ಪ್ರಧಾನ ಸುದ್ದಿ

10 ಉನ್ನತ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 7 ನೇ ಸ್ಥಾನ!

ವಿಶ್ವದ 10 ಉನ್ನತ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ. ಒಟ್ಟು ವೈಯಕ್ತಿಕ ಸಂಪತ್ತು 5600 ಬಿಲಿಯನ್ ಡಾಲರ್ ನೊಂದಿಗೆ ಭಾರತ 7 ನೇ ಸ್ಥಾನದಲ್ಲಿದ್ದರೆ, ಅಮೆರಿಕಾ ಮೊದಲ ಸ್ಥಾನದಲ್ಲಿದೆ.

10 ಉನ್ನತ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 7 ನೇ ಸ್ಥಾನ!
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ವಿಶ್ವದ 10 ಉನ್ನತ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ. ಒಟ್ಟು ವೈಯಕ್ತಿಕ ಸಂಪತ್ತು 5600 ಬಿಲಿಯನ್ ಡಾಲರ್ ನೊಂದಿಗೆ ಭಾರತ 7 ನೇ ಸ್ಥಾನದಲ್ಲಿದ್ದರೆ, ಅಮೆರಿಕಾ ಮೊದಲ ಸ್ಥಾನದಲ್ಲಿದೆ. 
ನ್ಯೂ ವರ್ಲ್ಡ್ ವೆಲ್ತ್ (ನೂತನ ವಿಶ್ವ ಸಂಪತ್ತು) ನೀಡಿರುವ ವರದಿ ಪ್ರಕಾರ ಭಾರತ, ಕೆನಡಾ (4700 ಬಿಲಿಯನ್ ಡಾಲರ್), ಆಸ್ಟ್ರೇಲಿಯಾ (4500 ಬಿಲಿಯನ್ ಡಾಲರ್) ಮತ್ತು ಇಟಲಿ (4400 ಬಿಲಿಯನ್ ಡಾಲರ್) ದೇಶಗಳಿಗಿಂತಲೂ ಮುಂಚೂಣಿಯಲ್ಲಿದ್ದು, ಈ ದೇಶಗಳು ಕ್ರಮವಾಗಿ 8, 9 ಮತ್ತು 10 ನೇ ಸ್ಥಾನ ಪಡೆದುಕೊಂಡಿವೆ. 
ಒಟ್ಟು ವೈಯಕ್ತಿಕ ಸಂಪತ್ತು ಹೊಂದಿರುವ ದೇಶಗಳಲ್ಲಿ ಅಮೆರಿಕಾ 48900 ಬಿಲಿಯನ್ ಡಾಲರ್ ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ ಚೈನಾ (17400 ಬಿಲಿಯನ್ ಡಾಲರ್) ಮತ್ತು ಜಪಾನ್ (15100 ಬಿಲಿಯನ್ ಡಾಲರ್) ನೊಂದಿಗೆ ನಂತರದ ಎರಡು ಸ್ಥಾನದಲ್ಲಿವೆ. 
ಮೊದಲ ಹತ್ತು ಸ್ಥಾನದಲ್ಲಿರುವ ಇತರ ರಾಷ್ಟ್ರಗಳೆಂದರೆ ಇಂಗ್ಲೆಂಡ್ (9200 ಬಿಲಿಯನ್ ಡಾಲರ್) 4 ನೇ ಸ್ಥಾನ, ಜರ್ಮನಿ (9100 ಬಿಲಿಯನ್ ಡಾಲರ್) 5 ನೇ ಸ್ಥಾನ ಮತ್ತು ಫ್ರಾನ್ಸ್ (6600 ಬಿಲಿಯನ್ ಡಾಲರ್) 6 ನೇ ಸ್ಥಾನ. 
ಈ ಒಟ್ಟು ಸಂಪತ್ತು ಎಂದರೆ ಎಲ್ಲ ವ್ಯಕ್ತಿಗಳ ಒಟ್ಟು ಆಸ್ತಿ, ನಗದು, ವ್ಯಾವಹಾರಿಕ ಸಂಪತ್ತು ಗಳನ್ನು ಒಳಗೊಂಡಿದ್ದು, ವ್ಯಕ್ತಿಗಳ ಖರ್ಚುಗಳನ್ನು ಮತ್ತು ಸರ್ಕಾರಿ ಹಣವನ್ನು ಕಳೆಯಲಾಗುತ್ತದೆ. 
ಭಾರತ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಕ್ಕೆ ಮುಖ್ಯ ಕಾರಣ ದೇಶದ ಅತಿ ಹೆಚ್ಚು ಜನಸಂಖ್ಯೆ. "ಆಸ್ಟ್ರೇಲಿಯಾದಲ್ಲಿ ಕೇವಲ 22 ದಶಲಕ್ಷ ಜನ ಜೀವಿಸುತ್ತಿದ್ದು, ಆ ದೇಶ ಸ್ಥಾನ ಪಡೆದಿರುವುದು ಆಸಕ್ತಿದಾಯಕ" ಎಂದು ವರದಿ ವಿವರಿಸಿದೆ. 
ವೈಯಕ್ತಿಕ ಸಂಪತ್ತಿನ ದೃಷ್ಟಿಯಿಂದ ಕಳೆದ ಐದು ವರ್ಷಗಳಿಂದ ಚೈನಾ ತೀವ್ರವಾಗಿ ಮುನ್ನಡೆಯುತ್ತಿದೆ ಎಂದು ವರದಿ ಹೇಳಿದೆ. "ಆಸ್ಟ್ರೇಲಿಯಾ ಮತ್ತು ಭಾರತ ಕೂಡ ತೀವ್ರ ಮುನ್ನಡೆ ಕಂಡಿದ್ದು, ಕಳೆದ 12 ತಿಂಗಳಲ್ಲಿ ಆಸ್ಟ್ರೇಲಿಯಾ ಮತ್ತು ಕೆನಡಾ ಇಟಲಿಯನ್ನು ಹಿಂದಿಕ್ಕಿವೆ" ಎಂದು ವರದಿ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.