಾರತದ ಭದ್ರತೆಗೂ ಸಂಬಂಧವಿರುವುದು ಸ್ಪಷ್ಟ" ಎಂದಿದ್ದಾರೆ.
"ನಾವು ೭೦೦೦ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಹೈಡ್ರೋ ಯೋಜನೆಯ ಮೇಲೆ ಕೆಲಸ ಮಾಡುತ್ತಿದ್ದು, ಅದು ಆದಷ್ಟು ಬೇಗ ಸಂಪೂರ್ಣಗೊಂಡರೆ ನೇಪಾಳದ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ" ಎಂದು ಬಿಹಾರದ ಮುಜಫರಪುರ ಮತ್ತು ನೇಪಾಳದ ಧಲ್ಕೇಬಾರ್ ನಡುವೆ ವಿದ್ಯುಚ್ಚಕ್ತಿ ಸಂವಹನ ತಂತಿ ಅನಾವರಣದ ವೇಳೆ ಮೋದಿ ಹೇಳಿದ್ದಾರೆ.
"ಭಾರತ ಮತ್ತು ನೇಪಾಳದ ಸಂಬಂಧಗಳಿಗೆ ವ್ಯಾಪಾರ ಮತ್ತು ಹೂಡಿಕೆ ಅಧಾರ ಸ್ಥಂಬಗಳು. ಅವುಗಳನ್ನು ಇನ್ನೂ ಗಟ್ಟಿಪಡಿಸಳು ಸಾಧ್ಯವಿದೆ" ಎಂದು ಪ್ರಧಾನಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

