ಮುಜಫರ್ ನಗರ ಗಲಭೆ ಪ್ರಕರಣ: ಕೋರ್ಟ್ ಗೆ ಹಾಜರಾದ ಸಾಧ್ವಿ ಪ್ರಾಚಿ
ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದದ್ದರಿಂದ ಕೋರ್ಟ್ ಕಳುಹಿಸಿದ್ದ ಹಲವಾರು ವಾರಂಟ್ ಗಳ ನಂತರ ಇಂದು ವಿ ಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ,

ಮುಜಫರ್ ನಗರ: ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದದ್ದರಿಂದ ಕೋರ್ಟ್ ಕಳುಹಿಸಿದ್ದ ಹಲವಾರು ವಾರಂಟ್ ಗಳ ನಂತರ ಇಂದು ವಿ ಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ, ೨೦೧೩ರ ಮುಜಫರ್ ನಗರ ಗಲಭೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
೨೦೦೦೦ ರೂ ಬಾಂಡ್ ನೀಡಿ ಮುಂದಿನ ದಿನಾಂಕಕ್ಕೆ ಕೋರ್ಟ್ ಗೆ ಹಾಜರಾಗುತ್ತೇನೆ ಎಂಬ ಮುಚ್ಚಳಿಕೆ ನೀಡಿದ್ದಕ್ಕೆ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ವಾರಂಟ್ ಅನ್ನು ಕೋರ್ಟ್ ಹಿಂತೆಗೆದುಕೊಂಡಿದೆ.
ಈ ಹಿಂದೆ ಡಿಸೆಂಬರ್ ೧೮ ಮತ್ತು ಜನವರಿ ೨೩ ರ ವಿಚಾರಣೆಗೆ ಗೈರುಹಾಜರಾದದ್ದಕ್ಕೆ ಕೋರ್ಟ್ ಸಾಧ್ವಿ ವಿರುದ್ಧ ವಾರಂಟ್ ಹೊರಡಿಸಿತ್ತು.
ಮುಂದಿನ ವಿಚಾರಣೆ ಫೆಬ್ರವರಿ ೨೩ ಕ್ಕೆ ಮುಂದೂಡಲಾಗಿದೆ. ಆಗಸ್ಟ್ ಮತ್ತು ಸೆಪ್ಟಂಬರ್ ೨೦೧೩ರಲ್ಲಿ ನಡೆದ ಮುಜಫರ್ ನಗರ ಗಲಭೆಯಲ್ಲಿ ೬೦ಕ್ಕೂ ಹೆಚ್ಚು ಜನ ಹತ್ಯೆಯಾಗಿದ್ದಲ್ಲದೆ, ೪೦ ಸಾವಿರಕ್ಕೂ ಹೆಚ್ಚು ಜನ ಸ್ಥಳಾಂತರವಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


