ಪ್ರಧಾನ ಸುದ್ದಿ

ನಿಗದಿಯಂತೆ ನೀಟ್ ಮೂಲಕ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಿ: ಸುಪ್ರೀಂಕೋರ್ಟ್

ನಿಗದಿಯಂತೆ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಎರಡು ಹಂತಗಳಲ್ಲಿ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಸುವಂತೆ...

ನಿಗದಿಯಂತೆ ನೀಟ್ ಮೂಲಕ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಿ: ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್ ಮತ್ತು ಪ್ರವೇಶ ಪರೀಕ್ಷೆ (ಸಂಗ್ರಹ ಚಿತ್ರ)
Published On :
ನವದೆಹಲಿ: ನಿಗದಿಯಂತೆ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಎರಡು ಹಂತಗಳಲ್ಲಿ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಸುವಂತೆ ಶುಕ್ರವಾರ ಸುಪ್ರೀಂಕೋರ್ಟ್ ಆದೇಶಿಸಿದೆ. 
ಈ ಸಂಬಂಧ ನಿನ್ನೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ಆದರೆ ತನ್ನ ಆದೇಶವನ್ನು ಮರುಪರಿಶೀಲಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ನಿಗದಿಯಾದ ಮೇ 1 ಹಾಗೂ ಜುಲೈ 24ರಂದು ಪರೀಕ್ಷೆ ನಡೆಸುವಂತೆ ಸೂಚಿಸಿದೆ.
ವೈದ್ಯಕೀಯ ಕೋರ್ಸ್​ಗಳು ಪ್ರವೇಶ ಸಂಬಂಧಿಸಿದಂತೆ ರಾಜ್ಯಗಳ ಅಹವಾಲುಗಳನ್ನೂ  ಆಲಿಸಬೇಕು ಮತ್ತು ಆಯಾ ರಾಜ್ಯಗಳಿಗೇ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ನಡೆಸುವ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಗೆ ಮನವಿ ಸಲ್ಲಿಸಿದೆ. ಅಟಾರ್ನಿ  ಜನರಲ್ ಮುಕುಲ್ ರೋಹ್ಟಗಿ ಅವರು ಇಂದು ಎರಡು ಹಂತಗಳ ’ನೀಟ್’ ಬದಲಿಗೆ ಜುಲೈ 24ರಂದು ಒಂದೇ ದಿನ ‘ನೀಟ್’ನಡೆಸುವಂತೆ ಸಲಹೆ ಮಾಡಿದ್ದರು.
ಸಿಬಿಎಸ್​ಇ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಎರಡು ಹಂತಗಳಲ್ಲಿ ಪರೀಕ್ಷೆ ನಡೆಸುವುದಾಗಿ ಜಂಟಿ ಪ್ರಮಾಣಪತ್ರ ಸಲ್ಲಿಸಿದ ಬಳಿಕ ಸುಪ್ರೀಂಕೋರ್ಟ್ ಗುರುವಾರ ಏಕರೂಪ  ಪ್ರವೇಶ ಪರೀಕ್ಷೆಗೆ ತನ್ನ ಅನುಮೋದನೆ ನೀಡಿತ್ತು. ಮೇ 1ರಂದು ಅಖಿಲ ಭಾರತ ವೈದ್ಯಕೀಯ ಪೂರ್ವ ಪರೀಕ್ಷೆ (ಏಐಪಿಎಂಟಿ) ನಡೆಸಲು ಸಿಬಿಎಸ್​ಇ ನಿರ್ಧರಿಸಿದ್ದು, ಅದನ್ನು ಮೊದಲ ಹಂತದ  ನೀಟ್ ಆಗಿ ಮರುನಿಗದಿ ಮಾಡಲಾಗುವುದು ಎಂದು ಸಿಬಿಎಸ್​ಇ ವಕೀಲ, ಅಡಿಷನಲ್ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಹೇಳಿದ್ದರು. ಈಗಾಗಲೇ ಪರೀಕ್ಷೆಗಾಗಿ 6,70,000 ವಿದ್ಯಾರ್ಥಿಗಳು  ಹೆಸರು ನೋಂದಾಯಿಸಿದ್ದಾರೆ. ಬಾಕಿ ಉಳಿದಿರುವ 2,50,000 ವಿದ್ಯಾರ್ಥಿಗಳಿಗೆ ಅಗತ್ಯ ಶುಲ್ಕ ಪಾವತಿಸಿದ ಬಳಿಕ ಎರಡನೇ ಹಂತದ ನೀಟ್​ಗೆ ಹಾಜರಾಗಲು ಅವಕಾಶ  ಒದಗಿಸಿಕೊಡಲಾಗುವುದು ಎಂದು ಆನಂದ್ ಹೇಳಿದ್ದರು. 
ಎರಡು ಹಂತಗಳಲ್ಲಿ ‘ನೀಟ್’ನಡೆಸುವ ಸಂಬಂಧ ರಾಜ್ಯಗಳು ಮತ್ತು ಖಾಸಗಿ ಕಾಲೇಜುಗಳ ವಿರೋಧವನ್ನು ಗುರುವಾರ ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಮೇ 1 ರಂದು ಮೊದಲ ಹಂತ ಮತ್ತು  ಜುಲೈ 24ರಂದು ಎರಡನೇ ಹಂತದ ಪ್ರವೇಶ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.