ಚೈನಾ ಉತ್ಪನ್ನಗಳನ್ನು ನಿಷೇಧಿಸಲು ಸಂಸದರ ಆಗ್ರಹ; ಸಾಧ್ಯವಿಲ್ಲ ಎಂದ ಸರ್ಕಾರ
ಕೆಲವು ಜಿಜೆಪಿ ಸದಸ್ಯರೂ ಸೇರಿದಂತೆ ಲೋಕಸಭಾ ಸದಸ್ಯರು ಚೈನಾ ಉತ್ಪನ್ನಗಳ ಆಮದನ್ನು ನಿಷೇಧಿಸುವಂತೆ ಸೋಮವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಚೈನಾದಿಂದ

ನವದೆಹಲಿ: ಕೆಲವು ಜಿಜೆಪಿ ಸದಸ್ಯರೂ ಸೇರಿದಂತೆ ಲೋಕಸಭಾ ಸದಸ್ಯರು ಚೈನಾ ಉತ್ಪನ್ನಗಳ ಆಮದನ್ನು ನಿಷೇಧಿಸುವಂತೆ ಸೋಮವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಚೈನಾದಿಂದ ಬರುತ್ತಿರುವ ಕಳಪೆ ವಸ್ತುಗಳು ಇಲ್ಲಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪೆಟ್ಟು ನೀಡುತ್ತಿವೆ ಎಂದಿದ್ದಾರೆ.
ಒಂದು ದೇಶದ ಉತ್ಪನ್ನಗಳ ಆಮದನ್ನು ನಿಷೇಧಿಸುವುದು ಅಸಾಧ್ಯ ಎಂದಿರುವ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ "ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳ ಪ್ರಕಾರ ಇದು ಸಾಧ್ಯವಿಲ್ಲ" ಎಂದಿದ್ದಾರೆ. ಆದರೆ ಭಾರತೀಯ ಉತ್ಪಾದಕರ ಮತ್ತು ಗ್ರಾಹಕರ ಹಿತಾಸಕ್ತಿ ಕಾಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
"ನಾವು ಈ ವಿಷಯವನ್ನು ಕಡೆಗಣಿಸುತ್ತಿಲ್ಲ ಬದಲಾಗಿ ವೃತ್ತಿಪರವಾಗಿ ಪರಿಶೀಲಿಸುತ್ತಿದ್ದೇವೆ" ಎಂದು ಲೋಕಸಭಾ ಸದಸ್ಯರಿಗೆ ತಿಳಿಸಿದ್ದಾರೆ.
ಬಿಹಾರದ ಬೇಗುಸರಾರಿಯ ಬಿಜೆಪಿ ಸಂಸದ ಭೋಲಾ ಸಿಂಗ್ ಈ ವಿಷಯವನ್ನು ಪ್ರಸ್ತಾಪಿಸಿ "ನಾವು ಸಾಂಸ್ಕೃತಿಕವಾಗಿ ಚೈನಾಗೆ ವಿಶಾಲ ಹೃದಯಿಗಳಾಗಿದ್ದರೂ, ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳಲ್ಲಿ ಅದನ್ನೇ ಮಾಡಲಾಗುವುದಿಲ್ಲ" ಎಂದಿದ್ದಾರೆ.
ಇದರ ಬಗ್ಗೆ ಸರ್ಕಾರ ಮೃದು ಧೋರಣೆ ತಳೆದಿರುವುದು ಸರಿಯಲ್ಲ, ಭಾರತ ಮತ್ತು ಚೀನಾದ ನಡುವೆ ವಾಣಿಜ್ಯ ವಹಿವಾಟಿನ ಅಂತರ ಹೆಚ್ಚಾಗುತ್ತಿದೆ ಎಂದಿದ್ದಾರೆ.
ವಾಣಿಜ್ಯ ವಹಿವಾಟಿನ ಅಂತರ ಒಪ್ಪಿಕೊಂಡಿರುವ ವಾಣಿಜ್ಯ ಸಚಿವೆ "ಎಲ್ಲೆಲ್ಲಿ ಸುರಕ್ಷಿತಾ ನಿಯಮಗಳ ಉಲ್ಲಂಘನೆಯಾಗಿದೆಯೋ ಅಲ್ಲಿ ಆಮದನ್ನು ನಿಷೇಧಿಸಿದ್ದೇವೆ" ಎಂದಿದ್ದು ಚೈನಾದ ಹಾಲು ಉತ್ಪನ್ನಗಳ ಆಮದನ್ನು ನಿಷೇಧಿಸಿರುವುದರ ಉದಾಹರಣೆ ನೀಡಿದ್ದಾರೆ.
ಈ ನಿಷೇಧದ ಕೂಗಿದೆ ಬಿಜು ಜನತಾ ದಳ ಸದಸ್ಯ ತಥಾಗಥ ಸಭಾಪತಿ ಧ್ವನಿಗೂಡಿಸಿದ್ದಾರೆ. "ಚೈನಾ ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಭಾರಿ ಹೊಡೆತ ನೀಡಿದೆ. ಕಳ್ಳ ಆಮದುಗಾರರು ಕಳಪೆ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ" ಎಂದಿದ್ದಾರೆ.
"ದೆಹಲಿಯ ಖಾನ್ ಮಾರುಕಟ್ಟೆಗೆ ಭೇಟಿ ನೀಡಿದರೆ, ಚೈನಾದ ಮೊಬೈಲ್ ಫೋನುಗಳು ಹೇರಳವಾಗಿ ಸಿಗುತ್ತವೆ. ಸಚಿವರು ಹೋಗಿ ನೋಡಬೇಕು" ಎಂದು ಸಭಾಪತಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವೆ ಅಂತಾರಾಷ್ಟ್ರೀಯ ಮಾನದಂಡ ಹೊಂದದ ಉತ್ಪನ್ನಗಳನ್ನು ನಿಷೇಧ ಮಾಡಿರುವುದಾಗಿಯೂ "ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳ ಪ್ರಕಾರ ಸಂಪೂರ್ಣ ನಿಷೇಧ ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


