ಮತ್ತೆ ಮುಖ್ಯಮಂತ್ರಿ ಗಾದಿಗೆ ಹಿಂದಿರುಗಿದ ರಾವತ್; ಸಂಪುಟ ಸಭೆ
ಉತ್ತರಾಖಂಡ್ ಹೈಕೋರ್ಟ್ ರಾಜ್ಯದಲ್ಲಿ ಕೇಂದ್ರ ಸರ್ಕಾರ ಹೇರಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿದ, ಕಾಂಗ್ರೆಸ್ ಸರ್ಕಾರ ಮರುಕಳಿಸಲು ಅವಕಾಶ ನೀಡಿದ ನಂತರ ಗುರುವಾರ ಸಂಜೆ

ಡೆಹ್ರಾಡೂನ್: ಉತ್ತರಾಖಂಡ್ ಹೈಕೋರ್ಟ್ ರಾಜ್ಯದಲ್ಲಿ ಕೇಂದ್ರ ಸರ್ಕಾರ ಹೇರಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿದ, ಕಾಂಗ್ರೆಸ್ ಸರ್ಕಾರ ಮರುಕಳಿಸಲು ಅವಕಾಶ ನೀಡಿದ ನಂತರ ಗುರುವಾರ ಸಂಜೆ ಮುಖ್ಯಮಂತ್ರಿ ಹರೀಶ್ ರಾವತ್ ಸಂಪುಟ ಸಭೆ ಕರೆದಿದ್ದರು.
ಈ ಸಮಯದಲ್ಲಿ ಸರ್ಕಾರದ ಮುಂದೆ ಉಳಿದಿದ್ದ ೧೧ ಪ್ರಸ್ತಾವನೆಗಳನ್ನು ಸಂಪುಟ ಸಭೆ ನಿರ್ಣಯ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮಾಸಿಕ ಸ್ಟೈಪಂಡ್ ೧೫೦೦೦ ರೂ ನೊಂದಿಗೆ ೬೦೦೦ ಸಹಾಯಕ ಶಿಕ್ಷಕರ ಮರು ನೇಮಕ ಕೂಡ ನಿರ್ಣಯ ಕೈಗೊಂಡಿರುವ ಪ್ರಸ್ತಾವನೆಗಳಲ್ಲೊಂದು ಎಂದು ತಿಳಿದುಬಂದಿದೆ.
ಅಲ್ಲದೆ ಏಪ್ರಿಲ್ ೨೯ ರಂದು ವಿಧಾನ ಸಭೆ ಅಧಿವೇಶನ ಕರೆದು ಅಂದೆ ರಾವತ್ ಸರ್ಕಾರ ೭೦ ಶಾಸಕರ ವಿಧಾನಭೆಯಲ್ಲಿ ಬಹುಮತ ಸಾಬೀತು ಪಡಿಸುವ ಪ್ರಕ್ರಿಯ ನಡೆಸಲು ಕೂಡ ಕೂಡ ಸಂಪುಟ ಸಭೆ ತಿರ್ಮಾನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


