ಲಷ್ಕರ್ ಹಿರಿಯ ಕಮಾಂಡರ್ ಸೇರಿದಂತೆ ಜಮ್ಮು ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ
ಭದ್ರತಾ ಪಡೆಗಳ ಜೊತೆಗೆ ನಡೆದ ಎರಡು ವಿಭಿನ್ನ ಎನ್ಕೌಂಟರ್ ಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

Published On :
ಶ್ರೀನಗರ: ಭದ್ರತಾ ಪಡೆಗಳ ಜೊತೆಗೆ ನಡೆದ ಎರಡು ವಿಭಿನ್ನ ಎನ್ಕೌಂಟರ್ ಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಅನಂತನಾಗ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಈ ಎನ್ಕೌಂಟರ್ ನಡೆದಿದೆ. ಅನಂತನಾಗ್ ಜಿಲ್ಲೆಯ ಶ್ರೀಗುಫ್ವರದಲ್ಲಿ ಬೆಳಗ್ಗೆ ಸೇನೆಯ ಗಸ್ತು ಪಡೆಯ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಸೇನೆ ಪ್ರತಿಕ್ರಯಿಸಿದ್ದರಿಂದ, ಬಸಿತ್ ಅಹ್ಮದ್ ದರ್ ಎಂದು ಗುರುತಿಸಲಾಗಿರುವ ಭಯೋತ್ಪಾದಕ ಹತ್ಯೆಯಾಗಿದ್ದಾನೆ.
ದರ್ ಇತೀಚೆಗಷ್ಟೇ ಹಿಜಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆ ಸೇರಿದ್ದ.
ಮತ್ತೊಂದು ಎನ್ಕೌಂಟರ್ ನಲ್ಲಿ ವಿದೇಶಿ ಭಯೋತ್ಪಾದಕ ಎಂದು ನಂಬಲಾದ ಒಬ್ಬನನ್ನು ಬಾರಾಮುಲ್ಲಾ ಜಿಲ್ಲೆಯ, ಸೋಪೋರ್ ನ ಬೊಮೈನಲ್ಲಿ ಹತ್ಯೆಗೈಯ್ಯಲಾಗಿದೆ.
ಇವನ ಗುರುತು ಮತ್ತು ಇವನು ಸೇರಿದ ಭಯೋತ್ಪಾದಕ ಸಂಘಟನೆಯ ಗುರುತು ಇನ್ನು ಸಿಗಬೇಕಿದೆ.
ಆದರೆ ಪೊಲೀಸ್ ಮೂಲಗಳ ಪ್ರಕಾರ ಹತ್ಯೆಯಾದ ಭಯೋತ್ಪಾದಕ, ಲಷ್ಕರ್ ಎ ತೈಬಾದ ಹಿರಿಯ ಕಮಾಂಡರ್ ಅಬು ಬಕರ್ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
militantLashkar-e-ToibaHizbul Mujahideenಲಷ್ಕರ್ ಎ ತೈಬಾಹಿಜಬುಲ್ ಮುಜಾಹಿದೀನ್Abu BakarBasit Ahmad Darಬಸಿತ್ ಅಹ್ಮದ್ ದರ್ಅಬು ಬಕರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


