ಮಹಾರಾಷ್ಟ್ರ ಪಂಚಾಯತ್: ಬಿಜೆಪಿಗೆ ಕೇವಲ ೫; ಕಾಂಗ್ರೆಸ್ ೨೧; ಶಿವಸೇನೆ ಮತ್ತು ಎನ್ ಸಿ ಪಿ ತಲಾ ೨೦
ಮಹಾರಾಷ್ಟ್ರದ ಆರು ನಗರ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಕೇವಲ ೫ ಸ್ಥಾನಗಳನ್ನು ಪಡೆದಿದ್ದು, ಕಾಂಗ್ರೆಸ್ ಪಕ್ಷ ೨೧ ಸ್ಥಾನಗಳನ್ನು ಗೆದ್ದಿದೆ. ಶಿವಸೇನೆ ಮತ್ತು ಎನ್ ಸಿ ಪಿ ಪಕ್ಷಗಳಿ ತಲಾ ೨೦

ಮುಂಬೈ: ಮಹಾರಾಷ್ಟ್ರದ ಆರು ನಗರ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಕೇವಲ ೫ ಸ್ಥಾನಗಳನ್ನು ಪಡೆದಿದ್ದು, ಕಾಂಗ್ರೆಸ್ ಪಕ್ಷ ೨೧ ಸ್ಥಾನಗಳನ್ನು ಗೆದ್ದಿದೆ. ಶಿವಸೇನೆ ಮತ್ತು ಎನ್ ಸಿ ಪಿ ಪಕ್ಷಗಳಿ ತಲಾ ೨೦ ಸ್ಥಾನಗಳನ್ನು ಪಡೆದುಕೊಂಡಿವೆ. ಈ ನಗರ ಪಂಚಯತ್ ನ ೧೦೨ ಕ್ಷೇತ್ರಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಸೋಮವಾರ ಫಲಿತಾಂಶ ಘೋಷಿಸಲಾಗಿದೆ.
ಮಹಾರಾಷ್ಟ್ರದಲ್ಲಿ ನಾವು ಕಳೆದುಕೊಂಡಿದ್ದ ಘನತೆಯನ್ನು ಮತ್ತೆ ಪಡೆಯುವಲ್ಲಿ ಈ ಫಲಿತಾಂಶ ಸಹಕರಿಸಿದೆ ಎಂದು ಹಿರಿಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಹೇಳಿದ್ದಾರೆ. ೨೦೧೪ ರ ವಿಧಾನಸಭಾ ಚುನಾವಣಾ ಮತ್ತು ೨೦೧೫ ರ ಬಾಂಧ್ರಾ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದ ಕಾಂಗ್ರೆಸ್ ಗೆ, ರಾಣೆ ಅವರ ಸ್ವಕ್ಷೇತ್ರ ಕೊಂಕಣ ಕರಾವಳಿಯ ಕುಡಲ್ ನಗರದ ಪಂಚಾಯತಿಯನ್ನು ಗೆಲ್ಲಲು ಸಾಧ್ಯವಾಗಿದೆ.
ಕುಡಲ್ ನಗರದ ಪಂಚಾಯತ್ ಚುನಾವಣೆಯಲ್ಲಿ ರಾಣೆ ನೇತೃತ್ವದ ಕಾಂಗ್ರೆಸ್ ಗೆ ಗೆಲುವು ಅತಿ ಮುಖ್ಯವಾಗಿತ್ತು. ಇಲ್ಲಿ ೧೭ ಕ್ಷೇತ್ರಗಳಲ್ಲಿ ೯ ಸ್ಥಾನ ಗಳಿಸಿರುವ ಕಾಂಗ್ರೆಸ್ ಬಿಜೆಪಿ ಪಕ್ಷವನ್ನು ೧ ಸ್ಥಾನಕ್ಕೆ ಸೀಮಿತಗೊಳಿಸಿದೆ. ಆರು ಸ್ಥಾನ ಗಳಿಸಿರುವ ಶಿವಸೇನೆ ಎರಡನೇ ಸ್ಥಾನದಲ್ಲಿದೆ. ಶಿವಸೇನ ಮತ್ತು ಬಿಜೆಪಿ ತಮ್ಮ ಹಿರಿಯ ನಾಯಕರುಗಳ ಮೇಲೆ ಭಾರ ಹಾಕಿತ್ತು ಮತ್ತು ರೈಲ್ವೆ ಸಚಿವ ಸುರೇಶ್ ಪ್ರಭು ಕೂಡ ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದರು.
ಲೋಹಾರ ಪಂಚಾಯತ್ ನಲ್ಲಿ ಶಿವಸೇನೆ (೯), ಎನ್ ಸಿ ಪಿ (೪), ಕಾಂಗ್ರೆಸ್ (೩), ಬಿಜೆಪಿ (೦) ಸ್ಥಾನಗಳನ್ನು ಗಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


