50 ಕ್ಕೂ ಹೆಚ್ಚು ಬೀದಿ ನಾಯಿಗಳ ದಾಳಿ; ತಿರುವನಂತಪುರಂನಲ್ಲಿ 65 ವರ್ಷದ ಮಹಿಳೆ ಸಾವು
ದುರಂತ ಘಟನೆಯೊಂದರಲ್ಲಿ ಶುಕ್ರವಾರ ರಾತ್ರಿ ಪುಲ್ಲುವಿಲಾ ಬೀಚ್ ಬಳಿ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ 65 ವರ್ಷದ ಮಹಿಳೆಯೊಬ್ಬರು ಮೃತಪಟ್ಟದ್ದಾರೆ. ಸಾವನ್ನಪ್ಪಿದವರು ಶಿಲುವಮ್ಮ

Published On :
ತಿರುವನಂತಪುರಂ: ದುರಂತ ಘಟನೆಯೊಂದರಲ್ಲಿ ಶುಕ್ರವಾರ ರಾತ್ರಿ ಪುಲ್ಲುವಿಲಾ ಬೀಚ್ ಬಳಿ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ 65 ವರ್ಷದ ಮಹಿಳೆಯೊಬ್ಬರು ಮೃತಪಟ್ಟದ್ದಾರೆ. ಸಾವನ್ನಪ್ಪಿದವರು ಶಿಲುವಮ್ಮ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ ಶುಕ್ರವಾರ ರಾತ್ರಿ ಶಿಲುವಮ್ಮ ಬೀಚಿಗೆ ತೆರಳಿದಾಗ 50 ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿವೆ. ತಾಯಿ ಮನೆಗೆ ಹಿಂದಿರುಗದಿದ್ದಾಗ, ಶಿಲುವಮ್ಮನ ಮಗ ಸೆಲ್ವರಾಜ್ ಹುಡುಕಿ ಹೊರಟಾಗ, ನಾಯಿಗಳು ದಾಳಿ ಮಾಡುತ್ತಿರುವುದನ್ನು ಕಂಡಿದ್ದಾನೆ.
ಸೆಲ್ವರಾಜ್ ನನ್ನ ಕೂಡ ನಾಯಿಗಳು ಅಟ್ಟಿಸಿಕೊಂಡು ಬಂದಿವೆ ಆದರೆ ಸಣ್ಣಪುಟ್ಟ ಗಾಯಗಳಿಂದ ಸೆಲ್ವರಾಜ್ ಉಳಿದುಕೊಂಡಿದ್ದರೆ ತಾಯಿ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲೇ ತೀವ್ರ ಗಾಯಗಳಿಂದ ಸಾವನ್ನಪಿದ್ದಾರೆ.
ಮತ್ತೊಂದು ಘಟನೆಯಲ್ಲಿ ಪುಲ್ಲುವಿಲಾ ನಿವಾಸಿ 52 ವರ್ಷದ ಡೈಸಿ ಎಂಬುವವರ ಮೇಲು ನಾಯಿಗಳು ದಾಳಿ ಮಾಡಿದ್ದು, ಅವರನ್ನು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಲ್ಲಿನ ನಿವಾಸಿಗಳು ಹೇಳುವಂತೆ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿದ್ದು, ಈ ತೊಂದರೆಯ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


