ಪ್ರಧಾನ ಸುದ್ದಿ

ಕಾಶ್ಮೀರದಲ್ಲಿ ಪಿಡಿಪಿ ಸಂಸದನ ಮನೆಗೆ ಬೆಂಕಿ ಹಚ್ಚಿದ ಗುಂಪು

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ರಾಜ್ಯಸಭಾ ಸದಸ್ಯರೊಬ್ಬರ ಮನೆಗೆ ಗುಂಪು ಬೆಂಕಿ ಹಚ್ಚಿದ ಘಟನೆ ಬುಧವಾರ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರು ಹೇಳಿದ್ದಾರೆ.

ಕಾಶ್ಮೀರದಲ್ಲಿ ಪಿಡಿಪಿ ಸಂಸದನ ಮನೆಗೆ ಬೆಂಕಿ ಹಚ್ಚಿದ ಗುಂಪು
ಸಾಂದರ್ಭಿಕ ಚಿತ್ರ
Published On :
ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ರಾಜ್ಯಸಭಾ ಸದಸ್ಯರೊಬ್ಬರ ಮನೆಗೆ ಗುಂಪು ಬೆಂಕಿ ಹಚ್ಚಿದ ಘಟನೆ ಬುಧವಾರ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರು ಹೇಳಿದ್ದಾರೆ. 
ದಕ್ಷಿಣ ಕಾಶ್ಮೀರದ ಕುಲಗಾಮ್ ಜಿಲ್ಲೆಯ ಚವಾಲ್ಗಮ್ ಗ್ರಾಮದ ನಾಜಿರ್ ಲಾವಾಯ್ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ ಮನೆಯಲ್ಲಿ ಯಾರು ಇರಲಿಲ್ಲ ಎಂದು ತಿಳಿದುಬಂದೆ. 
ಕತೃಸೂ ಗ್ರಾಮದ ಬಳಿ ಸರ್ಕಾರ ವಿರೋಧಿ ಮತ್ತು ಸ್ವಾತಂತ್ರ್ಯ ಪರ ಘೋಷಣೆಗಳನ್ನು ಕೂಗುತ್ತಿದ್ದ ಜನರ ಗುಂಪಿನ ಮೇಲೆ ಭದ್ರತಾ ಪಡೆ ಪೆಲ್ಲೆಟ್ ಗಳನ್ನು ಸಿಡಿಸಿದ ಕೆಲವೇ ಘಂಟೆಗಳ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘರ್ಷಣೆಯಲ್ಲಿ 12 ಕ್ಕೂ ಹೆಚ್ಚು ಪ್ರತಿಭಟನಕಾರರು ಗಾಯಗೊಂಡಿದ್ದಾರೆ. 
ಜುಲೈ 8 ರಂದು ಹಿಜಬುಲ್ ಕಮ್ಯಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ ನಂತರ ಕುದಿಯುತ್ತಿದ್ದ ಕಾಶ್ಮೀರ ಕಣಿವೆ ಕಳೆದ ಎರಡು ದಿನಗಳಿಂದ ಭಾಗಶಃ ಶಾಂತಿಯುತವಾಗಿದ್ದು, ಈಗ ಹಿಂಸಾತ್ಮಕ ಪ್ರತಿಭಟನೆಗಳು ಮತ್ತೆ ಮರುಕಳಿಸಿವೆ. 
ಹಿಂಸೆಯ ಘರ್ಷಣೆಯಲ್ಲಿ ಇಲ್ಲಿಯವರೆಗೂ ಇಬ್ಬರು ಪೊಲೀಸರನ್ನು ಸೇರಿಸಿ ಕನಿಷ್ಠ 72 ಜನ ಮೃತಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.