ಅರಮನೆ ನಗರಿ ಮೈಸೂರು ಈ ಬಾರಿಯೂ ದೇಶದ ನಂ.1 ಸ್ವಚ್ಛ ನಗರ
ಅರಮನೆ ನಗರಿ ಮೈಸೂರು ಈ ಬಾರಿಯೂ ಭಾರತದ ‘ನಂ. 1 ಸ್ವಚ್ಛ ನಗರ’ಎಂಬ ಕೀರ್ತಿಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ...

Published On :
ನವದೆಹಲಿ: ಅರಮನೆ ನಗರಿ ಮೈಸೂರು ಈ ಬಾರಿಯೂ ಭಾರತದ ‘ನಂ. 1 ಸ್ವಚ್ಛ ನಗರ’ಎಂಬ ಕೀರ್ತಿಗೆ ಪಾತ್ರವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ್ ಅಭಿಯಾನದಡಿ ಸುಮಾರು 73 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ ಕರ್ನಾಕಟದ ಮೈಸೂರು ಮೊದಲ ಸ್ಥಾನ, ಚಂಡೀಗಢ್ ಎರಡನೇ ಸ್ಥಾನ ಪಡೆದರೆ, ತಮಿಳುನಾಡಿನ ತಿರುಚಿರಾಪಳ್ಳಿ ಮೂರನೇ ಸ್ಥಾನ ಪಡೆದುಕೊಂಡಿದೆ. ದೆಹಲಿ ನಂತರದ ಸ್ಥಾನದಲ್ಲಿರುವುದಾಗಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಲ್ಲದೆ ಸ್ವಚ್ಛರಾಜಧಾನಿ ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ ಲಭಿಸಿದೆ ಎಂದು ನಾಯ್ಡು ಹೇಳಿದರು.
ದೇಶದ ಸ್ವಚ್ಛ ನಗರಗಳ ಟಾಪ್ 10 ಪಟ್ಟಿಯಲ್ಲಿ 1)ಕರ್ನಾಟಕದ ಮೈಸೂರು, 2)ಚಂಡೀಗಢ್, 3)ತಮಿಳುನಾಡಿನ ತಿರುಚಿರಾಪಳ್ಳಿ, 4)ನವದೆಹಲಿಯ ಮುನ್ಸಿಪಲ್ ಕಾರ್ಫೋರೇಶನ್, 5)ವಿಶಾಖಪಟ್ಟಣಂ, 6)ಗುಜರಾತ್ ನ ಸೂರತ್, 7)ರಾಜ್ ಕೋಟ್, 8)ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್, 9)ಚಿಂಡ್ವಾಡ್ ಮತ್ತು 10) ಮಹಾರಾಷ್ಟ್ರದ ಗ್ರೇಟರ್ ಮುಂಬೈ ಸೇರಿದೆ. ಕೊಳಕು ನಗರಗಳ ಪಟ್ಟಿಯಲ್ಲಿ ಜಾರ್ಖಂಡ್ ನ ದನ್ ಭಾದ್ ಗೆ ಪ್ರಥಮ ಸ್ಥಾನ
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ದೇಶದಲ್ಲಿ 65ನೇ ಸ್ವಚ್ಚನಗರಿಯ ಸ್ಥಾನ ಸಿಕ್ಕಿದೆ ಎಂದು ವರದಿ ವಿವರಿಸಿದೆ.
ಕಳೆದ ಬಾರಿಯೂ ಭಾರತದ 476 ನಗರಗಳಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಅರಮನೆ ನಗರಿ ಮೈಸೂರು ಪ್ರಥಮ ಸ್ಥಾನ ಪಡೆದಿತ್ತು. 2014ರ ನಂತರ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛಭಾರತ್ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಶೌಚಾಲಯ ವ್ಯವಸ್ಥೆ ಮತ್ತು ಸ್ವಚ್ಛತೆಯ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


