ಪ್ರಧಾನ ಸುದ್ದಿ

ಸಾರ್ವಜನಿಕ ಮೂತ್ರ ವಿಸರ್ಜನೆ ಅಸಭ್ಯ, ಆದರೆ ಮಹಿಳೆಯರ ಸಂಕೋಚ ಸ್ವಭಾವಕ್ಕೆ ಧಕ್ಕೆ ಇಲ್ಲ: ಕೋರ್ಟ್

ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು ಅಸಭ್ಯವೇ ಆಗಿದ್ದರೂ ಇದರಿಂದ ಮಹಿಳೆಯರ ಸಂಕೋಚ ಸ್ವಭಾವಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

ಸಾರ್ವಜನಿಕ ಮೂತ್ರ ವಿಸರ್ಜನೆ ಅಸಭ್ಯ, ಆದರೆ ಮಹಿಳೆಯರ ಸಂಕೋಚ ಸ್ವಭಾವಕ್ಕೆ ಧಕ್ಕೆ ಇಲ್ಲ: ಕೋರ್ಟ್
ಗುಜರಾತ್ ಹೈಕೋರ್ಟ್ (ಸಂಗ್ರಹ ಚಿತ್ರ)
Published On :

ಅಹಮದಾಬಾದ್: ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು ಅಸಭ್ಯವೇ ಆಗಿದ್ದರೂ ಇದರಿಂದ ಮಹಿಳೆಯರ ಸಂಕೋಚ ಸ್ವಭಾವಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಟೀ ಮಾರಾಟ ಮಾಡುವ ಉಷಾಬೆನ್ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. " ಶಾಮ್ ಸುಂದರ್ ಗೋರೆ ಎಂಬ ವ್ಯಕ್ತಿಯೊಬ್ಬ ತನಗೆ ಅಪಮಾನ ಮಾಡಲು (ಮುಜುಗರ) ಉಂಟಾಗುವಂತೆ ಮಾಡಲು ತನ್ನ ಟೀ ಅಂಗಡಿಯ ಬಳಿ ಮೂತ್ರ ವಿಸರ್ಜನೆಗೆ ಮುಂದಾಗಿದ್ದ ಎಂದು ಆರೋಪಿಸಿ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.   
ದೂರಿನ ವಿಚಾರಣೆ ನಡೆಸಿದ ನ್ಯಾ.ಜೆಬಿ ಪಾರ್ಡಿವಾಲ, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು ಅಸಭ್ಯವೇ ಆಗಿದ್ದರೂ ಮಹಿಳೆಯರ ಸಂಕೋಚ ಸ್ವಭಾವಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಹೇಳುವ ಮೂಲಕ ಆರೋಪಿ ಮೇಲೆ ಸೆಕ್ಷನ್ 354 ರ ಅಡಿಯಲ್ಲಿ ದಾಖಲಾಗಿದ್ದ ಆರೋಪವನ್ನು ರದ್ದುಗೊಳಿಸಿದ್ದಾರೆ. ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿದ್ದ ತಾಯಿಯನ್ನು ನೋಡಲು ತೆರಳುತ್ತಿದ್ದ ವೇಳೆ ಶಾಮ್ ಸುಂದರ್ ಗೋರೆ ಮಾರ್ಗ ಮಧ್ಯದಲ್ಲಿ ವಾಹನ ನಿಲ್ಲಿಸಿ ಉಷಾಬೆನ್ ಅವರ ಟೀ ಅಂಗಡಿಯ ಬಳಿ  ಮೂತ್ರ ವಿಸರ್ಜನೆ ಮಾಡಿದ್ದ. ಈ ಬಗ್ಗೆ ಉಷಾಬೆನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ತನಗೆ ಮುಜುಗರ ಉಂಟಾಗಿದೆ ಎಂದು  ಕೋರ್ಟ್ ಮೆಟ್ಟಿಲೇರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.