ಪ್ರಧಾನ ಸುದ್ದಿ

ಇಂದಿರಾ ಗಾಂಧಿ ಅಧಿಕಾರದಾಹಿ ಮಹಿಳೆ, ಅವರಿಗೆ ಯಾಕೆ ಗೌರವ ಕೊಡಬೇಕು?

ಇಂದಿರಾ ಮತ್ತು ರಾಜೀವ್ ಗಾಂಧಿಯವರ ಚಿತ್ರವಿರುವ ಅಂಚೆ ಚೀಟಿ ರದ್ದುಗೊಳಿಸುವ ಬಗ್ಗೆ ನನಗೇನೂ ತಪ್ಪು ಎಂದೆನಿಸುವುದಿಲ್ಲ. ಹಾಗಂತ ನಾನು ಬಿಜೆಪಿ ಸರ್ಕಾರದ...

ಇಂದಿರಾ ಗಾಂಧಿ ಅಧಿಕಾರದಾಹಿ ಮಹಿಳೆ, ಅವರಿಗೆ ಯಾಕೆ ಗೌರವ ಕೊಡಬೇಕು?
ಮಾರ್ಕಂಡೇಯ ಕಾಟ್ಜು
Published On :

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಚಿತ್ರಗಳಿರುವ ಅಂಚೆ ಚೀಟಿ ರದ್ದು ವಿವಾದದ ಜ್ವಾಲೆಗೆ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ತುಪ್ಪ ಸುರಿದಿದ್ದಾರೆ.

ಇಂದಿರಾ ಮತ್ತು ರಾಜೀವ್ ಗಾಂಧಿಯವರ ಚಿತ್ರವಿರುವ ಅಂಚೆ ಚೀಟಿ ರದ್ದುಗೊಳಿಸುವ ಬಗ್ಗೆ ನನಗೇನೂ ತಪ್ಪು ಎಂದೆನಿಸುವುದಿಲ್ಲ. ಹಾಗಂತ ನಾನು ಬಿಜೆಪಿ ಸರ್ಕಾರದ ಅಭಿಮಾನಿಯೇನೂ ಅಲ್ಲ ಎಂದು ಕಾಟ್ಜು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಕಾಟ್ಜು ಬ್ಲಾಗ್ ನಲ್ಲಿ ಬರೆದದ್ದು:

ಇಂದಿರಾ ಗಾಂಧಿ ಅಧಿಕಾರ ದಾಹವಿರುವ ಮಹಿಳೆಯಾಗಿದ್ದರು. ಅಧಿಕಾರವನ್ನು ಪಡೆಯಲು  ಆಕೆ ಏನು ಬೇಕಾದರೂ ಮಾಡಲು ಹೇಸುತ್ತಿರಲಿಲ್ಲ. ಚುನಾವಣೆ ಪ್ರಕ್ರಿಯೆಗಳಲ್ಲಿ ಅಲಹಾಬಾದ್ ಹೈಕೋರ್ಟ್ ಆಕೆಯ ಭ್ರಷ್ಟಾಚಾರ ಬಯಲು ಮಾಡಿದ್ದಕ್ಕೆ ಅವರು 1975ರಲ್ಲಿ  ನಕಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು.

ಶಹ್‌ಬಾನೋ ಪ್ರಕರಣ (ಮುಸ್ಲಿಂ ಮಹಿಳೆಗೆ ವಿಚ್ಛೇದನ ನೀಡಿದರೆ ಪತಿ ಪರಿಹಾರ ಕೊಡಬೇಕು) ದಲ್ಲಿ  ರಾಜೀವ್ ಗಾಂಧಿಗೆ ಒಳ್ಳೆಯ ಬೆಂಬಲ ಸಿಕ್ಕಿತು. ಅವರು ವಿನಾಕಾರಣ ಶ್ರೀಲಂಕಾಗೆ ನಮ್ಮ ಸೈನ್ಯ ಕಳುಹಿಸಿ, ನಮ್ಮ ಸಾವಿರಾರು ಸೈನಿಕರು ಸಾಯುವಂತೆ ಮಾಡಿದರು ಎಂದು ಬ್ಲಾಗ್‌ನಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.