ಪ್ರಧಾನ ಸುದ್ದಿ

ನೋಟು ನಿಷೇಧ: ಕೇಂದ್ರಕ್ಕೆ 'ಸೂಕ್ಷ್ಮತೆ' ಇದೆ; ಮಧ್ಯಂತರ ಆದೇಶಕ್ಕೆ ಸುಪ್ರೀಂ ನಕಾರ

ಅಮಾನ್ಯಗೊಂಡಿರುವ ಹಳೆಯ ನೋಟುಗಳನ್ನು ಕನಿಷ್ಠ ಪಕ್ಷ ಅಗತ್ಯ ಸೇವೆ, ಔಷಧ ಸೇವೆಗಳಿಗೆ ಬಳಸಲು ಅವಕಾಶ ನೀಡಿ ಮಧ್ಯಂತರ ಆದೇಶ ಹೊರಡಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ ಇದರ

ನೋಟು ನಿಷೇಧ: ಕೇಂದ್ರಕ್ಕೆ 'ಸೂಕ್ಷ್ಮತೆ' ಇದೆ; ಮಧ್ಯಂತರ ಆದೇಶಕ್ಕೆ ಸುಪ್ರೀಂ ನಕಾರ
ಸುಪ್ರೀಂ ಕೋರ್ಡ್
Published On :
ನವದೆಹಲಿ: ಅಮಾನ್ಯಗೊಂಡಿರುವ ಹಳೆಯ ನೋಟುಗಳನ್ನು ಕನಿಷ್ಠ ಪಕ್ಷ ಅಗತ್ಯ ಸೇವೆ, ಔಷಧ ಸೇವೆಗಳಿಗೆ ಬಳಸಲು ಅವಕಾಶ ನೀಡಿ ಮಧ್ಯಂತರ ಆದೇಶ ಹೊರಡಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟಿದೆ. 
ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಸೂಕ್ಷ್ಮವಾಗಿದೆ ಎಂದು ಗಮನಿಸಿರುವ, ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕುರ್ ಒಳಗೊಂಡ ನ್ಯಾಯಪೀಠ, ಜನರು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಸಮಯದಿಂದ ಸಮಯಕ್ಕೆ ತಕ್ಕ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದಿದೆ. 
ಯಾವುದೇ ಮಧ್ಯಂತರ ಆದೇಶ ಹೊರಡಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ನವೆಂಬರ್ ೮ ರ ನೋಟು ಹಿಂಪಡೆತ ನಿರ್ಧಾರವನ್ನು ವಿರೋಧಿಸಿ ಮತ್ತು ಅದರಿಂದ ಉಂಟಾಗಿರುವ ತೊಂದರೆಗಳ ಬಗ್ಗೆ ಬಂದಿರುವ ಪ್ರಕರಣಗಳು ಐದು ನ್ಯಾಯಾಧೀಶರ ನ್ಯಾಯ ಪೀಠದ ಮುಂದೆ ವಿಚಾರಣೆ ನಡೆಯುತ್ತಿರುವುದಾಗಿ ಹೇಳಿದೆ. 
ಹಾಗೆಯೇ ನವೆಂಬರ್ ೮ ರ ನೋಟು ಹಿಂಪಡೆತ ನಿರ್ಧಾರದ ವಿರುದ್ಧ ಮತ್ತು ಆ ಸಂಬಂಧಿ ಹೈಕೋರ್ಟ್ ಮತ್ತು ಕೆಳಗಿನ ಕೋರ್ಟ್ ಗಳಲ್ಲಿ ಹೂಡಿರುವ ವ್ಯಾಜ್ಯಗಳಿಗೆ ತಡೆ ನೀಡಿದ್ದು, ಅವೆಲ್ಲವನ್ನು ಅಪೆಕ್ಸ್ ನ್ಯಾಯಾಲಯಕ್ಕೆ ಹಸ್ತಾಂತರ ಮಾಡಬೇಕೆಂದು ಕೂಡ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. 
ಆದುದರಿಂದ ಬೇರೆ ಯಾವುದೇ ಕೋರ್ಟ್ ನೋಟು ಹಿಂಪಡೆತ ನಿರ್ಧಾರದ ವಿರುದ್ಧ ಹಾಕಿದ್ದ ಅರ್ಜಿಯನ್ನು ವಿಚಾರಣೆ ಮಾಡುವುದಕ್ಕೆ ತಡೆಯೊಡ್ಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.