ಪ್ರಧಾನ ಸುದ್ದಿ

ಸನಾತನ ಸಂಸ್ಥ ನಿಷೇಧಕ್ಕೆ ಗೋವಾ ಕಾಂಗ್ರೆಸ್ ಆಗ್ರಹ; ಬಿಜೆಪಿ ಶಾಸಕನ ಸಹಮತ

ಎಡ ಪಕ್ಷದ ನಾಯಕ ಗೋವಿಂದ ಪನ್ಸಾರೆ ಅವರ ಕೊಲೆ ಆರೋಪದಲ್ಲಿ ಸನಾತನ ಸಂಸ್ಥಾದ ಕಾರ್ಯಕರ್ತರ ಮೇಲೆ ಆರೋಪ ಬಂದಿದ್ದು, ಈ ಸಂಘಟನೆಯ ಕೆಲವು ಸದಸ್ಯರನ್ನು ಮಹಾರಾಷ್ಟ್ರ

ಸನಾತನ ಸಂಸ್ಥ ನಿಷೇಧಕ್ಕೆ ಗೋವಾ ಕಾಂಗ್ರೆಸ್ ಆಗ್ರಹ; ಬಿಜೆಪಿ ಶಾಸಕನ ಸಹಮತ
ಸಂಶೋಧಕ ಕಲ್ಬುರ್ಗಿ ಹತ್ಯೆಯ ಹಿನ್ನಲೆಯಲ್ಲಿ ಬಲಪಂಥೀಯ ತೀವ್ರಗಾಮಿ ಸಂಘಟನೆಗಳ ನಿಷೇಧಕ್ಕೆ ಕೂಗು ಕೇಳಿಬರುತ್ತಿದೆ
Published On :

ಪಣಜಿ: ಎಡ ಪಕ್ಷದ ನಾಯಕ ಗೋವಿಂದ ಪನ್ಸಾರೆ ಅವರ ಕೊಲೆ ಆರೋಪದಲ್ಲಿ ಸನಾತನ ಸಂಸ್ಥಾದ ಕಾರ್ಯಕರ್ತರ ಮೇಲೆ ಆರೋಪ ಬಂದಿದ್ದು, ಈ ಸಂಘಟನೆಯ ಕೆಲವು ಸದಸ್ಯರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿರುವ ಹಿನ್ನಲೆಯಲ್ಲಿ ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಆಪಾದಿತ ಸಂಸ್ಥೆಯನ್ನು ನಿಷೇಧಿಸುವಂತೆ ಬುಧವಾರ ಆಗ್ರಹಿಸಿದೆ.

ಈ ಬಲಪಂಥೀಯ ಹಿಂದು ಸಂಸ್ಥೆ ದ್ವೇಷವನ್ನು ಬಿತ್ತುವುದರಲ್ಲಿ ಹಾಗು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ದೇಶವನ್ನು ಒಡೆಯುವುದರಲ್ಲಿ ನಿರತವಾಗಿರುವುದರಿಂದ ಅದನ್ನು ನಿಷೇಧಿಸಬೇಕು ಎಂದು ಗೋವಾ ಕಾಂಗ್ರೆಸ್ ವಕ್ತಾರ ದುರ್ಗದಾಸ್ ಕಾಮತ್ ಬುಧವಾರ ತಿಳಿಸಿದ್ದಾರೆ.

"ಸನಾತನ ಸಂಸ್ಥಾದಂತ ಸಂಘಟನೆಗಳು ದ್ವೇಷವನ್ನು ಬಿತ್ತುವುದರಲ್ಲಿ ಹಾಗು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ದೇಶವನ್ನು ಒಡೆಯುವುದರಲ್ಲಿ ನಿರತವಾಗಿರುವುದರಿಂದ ಗೋವಾದಲ್ಲಷ್ಟೇ ಅಲ್ಲದೆ ಇಡೀ ದೇಶದಲ್ಲಿ ಈ ಸಂಘಟನೆಯನ್ನು ನಿಷೇಧಿಸಬೇಕಿದೆ. ಚುನಾವಣೆ ಸಮಯದಲ್ಲಿ ಮಾತ್ರ ಜಾತ್ಯಾತೀತತೆಯ ಬಗ್ಗೆ ಮಾತನಾಡುವ ಬಿಜೆಪಿಗೆ ಈಗ ಪರೀಕ್ಷೆಯ ಸಮಯ" ಎಂದು ಕಾಮತ್ ಹೇಳಿದ್ದಾರೆ.

ಗೋವಾ ಮುಖ್ಯಮಂತ್ರಿಯವರಿಗೆ ನಿಕಟವಾಗಿರುವ ಬಿಜೆಪಿ ಶಾಸಕರೊಬ್ಬರು ಕೂಡ ಇದೇ ರೀತಿಯ ಬೇಡಿಕೆ ಇಟ್ಟಿದ್ದ ಬೆನ್ನಲ್ಲೇ ಕಾಮತ್ ಕೂಡ ಈಗ ಆಗ್ರಹಿಸಿದ್ದಾರೆ. ಬುಧವಾರ ಸೇಂಟ್ ಆಂದ್ರೆ ಕ್ಷೇತ್ರದ ಬಿಜೆಪಿ ಶಾಸಕ ವಿಷ್ಣು ವಾಗ್ ಕೂಡ ಸನಾತನ ಸಂಸ್ಥಾ ನಿಷೇಧಕ್ಕೆ ಆಗ್ರಹಿಸಿದ್ದರು. "ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶವಿಲ್ಲ. ವಿರೋಧವನ್ನು ಹತ್ತಿಕ್ಕಲು ಬುಲೆಟ್ ಬಳಸುವವರು ಉಗ್ರಗಾಮಿಗಳು. ಇದು ಗೋವಿಂದ ಪನ್ಸಾರೆ ಮತ್ತು ಎಂ ಎಂ ಕಲ್ಬುರ್ಗಿ ಅವರ ಹತ್ಯೆಯ ವಿಷಯದಲ್ಲಿ ತಿಳಿಯುತ್ತದೆ. ಸನಾತನ ಸಂಸ್ಥಾ ಸಂಘಟನೆಯ ಕೈವಾಡ ಸ್ಪಷ್ಟವಾಗಿದೆ" ಎಂದು ವಾಗ್ ದೂರಿದ್ದರು.

ಶ್ರೀರಾಮ ಸಂಘಟನೆಯ ಪ್ರಮೋದ್ ಮುತಾಲಿಕ್ ನನ್ನು ಗೋವಾ ಪ್ರವೇಶಿಸುವುದರಿಂದ ಸರ್ಕಾರ ತಡೆಯಬಹುದಾದರೆ, ಸನಾತನ ಸಂಸ್ಥಾಗು ನಿಷೇಧ ಹೇರಬೇಕು ಎಂದು ವಾಗ್ ಆಗ್ರಹಿಸಿದ್ದರು.

ಶ್ರೀರಾಮ ಸೇನಾ ಮತ್ತು ಸನಾತನ ಸಂಸ್ಥಾ ಇವೆರಡು ಸಂಘಟನೆಗಳಿಗೂ ನಿಕಟ ಸಂಬಧ ಇದೆ ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.