ಅಡ್ವಾಣಿ ಮನೆಗೆ ಭೇಟಿ ನೀಡಿದ ಸೋನಿಯಾ
ನೆನ್ನೆ ನಿಧನರಾದ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರ ಪತ್ನಿ ಕಮಲಾ ಅಡ್ವಾಣಿ ಅವರಿಗೆ ಗೌರವ ಸಲ್ಲಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಅಡ್ವಾಣಿ

ನವದೆಹಲಿ: ನೆನ್ನೆ ನಿಧನರಾದ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರ ಪತ್ನಿ ಕಮಲಾ ಅಡ್ವಾಣಿ ಅವರಿಗೆ ಗೌರವ ಸಲ್ಲಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಅಡ್ವಾಣಿ ಅವರ ಗೃಹಕ್ಕೆ ಭೇಟಿ ನೀಡಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡ ಗುರುವಾರ ಅಡ್ವಾಣಿ ಅವರ ಮನೆಗೆ ಭೇಟಿ ನೀಡಿದ್ದಾರೆ.
ಹೃದಯಾಘಾತದಿಂದ ಕಮಲಾ ಅಡ್ವಾಣಿ ಅವರು ಬುಧವಾರ ನಿಧರಾಗಿದ್ದರು. ಅವರಿಗೆ ೮೩ ವರ್ಷವಾಗಿತ್ತು.
ಕಮಲಾ ಅಡ್ವಾಣಿ ಅವರು, ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಶಕ್ತಿಯುತ ಆಧಾರ ಸ್ಥಂಭವಾಗಿದ್ದರು ಮತ್ತು ಪಕ್ಷದ ಕಾರ್ಯಕರ್ತರಿಗೆ ಹುರಿದುಂಬಿಸುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಣ್ಣಿಸಿದ್ದರು.
ಅಡ್ವಾಣಿ, ಕಮಲಾ ಅವರನ್ನು ೧೯೬೫ರಲ್ಲಿ ಮದುವೆಯಾಗಿದ್ದರು. ಪತಿ ಮತ್ತು ಇಬ್ಬರು ಮಕ್ಕಳಾದ ಜಯಂತ್ ಮತ್ತು ಪ್ರತಿಭಾ ಅವರನ್ನು ಕಮಲಾ ತೊರೆದಿದ್ದಾರೆ. ಕಳೆದ ವರ್ಷವಷ್ಟೇ ಈ ದಂಪತಿ ತಮ್ಮ ೫೦ ನೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


