ಪ್ರಧಾನ ಸುದ್ದಿ

ನನ್ನ ಕಣಕಣವೂ ದೇಶದ ಸೇವೆಗೆ ಮುಡಿಪು: ಅಮೆರಿಕದಲ್ಲಿ ಮೋದಿ ಮಾತು

ನನ್ನ ಕಣಕಣವೂ ದೇಶದ ಸೇವೆಗೆ ಮುಡಿಪಾಗಿರುತ್ತದೆ. ನನ್ನು ಬದುಕಿದ್ದರೂ ಅದು ದೇಶಕ್ಕಾಗಿ, ಸಾಯುವುದೂ ದೇಶಕ್ಕಾಗಿ ಎಂದು ಹೇಳುವ...

ನನ್ನ ಕಣಕಣವೂ ದೇಶದ ಸೇವೆಗೆ ಮುಡಿಪು: ಅಮೆರಿಕದಲ್ಲಿ ಮೋದಿ ಮಾತು
ನರೇಂದ್ರ ಮೋದಿ
Published On :

ಕ್ಯಾಲಿಫೋರ್ನಿಯಾ: ನನ್ನ ಕಣಕಣವೂ ದೇಶದ ಸೇವೆಗೆ ಮುಡಿಪಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಅಮೆರಿಕದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕ್ಯಾಲಿಫೋರ್ನಿಯಾದ ಸ್ಯಾನ್ ಹೊಸೆಯ ಎಸ್ ಎಪಿ ಸೆಂಟರ್ ನಲ್ಲಿ ಅನಿವಾಸಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದು, ನನ್ನ ಕಣಕಣವೂ ದೇಶದ ಸೇವೆಗೆ ಮುಡಿಪಾಗಿರುತ್ತದೆ. ನನ್ನು ಬದುಕಿದ್ದರೂ ಅದು ದೇಶಕ್ಕಾಗಿ, ಸಾಯುವುದೂ ದೇಶಕ್ಕಾಗಿ ಎಂದು ಹೇಳುವ ಮೂಲಕ ದೇಶಾಭಿಮಾನವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ.

ಭಾರತೀಯರು ಅಮೆರಿಕಾಕ್ಕೆ ಬಂದು ಸಾಧನೆ ಮಾಡುತ್ತಿದ್ದಾರೆ. ಭಾರತೀಯರ ಕೊಡುಗೆಗೆ ನಾನು ಅಭಿನಂದಿಸುತ್ತೇನೆ. ಇಲ್ಲಿನ ನಾಗರಿಕರಿಗೆ ಭಾರತೀಯರನ್ನ ಕಂಡ್ರೆ ಅತೀವ ಗೌರವ. ಈ ಗೌರವವನ್ನು ನಾನು ನಮಿಸುತ್ತೇನೆ ಎಂದ ಅವರು, ಭಾರತವನ್ನು ಇಂದು ವಿಶ್ವ ವಿಭಿನ್ನವಾಗಿ ನೋಡುತ್ತಿದೆ. ವಿಶ್ವ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಈಗ ಭಾರತದ ಶಕ್ತಿಯ ಪರಿಚಯ ಮಾಡಿಸುವ ಕಾಲ ಬಂದಿದೆ ಎಂದಿದ್ದಾರೆ.

ಭಾರತದಲ್ಲಿ ಬ್ರೇನ್ ನ ಬೆಳೆ ಬೆಳೆಯುತ್ತಿದೆ. ಬ್ರೇನ್ ಡ್ರೇನ್, ಬ್ರೇನ್ ಗೇನ್ ಆಗಿಬಿಟ್ಟಿದೆ. ಬ್ರೇನ್ ಡೆಪಾಸಿಟ್ ಭಾರತ ಮಾತೆಯ ಉಪಯೋಗಕ್ಕೆ ಬರಲಿದೆ. ನೀವು ಕಂಪ್ಯೂಟರ್ ಮೇಲೆ ಬೆರಳು ಆಡಿಸಿ ಜಗತ್ತನ್ನೇ ಬದಲಾಯಿಸಿದ್ರಿ. ಭಾರತೀಯರ ಕೊಡುಗೆಗೆ ನಾನು ಅಭಿನಂದಿಸುತ್ತೇನೆ ಎಂದರು.

