50 ವರ್ಷಗಳ ನಂತರ ಉಪನ್ಯಾಸಕ ವೃತ್ತಿಗೆ ಮರಳಿದ ಡಾ. ಮನಮೋಹನ್ ಸಿಂಗ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸತತ ಐದು ದಶಕಗಳ ನಂತರ ತಮ್ಮ ಹಳೇಯ ವೃತ್ತಿಗೆ ಮರಳಿದ್ದಾರೆ. ಅತ್ಯುನ್ನತ ಶಿಕ್ಷಣ ಪಡೆದಿದ್ದ ದೇಶದ ಪ್ರಧಾನಿಗಳಲ್ಲಿ...

ಚಂಡೀಗಢ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸತತ ಐದು ದಶಕಗಳ ನಂತರ ತಮ್ಮ ಹಳೇಯ ವೃತ್ತಿಗೆ ಮರಳಿದ್ದಾರೆ. ಅತ್ಯುನ್ನತ ಶಿಕ್ಷಣ ಪಡೆದಿದ್ದ ದೇಶದ ಪ್ರಧಾನಿಗಳಲ್ಲಿ ಒಬ್ಬರಾಗಿದ್ದ ಮನಮೋಹನ್ ಸಿಂಗ್ ಇದೀಗ ಮತ್ತೆ ತಮ್ಮ ಉಪನ್ಯಾಸಕರಾಗಲಿದ್ದಾರೆ.
50 ವರ್ಷಗಳ ನಂತರ ಮತ್ತೆ ಜವಾಹರ್ ಲಾಲ್ ನೆಹರು ಚೇರ್‌ನಲ್ಲಿ ಪಾಠ ಮಾಡಲಿದ್ದಾರೆ. ಚಂಡೀಗಢಕ್ಕೆ ಬಂದಾಗ ನೇರವಾಗಿಯೇ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಸಿಂಗ್, ಬೇರೆ ಸಮಯದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಠ ಮಾಡಲಿದ್ದಾರೆ,' ಎಂದು ವಿವಿ ಉಪಕುಲಪತಿ ಪ್ರೊ. ಅರುಣ್ ಕುಮಾರ್ ಗ್ರೋವರ್ ತಿಳಿಸಿದ್ದಾರೆ.
1954ರಲ್ಲಿ ಪಂಜಾಬ್ ವಿವಿಯಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಮುಗಿಸಿದ ಸಿಂಗ್, ಬಳಿಕ 1957ರಿಂದ ಅಲ್ಲಿಯೇ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 1966ರಲ್ಲಿ ವಿಶ್ವಸಂಸ್ಥೆಯ ಆರ್ಥಿಕ ವ್ಯವಹಾರಗಳ ಅಧಿಕಾರಿಯಾಗಿ ನೇಮಕಗೊಂಡ ಬಳಿಕ ವಿವಿ ತೊರೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


