ಪ್ರಧಾನ ಸುದ್ದಿ

ಗುಜರಾತ್ ನಲ್ಲಿ ಎನ್ ಕೌಂಟರ್ ಆದ ಇಶ್ರತ್ ಜಹಾನ್ ಮಾನವ ಬಾಂಬರ್: ಹೆಡ್ಲಿಯಿಂದ ಸ್ಫೋಟಕ ಮಾಹಿತಿ

ಗುಜರಾತ್ ನಲ್ಲಿ ಎನ್ ಕೌಂಟರ್ ಆಗಿರುವ ಇಶ್ರತ್ ಜಹಾನ್ ಉಗ್ರ ಸಂಘಟನೆಯ ಮಾನವ ಬಾಂಬರ್ ಆಗಿದ್ದಳು ಎಂದು ಡೇವಿಡ್...

ಗುಜರಾತ್ ನಲ್ಲಿ ಎನ್ ಕೌಂಟರ್ ಆದ ಇಶ್ರತ್ ಜಹಾನ್ ಮಾನವ ಬಾಂಬರ್: ಹೆಡ್ಲಿಯಿಂದ ಸ್ಫೋಟಕ ಮಾಹಿತಿ
ಇಶ್ರತ್ ಜಹಾನ್-ಡೇವಿಡ್ ಹೆಡ್ಲಿ
Published On :
ಮುಂಬೈ: ಗುಜರಾತ್ ನಲ್ಲಿ ಎನ್ ಕೌಂಟರ್ ಆದ ಇಶ್ರತ್ ಜಹಾನ್ ಉಗ್ರ ಸಂಘಟನೆಯ ಮಾನವ ಬಾಂಬರ್ ಆಗಿದ್ದಳು ಎಂದು ಡೇವಿಡ್ ಹೆಡ್ಲಿ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾನೆ. 
ಲಷ್ಕರ್ ಉಗ್ರ ಸಂಘಟನೆ ಸದಸ್ಯಳಾಗಿದ್ದ ಇಶ್ರತ್ ಜಹಾನ್ ಬಗ್ಗೆ ಲಷ್ಕರ್ ಭಯೋತ್ಪಾದಕ ಝಕಿ ಉರ್ ರಹಮಾನ್ ಲಖ್ವಿ ಹೇಳಿದ್ದನು. ಇಶ್ರತ್ ಲಷ್ಕರ್ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಅಲ್ಲದೇ, ಆಕೆಯ ಚಟುವಟಿಕೆ ಬಗ್ಗೆ ಲಖ್ವಿ ನನಗೆ ಹೇಳಿದ್ದನು ಎಂದು ಹೆಡ್ಲಿ ತಿಳಿಸಿದ್ದಾನೆ. 
ಮುಂಬೈ ಮೂಲದ ಯುವತಿ ಇಶ್ರಾತ್ ಜಹಾನ್(19), ಪ್ರಾಣೇಶ್ ಪಿಲೈ, ಜಿಶನ್ ಜೋಹಾರ್, ಅಮ್ಜದ್ ಅಲಿ ರಾಣಾ ಎಂಬುವರನ್ನು ಗುಜರಾತ್ ನ ಅಹಮದಾಬಾದ್ ಮತ್ತು ಗಾಂಧಿನಗರದ ಮಧ್ಯೆ ಜೂನ್ 15, 2004ರಲ್ಲಿ ಅಹಮದಾಬಾದ್ ನಗರ ಅಪರಾಧ ದಳ ಎನ್‌ಕೌಂಟರ್ ಮಾಡಿತ್ತು. 
ಅಹಮದಾಬಾದ್‌ನ ಹೊರವಲಯದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಕಾರಣ ನೀಡಿ ಇಶ್ರಾತ್ ಜಹಾನ್ ಸೇರಿದಂತೆ ಮೂವರನ್ನು ಕ್ರೈಂ ಬ್ರಾಂಚ್ ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಈ ಎನ್ ಕೌಂಟರ್ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. 2009ರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ಅಮಿತ್ ಶಾಗೆ ಕ್ಲೀನ್ ಚಿಟ್ ನೀಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.