ಪ್ರಧಾನ ಸುದ್ದಿ

ಸುಷ್ಮಾ ಸ್ವರಾಜ್ ವೇಗವಾಗಿ ಗುಣಮುಖರಾಗುತ್ತಿದ್ದಾರೆ: ವೈದ್ಯ

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ಯಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ವೇಗವಾಗಿ ಗುಣಮುಖರಾಗುತ್ತಿದ್ದಾರೆ

ಸುಷ್ಮಾ ಸ್ವರಾಜ್ ವೇಗವಾಗಿ ಗುಣಮುಖರಾಗುತ್ತಿದ್ದಾರೆ: ವೈದ್ಯ
ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್
Published On :
ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ಯಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ವೇಗವಾಗಿ ಗುಣಮುಖರಾಗುತ್ತಿದ್ದಾರೆ ಎಂದು ಹಿರಿಯ ವೈದ್ಯ ಮಂಗಳವಾರ ಹೇಳಿದ್ದಾರೆ. 
"ಸಚಿವೆ ವೇಗವಾಗಿ ಗುಣಮುಖರಾಗುತ್ತಿದ್ದು, ಅವರನ್ನು ಆಸ್ಪತ್ರೆಯಿಂದ ಕಳುಹಿಸಲು ಕನಿಷ್ಠ ಒಂದು ವಾರವಾದರೂ ಅಗತ್ಯವಿದೆ. ಅವರ ಸ್ಥಿತಿಯನ್ನು ನಮ್ಮ ವೈದ್ಯ ಸಮೂಹ ಪರಿಶೀಲಿಸುತ್ತಿದೆ" ಎಂದು ಹಿರಿಯ ಜಿಜೆಪಿ ಮುಖಂಡರಿಗೆ ಕಿಡ್ನಿ ಕಸಿ ಮಾಡಿದ ವೈದ್ಯ ತಂಡದ ಹಿರಿಯ ವೈದ್ಯರು ಹೇಳಿದ್ದಾರೆ. 
ಎಐಐಎಂಎಸ್ ನಿರ್ದೇಶಕ ಎಂ ಸಿ ಮಿಶ್ರಾ ಅವರ ನೇತೃತ್ವದಲ್ಲಿ, ಹಿರಿಯ ವೈದ್ಯರಾದ ಎಂ ಮಿನ್ಜ್, ವಿ ಕೆ ಬನ್ಸಲ್ ಮತ್ತು ಪೀಟರ್ ಮೊಹಿಂದರ್ ಸಿಂಗ್ ಅವರನ್ನು ಒಳಗೊಂಡಂತೆ ೫೦ ಜನರ ವೈದ್ಯಕೀಯ ಸಿಬ್ಬಂದಿ ನೆರವಿನಿಂದ ಡಿಸೆಂಬರ್ ೧೦ ರಂದು ಸುಶ್ಮಾ ಸ್ವರಾಜ್ ಅವರಿಗೆ ಕಿಡ್ನಿ ಕಸಿ ಮಾಡಲಾಗಿತ್ತು. ಅವರ ಸಂಭಂದವಲ್ಲದವರು ಸುಶ್ಮಾ ಅವರಿಗೆ ಕಿಡ್ನಿ ದಾನ ಮಾಡಿದ್ದರು.
ಈ ಮೂರು ಘಂಟೆಗಳ ಶಸ್ತ್ರಚಿಕಿತ್ಸೆಯನ್ನು ಕಾರ್ಡಿಯೋ ಥೋರಾಸಿಕ್ ಮತ್ತು ನ್ಯೂ ಸೈನ್ಸಸ್ ಕೇಂದ್ರದಲ್ಲಿ ನಿರ್ವಹಿಸಲಾಗಿತ್ತು. ಕೆಲವು ತಿಂಗಳುಗಳಿಂದ ಎಐಐಎಂಎಸ್ ಗೆ ಭೇಟಿ ನೀಡುತ್ತಿದ್ದ ೬೪ ವರ್ಷದ ಸಚಿವರನ್ನು ನವೆಂಬರ್ ೭ ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.