ಜಮ್ಮು ಕಾಶ್ಮೀರ ಶಾಸಕನ ಮೇಲೆ ಬಲಪಂಥೀಯ ಗುಂಪುಗಳ ಹಲ್ಲೆ
ಜಮ್ಮು ಮತ್ತು ಕಾಶ್ಮೀರದ ಪಕ್ಷೇತರ ಶಾಸಕ ಎಂಜಿನಿಯರ್ ರಶೀದ್ ಅವರ ಮೇಲೆ, ಜಮ್ಮು ಪ್ರದೇಶದ ರಜೌರಿ ಜಿಲ್ಲೆಯಲ್ಲಿ ಶನಿವಾರ ಬಲಪಂಥೀಯ ಗುಂಪುಗಳು ದಾಳಿ ಮಾಡಿವೆ.

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪಕ್ಷೇತರ ಶಾಸಕ ಎಂಜಿನಿಯರ್ ರಶೀದ್ ಅವರ ಮೇಲೆ, ಜಮ್ಮು ಪ್ರದೇಶದ ರಜೌರಿ ಜಿಲ್ಲೆಯಲ್ಲಿ ಶನಿವಾರ ಬಲಪಂಥೀಯ ಗುಂಪುಗಳು ದಾಳಿ ಮಾಡಿವೆ.
"ಭಜರಂಗ ದಳ ಮತ್ತು ವಿ ಎಚ್ ಪಿ ಕಾರ್ಯಕರ್ತರು ರಜೌರಿ ಜಿಲ್ಲೆಯ ಭಾಮ್ಲಾದಲ್ಲಿ ನನ್ನನ್ನು ಕೊಲೆ ಮಾಡುವ ಸಲುವಾಗಿ ಮಾರಣಾಂತಿಕ ಹಲ್ಲೆ ನಡೆಸಿದರು" ಎಂದು ರಶೀದ್ ಹೇಳಿದ್ದಾರೆ.
"ನಾನು ಚಲಿಸುತ್ತಿದ್ದ ವಾಹನದ ಕಿಟಕಿಯನ್ನು ಅವರಿ ಮುರಿದರು. ನನ್ನ ಮೇಲೆ ಮಸಿಯನ್ನು ಎರಚಲು ಕೂಡ ಪ್ರಯತ್ನಿಸಿದರೂ, ಆದರೆ ಅದು ಹಾನಿಗೊಳಗಾದ ವಾಹನದ ಮೇಲೆ ಬಿದ್ದಿತು" ಎಂದು ಶಾಸಕ ವರದಿಗಾರರಿಗೆ ಹೇಳಿದ್ದಾರೆ.
ಕಳೆದ ವರ್ಷ ಶ್ರೀನಗರದ ಶಾಸಕರ ಭವನದಲ್ಲಿ ಭೀಪ್ ಔತಣಕೂಟವನ್ನು ಆಯೋಜಿಸಿದ್ದಕೆ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಅವರ ಮೇಲೆ ಹಲ್ಲೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


