ಹತ್ಯೆಯಾದ ಬುರ್ಹಾನ್ ವಾನಿ ಸಹೋದರನಿಗೆ ಪರಿಹಾರ ಘೋಷಿಸಿದ ಕಾಶ್ಮೀರ ಸರ್ಕಾರ
ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯ ಬುರ್ಹಾನ್ ವಾನಿ ಸಹೋದರ ಒಳಗೊಂಡಂತೆ, ಕಣಿವೆಯಲ್ಲಿ ವಿವಿಧ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಘಟನೆಗಳಲ್ಲಿ ಹತ್ಯೆಯಾದ...

Published On :
ಶ್ರೀನಗರ: ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯ ಬುರ್ಹಾನ್ ವಾನಿ ಸಹೋದರ ಒಳಗೊಂಡಂತೆ, ಕಣಿವೆಯಲ್ಲಿ ವಿವಿಧ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಘಟನೆಗಳಲ್ಲಿ ಹತ್ಯೆಯಾದ ೧೭ ಜನರ ಕುಟುಂಬಗಳಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಪರಿಹಾರ ಘೋಷಿಸಿದೆ. ಈ ಅಧಿಕೃತ ಆದೇಶಕ್ಕೆ ಯಾವುದೇ ಆಕ್ಷೇಪ ಸಲ್ಲಿಸಲು ಒಂದು ವಾರದ ಅವಕಾಶವನ್ನು ನೀಡಿದೆ.
ಜುಲೈ ೮ ರಂದು ಬುರ್ಹಾನ್ ವಾನಿ ಹತ್ಯೆಯಾದಾಗಲಿಂದಲೂ ಕಾಶ್ಮೀರದಲ್ಲಿ ಗಲಭೆಗಳು ಉಂಟಾಗಿದ್ದವು ಮತ್ತು ಇದರಿಂದ ಕನಿಷ್ಠ ೮೬ ಜನ ಮೃತಪಟ್ಟಿದ್ದರು.
ಪುಲ್ವಾಮಾದ ಉಪ ಕಮಿಷನರ್ ಹೊರಡಿಸಿರುವ ಆದೇಶದಲ್ಲಿ, ಪರಿಹಾರ ನೀಡುವ ನಿಯಮಗಳ ಪ್ರಕಾರ, ಜಿಲ್ಲಾ ಮಟ್ಟದ ಸಮಿತಿ, ಭಯೋತ್ಪಾದಕ ಸಂಬಂಧಿ ಘಟನೆಗಳಲ್ಲಿ ಮೃತರಾದ ೧೭ ಜನರ ಕುಟುಂಬಕ್ಕೆ ಪರಿಹಾರ ಘೋಷಿಸಿದೆ.
ಈ ೧೭ ಜನರ ಪಟ್ಟಿಯಲ್ಲಿ ಬುರ್ಹಾನ್ ವಾನಿ ಸಹೋದರ ಖಾಲಿದ್ ಮುಜಾಫರ್ ವಾನಿ ಸಹೋದರ ಕೂಡ ಸೇರಿದ್ದಾನೆ. ಕಳೆದ ವರ್ಷ ಏಪ್ರಿಲ್ ೧೩ ರಂದು ಬುಚೂ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಖಾಲಿದ್ ಮೃತಪಟ್ಟಿದ್ದ.
ನವೆಂಬರ್ ೨೪ ರಂದು ಪುಲ್ವಾಮದ ಉಪ ಕಮಿಷನರ್ ಮುನೀರ್-ಉಲ್-ಇಸ್ಲಾಮ್ ನೇತೃತ್ವದಲ್ಲಿ ಸಭೆ ನಡೆದಿದ್ದು ಈ ಪಟ್ಟಿ ಸಿದ್ಧವಾಗಿದೆ. ಅಂತಿಮ ಆದೇಶ ಹೊರಡಿಸುವುದಕ್ಕೂ ಮುಂಚಿತವಾಗಿ ಯಾವುದೇ ಆಕ್ಷೇಪವಿದ್ದರೆ, ಏಳು ದಿನಗಳೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.
ಈ ನಿಯಮಗಳ ಪ್ರಕಾರ ಮೃತರ ಕುಟುಂಬಕ್ಕೆ ನಾಲ್ಕು ಲಕ್ಷ ರೂ ಪರಿಹಾರ ನೀಡಲಾಗುತ್ತದೆ.
ಖಾಲಿದ್ (೨೫) ಮೃತಪಟ್ಟಾಗ, ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರ ಪದವಿಯನ್ನು ಅಧ್ಯಯನ ಮಾಡುತ್ತಿದ್ದರು. ಈ ಪಟ್ಟಿಯಲ್ಲಿ ಉಪನ್ಯಾಸಕ ಶಬೀರ್ ಅಹ್ಮದ್ ಮಂಗೂ (೩೦) ಕೂಡ ಸೇರಿದ್ದಾರೆ. ಈ ವರ್ಷ ಆಗಸ್ಟ್ ೧೭ ರಂದು ಪುಲ್ವಾಮದ ಕ್ರ್ಯು ನಲ್ಲಿ ಸೇನಾ ಸಿಬ್ಬಂದಿ ಥಳಿಸಿದ್ದಕ್ಕೆ ಇವರು ಮೃತಪಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸೇನೆ ತನಿಖೆಯನ್ನು ಆದೇಶಿಸಿ, ಇಂತಹ ಘಟನೆಗಳನ್ನು ಸೇನೆ ಸಹಿಸುವುದಿಲ್ಲ ಎಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಮ್ಮು ಮತ್ತು ಕಾಶ್ಮೀರJammu and KashmirHizbul MujahideenBurhan Waniಬುರ್ಹಾನ್ ವಾನಿKhalid Muzaffar Waniಹಿಜಬುಲ್ ಮುಜಾಹಿದ್ದೀನ್ಖಾಲಿದ್ ಮುಜಾಫರ್ ವಾನಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


