ಪ್ರಧಾನ ಸುದ್ದಿ

10 ದಿನದ ಧ್ಯಾನ ಮುಗಿಸಿ ಹೆಚ್ಚು ಗೆಲುವಾಗಿದ್ದೇನೆ: ಕೇಜ್ರಿವಾಲ್

ಹಿಮಾಚಲಪ್ರದೇಶದಲ್ಲಿ 10 ದಿನಗಳ ಧ್ಯಾನ ಶಿಬಿರದಲ್ಲಿ ಪಾಲ್ಗೊಂಡು ಹಿಂದಿರುಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ಬಹಳ ಗೆಲುವಿನಿಂದ ಇದ್ದೇನೆ ಎಂದು ಗುರುವಾರ

10 ದಿನದ ಧ್ಯಾನ ಮುಗಿಸಿ ಹೆಚ್ಚು ಗೆಲುವಾಗಿದ್ದೇನೆ: ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Published On :

ನವದೆಹಲಿ: ಹಿಮಾಚಲಪ್ರದೇಶದಲ್ಲಿ 10 ದಿನಗಳ ಧ್ಯಾನ ಶಿಬಿರದಲ್ಲಿ ಪಾಲ್ಗೊಂಡು ಹಿಂದಿರುಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ಬಹಳ ಗೆಲುವಿನಿಂದ ಇದ್ದೇನೆ ಎಂದು ಗುರುವಾರ ಹೇಳಿದ್ದಾರೆ.

"10 ದಿನಗಳ ವಿಪಾಸನಾ ಶಿಬಿರದಿಂದ ಹಿಂದಿರುಗುತ್ತಿದ್ದೇನೆ. ಈಗ ಬಹಳ ತಾಜಾತನದಿಂದ ಗೆಲುವಾಗಿದ್ದೇನೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 1 ರಂದು ಹಿಮಾಚಲ ಪ್ರದೇಶದ ದಲೈ ಲಾಮಾ ಅವರ ಆಶ್ರಮದ ಬಳಿಯಿರುವ ಧರ್ಮಕೋಟ್ ಗೆ ವಿಪಾಸನಾ ಶಿಬಿರದಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

ಅವರ ಶಿಬಿರ ಆಗಸ್ಟ್ 2 ರಂದು ಪ್ರಾರಂಭವಾಗಿತ್ತು. ಈ 10 ದಿನದ ಅವಧಿಯಲ್ಲಿ ಅವರನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡಿರಲಿಲ್ಲ ಮತ್ತು ದಿನಪತ್ರಿಕೆ ಮತ್ತು ಫೋನುಗಳಿಂದ ಕೂಡ ದೂರವಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.