ಪ್ರಧಾನ ಸುದ್ದಿ

'ಕಾಶ್ಮೀರದಲ್ಲಿ ಶಿಕ್ಷಕನನ್ನು ಸಾಯುವಂತೆ ಥಳಿಸಿದ ಭದ್ರತಾ ಪಡೆಗಳು': ನಿವಾಸಿಗಳ ಆರೋಪ

ಕಾಶ್ಮೀರ ಗ್ರಾಮದಲ್ಲಿ ರಾತ್ರೋ ರಾತ್ರಿ ನಡೆದ ದಾಳಿಯಲ್ಲಿ ಭದ್ರತಾ ಪಡೆಗಳು 30 ವರ್ಷದ ಶಿಕ್ಷಕನನ್ನು ಥಳಿಸಿ ಕೊಂದಿದ್ದಾರೆ ಎಂದು ಗುರುವಾರ ನಿವಾಸಿಗಳು ಆರೋಪಿಸಿದ್ದಾರೆ.

'ಕಾಶ್ಮೀರದಲ್ಲಿ ಶಿಕ್ಷಕನನ್ನು ಸಾಯುವಂತೆ ಥಳಿಸಿದ ಭದ್ರತಾ ಪಡೆಗಳು': ನಿವಾಸಿಗಳ ಆರೋಪ
ಕಾಶ್ಮೀರದಲ್ಲಿ ಕರ್ಫ್ಯೂವಿನ ಒಂದು ದೃಶ್ಯ
Published On :
ಶ್ರೀನಗರ: ಕಾಶ್ಮೀರ ಗ್ರಾಮದಲ್ಲಿ ರಾತ್ರೋ ರಾತ್ರಿ ನಡೆದ ದಾಳಿಯಲ್ಲಿ ಭದ್ರತಾ ಪಡೆಗಳು 30 ವರ್ಷದ ಶಿಕ್ಷಕನನ್ನು ಥಳಿಸಿ ಕೊಂದಿದ್ದಾರೆ ಎಂದು ಗುರುವಾರ ನಿವಾಸಿಗಳು ಆರೋಪಿಸಿದ್ದಾರೆ. 
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕ್ರ್ಯು ಗ್ರಾಮದಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬಂಧಿಸಿದ 12 ಜನರಲ್ಲಿ ಶಬೀರ್ ಅಹಮದ್ ಮುಂಗಾ ಕೂಡ ಒಬ್ಬರು ಎಂದು ಅವರು ತಿಳಿಸಿದ್ದಾರೆ. 
ಆದರೆ ಪೊಲೀಸರು ಹೇಳಿರುವಂತೆ ಕ್ರ್ಯು ನಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಸಂಜೆಗೂ ಮುಂಚೆ ನಡೆದ ಘರ್ಷಣೆಯಲ್ಲಿ ಮುಂಗಾ ಮೃತಪಟ್ಟಿರುವುದು ಎಂದಿದ್ದಾರೆ. 
ಗುರುವಾರ ಬೆಳಗ್ಗೆ ಮೃತ ದೇಹವನ್ನು ಕುಟುಂಬಕ್ಕೆ ನೀಡಲಾಗಿದೆ. 
ಮುಂಗಾ ದೇಹದ ಮೇಲೆ ಚಿತ್ರಹಿಂಸೆಯ ಗುರುತುಗಳಿದ್ದು, ಗ್ರಾಮದಲ್ಲಿ ರಾತ್ರಿ ನಡೆದ ಪ್ರತಿಭಟನೆಗಳ ನಂತರ ಅವರನ್ನು ಬಂಧಿಸಿ ಸಾಯುವವರೆಗೆ ಹೊಡೆಯಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. 
ಆಸ್ಪತ್ರೆಯ ಅಧಿಕಾರಿಗಳು ಇದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವುದರಿಂದ ಈ ಆರೋಪವನ್ನು ಧೃಢೀಕರಿಸಲು ಸಾಧ್ಯವಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ. 
ಮುಂಗಾ ಅಂತಿಮ ಸಂಸ್ಕಾರದ ವೇಳೆ ಜನ ಪ್ರತಿಭಟಿಸುವುದನ್ನು ಹತ್ತಿಕ್ಕುವುದಕ್ಕೆ ಕ್ರ್ಯು, ಪಾಂಪೊರ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಅಧಿಕಾರಿಗಳು ಕರ್ಫ್ಯೂ ವಿಧಿಸಿದ್ದಾರೆ. 
ಈ ಸಾವಿನಿಂದ, ಹಿಜಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಜುಲೈ 8 ರಂದು ಭದ್ರತಾ ಪಡೆಗಳು ಹತ್ಯೆ ಮಾಡಿದಾಗಲಿಂದಲೂ ನಡೆದಿರುವ ಘರ್ಷಣೆಯಲ್ಲಿ ಮೃತಪಟ್ಟವರ ಸಂಖ್ಯೆ 66 ಕ್ಕೆ ಏರಿದೆ. 
ಕಾಶ್ಮೀರ ಕಣಿವೆಯಲ್ಲಿ 41 ನೆಯ ದಿನ ಕರ್ಫ್ಯೂ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಹೊಸದಾಗಿ ಹಿಂಸಾಚಾರ ಭುಗಿಲೆದ್ದಿರುವುದರಿಂದ ಮೊದಲ ಬಾರಿಗೆ ರಾತ್ರಿ ವೇಳೆಯಲ್ಲಿ ಕರ್ಫ್ಯೂ ವಿಸ್ತರಿಸಿ ಅಧಿಕಾರಿಗಳು ಆದೇಶಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.