ಇಂದು ವೀರ ಸೇನಾನಿ ಭಗತ್ ಸಿಂಗ್ ಜನ್ಮದಿನ, ಭಗತ್ ಸಿಂಗ್ ಅವರ ತ್ಯಾಗ ಅಪಾರ. ವೀರಸೇನಾನಿ ಭಗತ್ ಸಿಂಗ್ ಗೆ ಕೋಟಿ ಕೋಟಿ ಪ್ರಣಾಮಗಳು ಎಂದು ಹೇಳುವ ಮೂಲಕ ಭಗತ್ ಸಿಂಗ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಲೋಕಮಾನ್ಯ ಜಯಪ್ರಕಾಶ್ ನಾರಾಯಣ್ ಇದೆ ನೆಲದಲ್ಲಿ ಓದಲು ಬಂದಿದ್ರು. 1940ರಲ್ಲಿ ಗೋಪಾಲ್ ಮುಖರ್ಜಿ ಸ್ಟೆನ್ ಪೋರ್ಡ್ ವಿವಿಯ ಮೊದಲ ಭಾರತೀಯ ಪದವೀಧರ. ಅಂದಿನಿಂದ ಪ್ರಾರಂಭವಾದ ಭಾರತೀಯರ ಮುನ್ನಡೆ ಹೆಜ್ಜೆ ಈಗ ಬಹುಎತ್ತರಕ್ಕೆ ಕೊಂಡೊಯ್ದಿದೆ.

ಭಾರತದ 125 ಕೋಟಿ ಜನ ನನಗೆ ಹೊಸ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ನಿರ್ವಹಿಸೋದು ನನ್ನ ಕರ್ತವ್ಯ. ಇವತ್ತು ಜಗತ್ತಿನ ಯಾವುದೇ ಮೂಲೆಗೆ ಹೋದ್ರೂ ಒಂದು ವಿಶ್ವಾಸವಿದೆ. ಭಾರತೀಯರ ಪ್ರತಿ ಜಗತ್ತಿನ ವಿಶ್ವಾಸವಿದೆ. ವಿಶ್ವ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಕಾರ್ಯನಿರ್ವಹಣೆ. ಪ್ರಮುಖ ಸಾಫ್ಟ್ ವೇರ್ ಕಂಪನಿಗಳ ಉದ್ಯೋಗಿಗಳಾಗಿದ್ದಾರೆ. ಇಡೀ ವಿಶ್ವದ ಜನರು ಭಾರತದ ನಾಯಕತ್ವ ಬಯಸಿದ್ದಾರೆ. ಕ್ಷಣಕ್ಷಣಕ್ಕೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಭಾರತ.

ಮೋದಿ ಏನು ಹೇಳಿದ್ರು, ಏನ್ ಮಾಡಿದ್ರು, ಎಲ್ಲವೂ ನಿಮಗೆ ಗೊತ್ತಿದೆ. ನಾನು ಕೊಟ್ಟ ಮಾತನ್ನು ಈಡೇರಿಸಿದ್ದೇನೆ. ಜಗತ್ತಿನೊಂದಿಗೆ ಸೇರಿಕೊಳ್ಳಲು ಭಾರತ ಸಿದ್ಧವಾಗುತ್ತಿದೆ. ಇದು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಬುದ್ಧಿವಂತಿಕೆಯೇ ಭಾರತೀಯರ ಬಂಡವಾಳ. ಭಾರತದ ಬುದ್ಧಿವಂತಿಕೆ ಇಡೀ ಪ್ರಪಂಚವನ್ನೇ ಬದಲಿಸುತ್ತದೆ. ಇಡೀ ಪ್ರಪಂಚವೇ ನಂಬಿದೆ, 21ನೇ ಶತಮಾನ ಭಾರತದ್ದು. ಭಾರತದಲ್ಲಿ ಬದಲಾವಣೆ ಕೇವಲ ಮೋದಿಯಿಂದ ಆಗಲ್ಲ. 125 ಕೋಟಿ ಭಾರತೀಯರ ಪರಿಶ್ರಮದಿಂದ ಬದಲಾವಣೆ.

ಅಮೆರಿಕದ ಅಭಿವೃದ್ಧಿಗೆ ಅನಿವಾಸಿ ಭಾರತೀಯರ ಕೊಡೆಗೆ ಅಪಾರ. ನಾನು ಬದುಕಿದರೂ ದೇಶಕ್ಕಾಗಿ, ಸತ್ತರೂ ಅದು ದೇಶಕ್ಕಾಗಿ ಎಂದು ಹೇಳಿದ ಮೋದಿ ಭಾರತ ದೇಶದ ಜನಸಂಖ್ಯೆ ಬಹುಭಾಗ ಯುವಜನರು ಹೀಗಾಗಿ ಭಾರತ ದೇಶ ಹಿಂದುಳಿಯರು ಸಾಧ್ಯವೇ ಇಲ್ಲ. ಭಾರತದ ಯುವಕ ಬಡತನ ನಿರ್ಮೂಲನೆಗೆ ಹಾತೊರೆಯುತ್ತಿದ್ದಾನೆ. ಈ ಹಿಂದೆ ಉಪನಿಷತ್ತುಗಳಿಂದ ಭಾರತವನ್ನು ಗುರುತಿಸಲಾಗುತ್ತಿತ್ತು. ಈಗ ಉಪನಿಷತ್ತಿನಿಂದ ಮೇಲೇರಿ ಉಪಗ್ರಹದ ಚರ್ಚೆ ಆಗುತ್ತಿದೆ.

