ಪ್ರಧಾನ ಸುದ್ದಿ

ನಾನು ಸಂತಸದಿಂದ ಕಣ್ಣೀರಿಡುತ್ತಿದ್ದೇನೆ, ಇನ್ನು ಶಾಂತಿಯಿಂದ ಪ್ರಾಣ ಬಿಡಬಹುದು: ಮಮತಾ

ನ್ಯಾನೋ ಯೋಜನೆಯಲ್ಲಿ ಟಾಟಾ ಮೋಟರ್ಸ್ ವಿರುದ್ಧದ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಎಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ತೀರ್ಪು ತಿಳಿದು "ಸಂತಸದಿಂದ

ನಾನು ಸಂತಸದಿಂದ ಕಣ್ಣೀರಿಡುತ್ತಿದ್ದೇನೆ, ಇನ್ನು ಶಾಂತಿಯಿಂದ ಪ್ರಾಣ ಬಿಡಬಹುದು: ಮಮತಾ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published On :
ಕೋಲ್ಕತ್ತಾ: ನ್ಯಾನೋ ಯೋಜನೆಯಲ್ಲಿ ಟಾಟಾ ಮೋಟರ್ಸ್ ವಿರುದ್ಧದ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಎಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ತೀರ್ಪು ತಿಳಿದು "ಸಂತಸದಿಂದ ಕಣ್ಣೀರಿಡುತ್ತಿದ್ದೇನೆ" ಮತ್ತು ಇನ್ನು "ಶಾಂತಿಯಿಂದ ಪ್ರಾಣ ಬಿಡಬಹುದು" ಎಂದಿದ್ದಾರೆ. 
ನ್ಯಾನೋ ಕಾರ್ ಯೋಜನೆಗೆ ಹಿಂದಿನ ಎಡ ಪಕ್ಷಗಳ ಸರ್ಕಾರ ಕಾನೂನು ನಿಯಮಗಳನ್ನು ಪಾಲಿಸದೆ ಜಮೀನನ್ನು ವಶಪಡಿಸಿಕೊಂಡಿದೆ ಎಂದು ನಿರ್ಧಾರವನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿತ್ತು. 
"ಇದು ಐತಿಹಾಸಿಕ ಜಯ. ಜನರ ಗೆಲುವಿದು, ಮಾತೆಯ, ನೆಲದ ಮತ್ತು ಜನರ ಗೆಲುವು" ಎಂದು ಬ್ಯಾನರ್ಜಿ ಮಾಧ್ಯಮಗಳಿಗೆ ಹೇಳಿದ್ದಾರೆ. 
"ಸಿಂಗೂರಿನ ಜನ ಎಷ್ಟು ಕಷ್ಣ ಅನುಭವಿಸಿದರು, ಯಾತನೆಗಳನ್ನು ತಡೆದುಕೊಂಡರು ಆದರೆ ಅವರೆಂದು ನನ್ನನ್ನು ಬಿಡಲಿಲ್ಲ. ಈಗ ಸಂತಸದ ಕಣ್ಣೀರಿದೆ. ಸಿಂಗೂರಿನ ರೈತರಿಗೆ ಜಮೀನು ಹಿಂದಿರುಗಿಸುವ ನನ್ನ ವಚನವನ್ನು ನನ್ನ ಸರ್ಕಾರ ಇಲ್ಲಿಯವರೆಗೂ ಪೂರೈಸಲು ಸಾಧ್ಯವಾಗಿರಲಿಲ್ಲ" ಎಂದು ಮಮತಾ ಹೇಳಿದ್ದಾರೆ. 
ಒತ್ತಾಯವುರ್ವಕ ಜಮೀನು ವಶವನ್ನು ವಿರೋಧಿಸಿ ಅಂದು ವಿರೋಧಪಕ್ಷದ ನಾಯಕಿಯಾಗಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಡಿಸೆಂಬರ್ 2006 ರಲ್ಲಿ ಕೊಲ್ಕಾತ್ತಾದಲ್ಲಿ 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಂದು ಸಿಂಗೂರಿನಲ್ಲಿ ಎಡಪಕ್ಷಗಳ ಸರ್ಕಾರ ವಶಪಡಿಸಿಕೊಂಡಿದ್ದ 400 ಎಕರೆ ಜಮೀನು ಹಿಂದಿರುಗಿಸಬೇಕೆಂದು ಪಟ್ಟು ಹಿಡಿದಿದ್ದರು.
ನಂತರ 2008 ರಲ್ಲಿ ಕಾರ್ಖಾನೆಯನ್ನು 14 ದಿನಗಳವರೆಗೆ ಮುತ್ತಿಗೆ ಹಾಕುವುದರಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ನಂದಿಗ್ರಾಮದಲ್ಲಿ ಕೂಡ ಜಮೀನು ವಶಪಡಿಸಿಕೊಳ್ಳುವುದರ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ್ದ ಮಮತಾ ಬ್ಯಾನರ್ಜಿ 2011 ರಲ್ಲಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದರು. 
ಆಗ ಟಾಟಾ ಮಂಡಳಿ ಪಶ್ಚಿಮ ಬಂಗಾಳ ತೊರೆದು ಗುಜರಾತಿನ ಸನಂದ್ ನಲ್ಲಿ ಕಾರ್ಖಾನೆ ಸ್ಥಾಪಿಸಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.