ಪ್ರಧಾನಿ ಕಚೇರಿ ಮತ್ತು ಗವರ್ನರ್ ಅಧಿಕಾರಿಗಳನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ: ಕೇಜ್ರಿವಾಲ್
ದೆಹಲಿಯ ಐಎಎಸ್ ಅಧಿಕಾರಿಗಳನ್ನು ಪ್ರಧಾನಿ ಮಂತ್ರಿ ಕೆರಳಿಸುತ್ತಾರೆ ಹಾಗೂ ಅವರಿಗೆ ಬೆದರಿಕೆಯೊಡ್ಡುತ್ತಾರೆ, ಲೆಫ್ಟಿನೆಂಟ್ ಗವರ್ನರ್ ನನ್ನ ಸರ್ಕಾರದ ವಿರುದ್ಧ ...

ನವದೆಹಲಿ: ದೆಹಲಿಯ ಐಎಎಸ್ ಅಧಿಕಾರಿಗಳನ್ನು ಪ್ರಧಾನಿ ಮಂತ್ರಿ ಕೆರಳಿಸುತ್ತಾರೆ ಹಾಗೂ ಅವರಿಗೆ ಬೆದರಿಕೆಯೊಡ್ಡುತ್ತಾರೆ, ಲೆಫ್ಟಿನೆಂಟ್ ಗವರ್ನರ್ ನನ್ನ ಸರ್ಕಾರದ ವಿರುದ್ಧ ದಂಗೆಯೇಳುತ್ತಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನಜೀಬ್ ಜಂಗ್ ಮತ್ತು ಐಎಎಸ್ ಅಧಿಕಾರಿಗಳನ್ನು ದಾಳಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಇತ್ತೀಚೆಗೆ ಐಎಎಸ್ ಅಧಿಕಾರಿಗಳ ಸಂಘ ದೆಹಲಿ ಸರ್ಕಾರದ ರಾಜಕಾರಣಿಗಳ ದರ್ವರ್ತನೆ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಭ್ರಷ್ಟರು ಹಾಗೂ ಅಸಮರ್ಥರು ತಮ್ಮ ನೈಜರೂಪ ಮರೆ ಮಾಚಲು ಈ ವೇದಿಕೆ ಸೃಷ್ಟಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಭ್ರಷ್ಟಾಚಾರ ವಿರೋಧಿ ದಳ, ಪೊಲೀಸ್ ಹಾಗೂ ಸಿಬಿಐ ನಿಂದ ಐಎಎಸ್ ಅಧಿಕಾರಿಗಳು ಬೆದರಿಕೆಗೊಳಪಟ್ಟಿದ್ದು, ನನ್ನ ವಿರುದ್ಧ ದಂಗೆ ಏಳುವಂತೆ ಅವರಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಅವರೆಲ್ಲಾ ಹಣ ತೆಗೆದು ಕೊಂಡಿದ್ದಾರೆ. ಅವರನ್ನು ನನ್ನ ವಿರುದ್ಧ ಮಾತನಾಡುವಂತೆ ಬಲವಂತ ಮಾಡಲಾಗುತ್ತಿದೆ. ಪ್ರಧಾನಿ ಮಂತ್ರಿಗಳ ಕಾರ್ಯಾಲಯದ ಆದೇಶದಂತೆ ಗವರ್ನರ್ ನಜೀಬ್ ಜಂಗ್ ಕೆಲಸ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಆಪಾದಿಸಿದ್ದಾರೆ.
ನರೇಂದ್ರ ಮೋದಿ ಯಾವತ್ತೂ ನೇರವಾಗಿ ರಾಜಕೀಯ ಮಾಡುವುದಿಲ್ಲ, ಐಎಎಸ್ ಅಧಿಕಾರಿಗಳು ಹಾಗೂ ನಜೀಬ್ ಜಂಗ್ ಅವರ ಭುಜದ ಮೇಲೆ ಗನ್ ಇಟ್ಟು ಹಿಂದಿನಿಂದ ಶೂಟ್ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


