ಪ್ರಧಾನ ಸುದ್ದಿ

ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ನಜೀಬ್ ಜಂಗ್ ದಿಢೀರ್ ರಾಜೀನಾಮೆ

ಅಚ್ಚರಿಯ ನಡೆಯಲ್ಲಿ, ನಜೀಬ್ ಜಂಗ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ನಜೀಬ್ ಜಂಗ್ ದಿಢೀರ್ ರಾಜೀನಾಮೆ
ನಜೀಬ್ ಜಂಗ್
Published On :
ನವದೆಹಲಿ: ಅಚ್ಚರಿಯ ನಡೆಯಲ್ಲಿ, ನಜೀಬ್ ಜಂಗ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. 
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವಾಗ ನೀಡಿದ ಎಲ್ಲ ಸಹಕಾರಕ್ಕಾಗಿ ನಜೀಬ್ ಗೌರವಾನ್ವಿತ ಪ್ರಧಾನಿಯವರಿಗೆ ಧನ್ಯವಾದ ಹೇಳಿದ್ದಾರೆ. 
ಯಾವಾಗಲೂ ಅದರಲ್ಲೂ ದೆಹಲಿಯಲ್ಲಿ ಹೇರಲಾಗಿದ್ದ ಒಂದು ವರ್ಷದ ರಾಷ್ಟ್ರಪತಿ ಆಡಳಿತದ ಸಮಯದಲ್ಲಿ ನೀಡಿದ ಬೆಂಬಲ ಮತ್ತು ಪ್ರೀತಿಗಾಗಿ ದೆಹಲಿಯ ಜನರಿಗೆ ನಜೀಬ್ ಧನ್ಯವಾದ ಹೇಳಿದ್ದಾರೆ. ಇದರಿಂದ ದೆಹಲಿ ಆಡಳಿತವನ್ನು ಸರಾಗವಾಗಿ ನಡೆಸಲು ಸಾಧ್ಯವಾಗಿದ್ದಾಗಿ ತಿಳಿಸಿದ್ದಾರೆ. 
ಕಳೆದ ಎರಡು ವರ್ಷಗಳಿಂದ ತಮ್ಮ ಸಹಯೋಗಕ್ಕೆ ಗೌರವಾನ್ವಿತ ದೆಹಲಿ ಮುಖ್ಯಮಂತ್ರಿಯವರಿಗೂ ಧನ್ಯವಾದ ಹೇಳಿದ್ದಾರೆ ಜಂಗ್. 
ತಮ್ಮ ಮೊದಲ ಪ್ರೀತಿಯ ಅಧ್ಯಯನ ಕ್ಷೇತ್ರಕ್ಕೆ ಹಿಂದಿರುಗುವುದಾಗಿ ಜಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.