ಪ್ರಧಾನ ಸುದ್ದಿ

ಕನ್ಹಯ್ಯ ಮೈಮೇಲೆ ಹಲವು ಗಾಯದ ಗುರುತುಗಳು: ವೈದ್ಯಕೀಯ ವರದಿ

ದೇಶದ್ರೋಹ ಆರೋಪದ ಮೇಲೆ ದೆಹಲಿ ಪೊಲೀಸರು ಬಂಧಿಸಿರುವ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ಮೇಲೆ ವಕೀಲರು ಪಟಿಯಾಲ ಹೌಸ್ ಕೋರ್ಟ್

ಕನ್ಹಯ್ಯ ಮೈಮೇಲೆ ಹಲವು ಗಾಯದ ಗುರುತುಗಳು: ವೈದ್ಯಕೀಯ ವರದಿ
ಕನ್ಹಯ ಕುಮಾರ್ ಅವರನ್ನು ಕೋರ್ಟ್ ಗೆ ಹಾಜರು ಪಡಿಸಿದ ಸಂದರ್ಭ
Published On :

ನವದೆಹಲಿ: ದೇಶದ್ರೋಹ ಆರೋಪದ ಮೇಲೆ ದೆಹಲಿ ಪೊಲೀಸರು ಬಂಧಿಸಿರುವ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ ಕುಮಾರ್ ಅವರ ಮೇಲೆ ವಕೀಲರು ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ನಡೆಸಿದ ಹಲ್ಲೆಯಿಂದ ಅವರ ಮೈಮೇಲೆ ಹಲವು ಗಾಯದ ಗುರುತುಗಳಿವೆ ಎಂದು ಶುಕ್ರವಾರ ಬಿಡುಗಡೆಯಾದ ವೈದ್ಯಕೀಯ ವರದಿ ತಿಳಿಸಿದೆ.

ಕನ್ಹಯ್ಯ ಕುಮಾರ್ ಅವರ ಮೇಲೆ ಯಾವುದೇ ಹಲ್ಲೆಯಾಗಲಿಲ್ಲ ಎಂಬ ದೆಹಲಿ ಪೊಲೀಸರ ವಾದವನ್ನು ಈ ವರದಿ ಅಲ್ಲಗೆಳೆದಿದೆ.

"ಕುಮಾರ್ ಅವರ ಮೂಗು ಮತ್ತು ತೊಡೆಯ ಮೇಲೆ ಥಳಿತದ ಗುರುತುಗಳಿವೆ. ಅದೂ ಅಲ್ಲದೆ ಬರೆಗಳಂತಹ ಬೇರೆ ಗಾಯದ ಗುರುತುಗಳಿವೆ" ಎಂದು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಪಟಿಯಾಲ ಹೌಸ್ ಕೋರ್ಟ್ ಗೆ ಕನ್ಹಯ್ಯ ಕುಮಾರ್ ಅವರನ್ನು ಹಾಜರು ಪಡಿಸಿದಾಗ ವಕೀಲರ ಒಂದು ವರ್ಗ ಅವರ ಮೇಲೆ ಹಲ್ಲೆ ಮಾಡಿತ್ತು. ಆದರೆ ದೆಹಲಿ ಪೊಲೀಸ್ ಕಮಿಷನರ್ ಬಿ ಎಸ್ ಬಸ್ಸಿ ಈ ಹಲ್ಲೆ ಸುಳ್ಳು ಸೃಷ್ಟಿ ಎಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.