ಕೋಮು ಘರ್ಷಣೆಗಳಿಗೆ ಮುಲಾಯಂ ಮತ್ತು ಅಖಿಲೇಶ್ ಟೀಕಿಸಿದ ಉಲ್ಮಾ ಮಂಡಲಿ ಅಧ್ಯಕ್ಷ
ಮುಸ್ಲಿಮರನ್ನು ಮತ ಬ್ಯಾಂಕ್ ರಾಜಕಾರಣಾಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್

ಲಕನೌ: ಮುಸ್ಲಿಮರನ್ನು ಮತ ಬ್ಯಾಂಕ್ ರಾಜಕಾರಣಾಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ರಾಷ್ಟ್ರೀಯ ಉಲ್ಮಾ ಮಂಡಲಿಯ ಅಧ್ಯಕ್ಷ ಮೌಲಾನ ಆಮೀರ್ ರಶ್ದಿ ಮದನಿ ಮಂಗಳವಾರ ಟೀಕಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ೪೫೭ ಕೋಮು ಗಲಭೆಗಳಾಗಿದ್ದರೂ, ಮುಲಯಾಂ-ಅಖಿಲೇಶ್ ರಾಜ್ಯದ ಮುಸ್ಲಿಮರ ಹಿತೈಷಿಗಳು ಎಂದು ಹೇಳಿಕೊಳ್ಳುತ್ತಿರುವುದು ವಿಚಿತ್ರ ಎಂದು ಕೂಡ ಅವರು ಹೇಳಿದ್ದಾರೆ.
"ಮುಲಾಯಂ ಸಿಂಗ್ ಮತ್ತು ಅವರ ಪುತ್ರ ಅಖಿಲೇಶ್ ಯಾದವ್ ಅವರ ಆಡಳಿತದಲ್ಲಿ ಸುಮಾರು ೪೫೭ ಕೋಮು ಗಲಭೆಗಳಾಗಿವೆ ಮತ್ತು ಈಗಲೂ ಅವರಿಬ್ಬರೂ ಮುಸ್ಲಿಮರ ಅರ್ಧ-ದೇವತೆಗಳಾಗಿದ್ದರೆ ಆದರೆ ಒಂದು ಗಲಭೆಯ ನಂತರ ಮೋದಿ ಮುಸ್ಲಿಮರ ಶತ್ರು ಆಗಿಬಿಟ್ಟಿದ್ದರು" ಎಂದು ಕೂಡ ಮೌಲಾನ ಹೇಳಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು, ಬಿಜೆಪಿ ಪಕ್ಷ ಮುಸ್ಲಿಮರ ವಿರೋಧಿ ಎಂಬ ಪಟ್ಟ ಕಟ್ಟಿ ನಂತರ ಬರೀ ಮತ ಬ್ಯಾಂಕಾಗಿ ಮುಸ್ಲಿಮರನ್ನು ಬಳಸಿಕೊಳ್ಳುತ್ತವೆ ಎಂದು ಅವರು ದೂರಿದ್ದಾರೆ.
ದೇಶದಲ್ಲಿ ಹಿಂದುಗಳು ಮುಸ್ಲಿಮರ ನಡುವೆ ಉತ್ತಮ ಬಾಂಧವ್ಯ, ಸೌಹಾರ್ದದ ಅವಶ್ಯಕತೆ ಇದೆ ಎಂದು ಕೂಡ ಉಲ್ಮಾ ಮಂಡಲಿಯ ಅಧ್ಯಕ್ಷ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