ಭಾರತದ ರಾಜಕಾರಣಿಗಳ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ರಾಜಕಾರಣಿಯ ಮಗ ಸಾವಿರ ಕೋಟಿ ರೂ ಸಂಪಾದಿಸಿದ್ದಾರೆ, ಮಗಳು 500 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದಾಳೆ, ಅಳಿಯ ಸಾವಿರ ಕೋಟಿ ದುಡ್ಡು ತಿಂದಿದ್ದಾಳೆ. ಈ ಆರೋಪ ಸರ್ವೇ ಸಾಮಾನ್ಯ, ಆದರೆ ಇಂತಹ ಆರೋಪಗಳು ನನ್ನ ಮೇಲೆ ಬಂದಿದಿಯಾ? ಎಂದು ಪ್ರಶ್ನಿಸಿದ ಮೋದಿ ಭ್ರಷ್ಟಚಾರದಿಂದ ದೇಶ ಹಾಳಾಗಿದೆ. ನಾನೊಬ್ಬ ಭ್ರಷ್ಟಾಚಾರ ಮುಕ್ತವಾದ್ರೆ ದೇಶ ಸರಿಯಾಗುತ್ತಾ? ಹೀಗಾಗಿ ದೇಶದಲ್ಲಿ ಎಲ್ಲರೂ ಒಂದಾಗಿ ಭ್ರಷ್ಟಾಚಾರ ವಿರುದ್ಧ ಸಮರ ಸಾರಬೇಕು ಎಂದಿದ್ದಾರೆ.

ಭಾರತದ ಬಡತನ ನಮಗೆ ಗೊತ್ತಿದೆ. ಯಾವಾಗ ಬಡವರಿಗಾಗಿ '0' ಬ್ಯಾಲೆನ್ಸ್ ಅಕೌಂಟ್ ಯೋಜನೆ ಜಾರಿಯಾಯಿತೋ, ಹೀಗಾಗಿ ಬಡ ಜನರು ಕೂಡ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಜ್ಜೆಯಿಡುವಂತಾಗಿದೆ. ಹಿಂದೆ ಭಾರತದ ಕುರಿತು ಒಂದು ವರದಿ ಪ್ರಕಟವಾಗಿತ್ತು. ಅತೀ ವೇಗ ಅಭಿವೃದ್ಧಿ ಹೊಂದುವ ದೇಶ ಯಾವುದು? ಇಡೀ ಜಗತ್ತಿನಲ್ಲಿ ವೇಗವಾಗಿ ಬೆಳೆಯುವ ದೇಶಯಾವುದ? ಅದಕ್ಕೆ ಬಂದಿದ್ದ ಉತ್ತರ ಬ್ರಿಕ್ಸ್ ದೇಶಗಳು- ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಆಫ್ರಿಕಾ. ಆದರೆ ಇಂದು ಬ್ರಿಕ್ಸ್ ದೇಶಗಳ ಪೈಕಿ ಭಾರತವೇ ನಂ.1. ಅಭಿವೃದ್ಧಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. 2 ವರ್ಷಗಳ ಹಿಂದೆ BRICSನಿಂತ Iದೂರವಾಗುತ್ತಿತ್ತು. ಆದರೆ ಇಂದು BRICSನಲ್ಲಿ 'I' ನಂ.1 ಸ್ಥಾನದಲ್ಲಿದೆ.

ಗ್ಯಾಸ್ ಸಬ್ಸಿಡಿ ಹಣವನ್ನೀಗ ನೇರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಈ ಮೂಲಕ ಬಹುಕೋಟಿ ಅವ್ಯವಹಾರಕ್ಕೆ ಸರ್ಕಾರ ಬ್ರೇಕ್ ಹಾಕಿದೆ, ದೇಶದಲ್ಲೀಗ 30 ಲಕ್ಷ ಜನ ಗ್ಯಾಸ್ ಸಬ್ಸಿಡಿಯನ್ನು ಬಿಟ್ಟುಕೊಟ್ಟು ಮಾದರಿಯಾಗಿದ್ದಾರೆ. ಈ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದು ಹೇಳುವ ಮೂಲಕ ಮೋದಿ ದೇಶದ ಪ್ರಗತಿ ಕುರಿತು ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.