ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಿ: ಬೆಂಗಳೂರು ಉದ್ಯಮಿಗಳಿಗೆ ಗುಜರಾತ್ ಆಹ್ವಾನ
ಗುಜರಾತ್ ಪ್ರವಾಸಿ ಕ್ಷೇತ್ರಕ್ಕೆ ಕೈಗಾರಿಕೆಯ ಮಾನ್ಯತೆ ನೀಡಿ ಹೊಸ ಪ್ರವಾಸೋದ್ಯಮ ನೀತಿ ಪ್ರಕಟಿಸಿದ್ದು, ಗುಜರಾತ್ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಿ...

Published On :
ಬೆಂಗಳೂರು: ಗುಜರಾತ್ ಪ್ರವಾಸಿ ಕ್ಷೇತ್ರಕ್ಕೆ ಕೈಗಾರಿಕೆಯ ಮಾನ್ಯತೆ ನೀಡಿ ಹೊಸ ಪ್ರವಾಸೋದ್ಯಮ ನೀತಿ ಪ್ರಕಟಿಸಿದ್ದು, ಗುಜರಾತ್ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಿ ಎಂದು ಗುಜರಾತ್ ಸರ್ಕಾರ ಭಾನುವಾರ ಬೆಂಗಳೂರಿನ ಉದ್ಯಮಿಗಳಿಗೆ ಮನವಿ ಮಾಡಿದೆ.
ನಗರದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಗುಜರಾತ್ ಪ್ರವಾಸೋದ್ಯಮ ಸಚಿವ ಸೌರಭ್ಭಾಯಿ ಪಟೇಲ್, ಪ್ರಸಿದ್ಧ ಐತಿಹಾಸಿಕ ಸ್ಥಳ, ಸಮುದ್ರತೀರ ಮತ್ತು ಪಾರಂಪರಿಕ ತಾಣಗಳನ್ನು ಹೊಂದಿರುವ ಗುಜರಾತ್ ನಲ್ಲಿ ಬಂಡವಾಳ ಹೂಡಿಕೆ ಮಾಡುವ ಕಂಪನಿಗಳಿಗೆ 50 ಬಗೆಯ ತೆರಿಗೆ ರಿಯಾಯ್ತಿ ಮತ್ತು ವಿನಾಯ್ತಿ ಸೌಲಭ್ಯ ನೀಡಲಾಗುತ್ತದೆ ಎಂದರು.
ಹೆರಿಟೇಜ್, ಸಮುದ್ರ ತೀರ, ವಾಟರ್ಸ್ಪೋರ್ಟ್್ಸ ಕೆಫೆಟ್ರಿಯಾ, ಹೊಟೇಲ್ ಸೇರಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಯೋಜನೆಗಳಲ್ಲಿ ಬಂಡವಾಳ ಹೂಡಲು ಗುಜರಾತ್ನಲ್ಲಿ ಅವಕಾಶವಿದೆ. ಹೂಡಿಕೆ ಮಾಡುವ ಕಂಪನಿಗಳಿಗೆ ಬಂಡವಾಳ ಸಬ್ಸಿಡಿ, ಬಡ್ಡಿ ಸಬ್ಸಿಡಿ, ನೋಂದಣಿ ಶುಲ್ಕದಲ್ಲಿ ರಿಯಾಯಿತಿ, ವಿಲಾಸಿ ತೆರಿಗೆ, ಮನರಂಜನೆ ತೆರಿಗೆ ರಿಯಾಯಿತಿ ಸೇರಿ ಒಟ್ಟು 50 ರೀತಿಯ ತೆರಿಗೆ ವಿನಾಯಿತಿ ಸೌಲಭ್ಯಗಳನ್ನು ಗುಜರಾತ್ ಸರ್ಕಾರ ನೀಡಲಿದೆ ಎಂದು ವಿವರಿಸಿದರು.
2015-ಗುಜರಾತ್ ಪ್ರವಾಸೋದ್ಯಮ ನೀತಿ ಕುರಿತು ಹೆಚ್ಚು ಪ್ರಚಾರ ಮಾಡಲು ಮಾರ್ಚ್ನಲ್ಲಿ ಬೆಂಗಳೂರು, ನವದೆಹಲಿ, ಮುಂಬೈ ಸೇರಿ ದೇಶದ ಪ್ರಮುಖ ನಗರಗಳಲ್ಲಿ ರೋಡ್ಷೋನಡೆಸಲಾಗುವುದು. ಪ್ರವಾಸೋದ್ಯಮ ನೀತಿ 2015ರಿಂದ 2020ರ ಮಾ. 31ರವರೆಗೆ ಜಾರಿಯಲ್ಲಿರುತ್ತದೆ. ಅಷ್ಟರೊಳಗೆ ಜಾರಿಯಾಗುವ ಯೋಜನೆಗಳಿಗೆ ಭಾರಿ ಉತ್ತೇಜನ ನೀಡಲಾಗುತ್ತದೆ ಎಂದು ಸೌರಭ್ಭಾಯಿ ಪಟೇಲ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


