ಜಯಲಲಿತಾ ಸ್ಥಿತಿ ತೀವ್ರ ಚಿಂತಾಜನಕ: ಲಂಡನ್ ವೈದ್ಯ ರಿಚರ್ಡ್ ಬಿಯಲ್
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸ್ಥಿತಿ "ತೀವ್ರ ಚಿಂತಾಜನಕವಾಗಿದೆ" ಎಂದು ಇಲ್ಲಿನ ವೈದ್ಯರುಗಳಿಗೆ ಸಲಹೆ ನೀಡುತ್ತಿರುವ ಲಂಡನ್ ಮೂಲದ ವೈದ್ಯ ರಿಚರ್ಡ್ ಬಿಯಲ್...

Published On :
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸ್ಥಿತಿ "ತೀವ್ರ ಚಿಂತಾಜನಕವಾಗಿದೆ" ಎಂದು ಇಲ್ಲಿನ ವೈದ್ಯರುಗಳಿಗೆ ಸಲಹೆ ನೀಡುತ್ತಿರುವ ಲಂಡನ್ ಮೂಲದ ವೈದ್ಯ ರಿಚರ್ಡ್ ಬಿಯಲ್ ಸೋಮವಾರ ಹೇಳಿದ್ದಾರೆ.
"ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ ಆದರೆ ಅವರು ಉಳಿದುಕೊಳ್ಳಲು ಉತ್ತಮ ಅವಕಾಶ ದೊರೆಯುವಂತೆ ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಧೃಢೀಕರಿಸುತ್ತೇನೆ" ಎಂದು ರಿಚರ್ಡ್ ಬಿಯಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ ನಲ್ಲಿ ಅಪೊಲೊ ಆಸ್ಪತ್ರೆಗೆ ಜಯಲಲಿತಾ ಅವರು ದಾಖಲಾದಾಗಿಲಿಂದಲೂ, ಲಂಡನ್ ಬ್ರಿಜ್ ಆಸ್ಪತ್ರೆಯ ವೈದ್ಯ ಬಿಯಲ್ ಅವರನ್ನು ಅಪೋಲೋ ವೈದ್ಯರು ನಿರಂತರವಾಗಿ ಸಂಪರ್ಕಿಸುತ್ತಿದ್ದಾರೆ.
ಸಂಪೂರ್ಣ ಹೇಳಿಕೆ
ಮೇಡಂ ಮುಖ್ಯಮಂತ್ರಿ ಅವರು ನೆನ್ನೆ (ಭಾನುವಾರ) ತುರ್ತು ಹೃದಯ ಸ್ತಂಭನದಿಂದ ನರಳಿದ್ದನ್ನು ಕೇಳಿ ಅತೀವ ದುಃಖವಾಯಿತು. ಅಪೊಲೊದಲ್ಲಿ ಅವರ ಸ್ಥಿತಿಯ ಬಗ್ಗೆ ನಾನು ನಿಕಟವಾಗಿ ಗಮನಿಸುತ್ತಿದ್ದೇನೆ ಮತ್ತು ಎಲ್ಲರಂತೆಯೇ ಅವರು ಗುಣಮುಖರಾಗುತ್ತಿದ್ದ ಬಗ್ಗೆ ಸ್ಫುರ್ತಿಯಿಂದಿದ್ದೆ.
ಅವರು ಗುಣಮುಖರಾದ ನಡುವೆಯೂ ದುರದೃಷ್ಟವಶಾತ್ ಅವರ ಆರೋಗ್ಯ ಸ್ಥಿತಿ ಅಪಾಯದಿಂದಲೇ ಕೂಡಿತ್ತು ಮತ್ತು ಮುಂದಿನ ತೊಂದರೆಗಳು ಉಳಿದುಕೊಂಡಿದ್ದವು. ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ ಆದರೆ ಇಂತಹ ಆಘಾತಕಾರಿ ಘಟನೆಯಿಂದ ಅವರು ಉಳಿದುಕೊಳ್ಳಲು ಉತ್ತಮ ಅವಕಾಶ ದೊರೆಯುವಂತೆ ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಧೃಢೀಕರಿಸುತ್ತೇನೆ.
ಅವರಿಗೆ ಹಲವು ವಿಭಾಗಗಳ ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ, ಮತ್ತು ಈಗ ಈ ಸಿ ಎಂ ಒ ಮೂಲಕ ಅವರ ಜೀವವನ್ನು ಸಹಕರಿಸಲಾಗಿದೆ. ಇದು ಲಭ್ಯವಿರುವ ಅತ್ಯಾಧುನಿಕ ಜೀವ ಸಹಕಾರ ಉಪಕರಣ ಮತ್ತು ಇಂತಹ ಪರಿಸ್ಥಿಯಲ್ಲಿ ಅಂತಾರಾಷ್ಟ್ರೀಯ ಆರೋಗ್ಯ ಕೇಂದ್ರಗಳು ತೆಗೆದುಕೊಳ್ಳುವ ಅತ್ಯುತ್ತಮ ನಿರ್ಧಾರ ಇದು. ಈ ತಂತ್ರಜ್ಞಾನ ಅಪೋಲೋ ಚೆನ್ನೈ ಕೇಂದ್ರದಲ್ಲಿ ಇರುವುದು, ಇದು ಅಲ್ಲಿ ಅತ್ಯುತ್ತಮ ಸೌಲಭ್ಯ ಇರುವುದನ್ನು ಪ್ರತಿನಿಧಿಸುತ್ತದೆ, ಮೇಡಂ ಅವರಿಗೆ ಅಪೋಲೋ ಮತ್ತು ಎ ಐ ಐ ಎಂ ಎಸ್ ತಂಡಗಳಿಂದ ಅತ್ಯುತ್ತಮ ಚಿಕಿತ್ಸೆ ದೊರೆತಿದೆ, ಇದು ವಿಶ್ವದೆಲ್ಲೆಡೆ ದೊರಕುವ ಅತ್ಯುತ್ತಮ ಚಿಕಿತ್ಸೆಗೆ ಸಮ.
ಈ ಕಷ್ಟದ ಸಮಯದಲ್ಲಿ ಮೇಡಂ, ಅವರ ಕುಟುಂಬ, ಅವರ ಚಿಕಿತ್ಸೆಗೆ ನೆರವಾಗುತ್ತಿರುವವರು ಮತ್ತು ತಮಿಳುನಾಡಿನ ಜನತೆಯ ಜೊತೆ ನನ್ನ ಪ್ರಾರ್ಥನೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


