ಬಿಹಾರ ಚುನಾವಣೆಗಳಲ್ಲಿ ನಿತೀಶ್ ಮಹಾಮೈತ್ರಿ ಭಾರಿ ಗೆಲುವು ಸಾಧಿಸಲಿದೆ: ಕಾಟ್ಜು
ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ನಿತೀಶ್ ಕುಮಾರ್ ಮುಂದಾಳತ್ವದ 'ಮಹಾ ಮೈತ್ರಿ' ಎರಡನೆ ಮೂರರಷ್ಟು ಬಹುಮತ ಗಳಿಸಿ ಭಾರೀ ಗೆಲುವು ಸಾಧಿಸಲಿದೆ

ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ನಿತೀಶ್ ಕುಮಾರ್ ಮುಂದಾಳತ್ವದ 'ಮಹಾ ಮೈತ್ರಿ' ಎರಡನೆ ಮೂರರಷ್ಟು ಬಹುಮತ ಗಳಿಸಿ ಭಾರೀ ಗೆಲುವು ಸಾಧಿಸಲಿದೆ ಎಂದು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಹೇಳಿದ್ದರೆ.
"ಪಂಡಿತರು ತಿಳಿಸಿರುವಂತೆ ನಿತೀಶ್-ಲಾಲು ಮೈತ್ರಿ ಕೇವಲ ಸಣ್ಣ ಅಂತರದಿಂದ ಗೆಲ್ಲುವುದಿಲ್ಲ, ಆದರೆ ಎರಡನೆ ