ಪ್ರಧಾನ ಸುದ್ದಿ

ತಾಯಿ, ಇಬ್ಬರು ಮಕ್ಕಳ ಮೃತ ದೇಹ ದೆಹಲಿಯಲ್ಲಿ ಪತ್ತೆ

೨೮ ವರ್ಷದ ಮಹಿಳೆ ಮತ್ತು ಈಕೆಯ ಅಪ್ರಾಪ್ತ ಮಗಳು ಮತ್ತು ಮಗ ಅವರ ಮನೆಯಲ್ಲಿ ಮೃತಪಟ್ಟಿರುವುದು ತಿಳಿದುಬಂದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ತಾಯಿ, ಇಬ್ಬರು ಮಕ್ಕಳ ಮೃತ ದೇಹ ದೆಹಲಿಯಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ೨೮ ವರ್ಷದ ಮಹಿಳೆ ಮತ್ತು ಈಕೆಯ ಅಪ್ರಾಪ್ತ ಮಗಳು ಮತ್ತು ಮಗ ಅವರ ಮನೆಯಲ್ಲಿ ಮೃತಪಟ್ಟಿರುವುದು ತಿಳಿದುಬಂದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಖಯಾನ ಪ್ರದೇಶದಲ್ಲಿ ಸುಮಾರು ಬೆಳಗ್ಗೆ ೫:೩೦ ಕ್ಕೆ ಈ ಸಾವಿನ ವರದಿಯಾಗಿದೆ.

ಭಾನುವಾರ ಕೆಲಸದ ಮೇರೆ ಜೈಪುರಕ್ಕೆ ಹೋಗಿದ್ದ ಮಹಿಳೆಯ ಗಂಡ ಸೂಮವಾರ ಬೆಳಗ್ಗೆ ಮನೆಗೆ ಹಿಂದಿರುಗಿದಾಗ ಎಲ್ಲರೂ ಮೃತಪಟ್ಟಿರುವುದನ್ನು ತಿಳಿಸಿದ್ದಾರೆ.

"ಮಹಿಳೆ ಮತ್ತು ೮ ವರ್ಷದ ಮಗಳು ಹಾಗೂ ೬ ವರ್ಷದ ಮಗ ಮೂವರು ಮನೆಯಲ್ಲಿ ಮೃತಪಟ್ಟಿರುವುದು ತಿಳಿದುಬಂದಿದೆ. ಮಹಿಳೆಯ ಕತ್ತು ಹಿಸುಕಿ ಚುಚ್ಚಿ ಕೊಂಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ಮಕ್ಕಳಿಗೆ ಚೂಪಾದ ವಸ್ತುವಿನಿಂದ ಚುಚ್ಚಿವುದಲ್ಲದೆ ನೇಣು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.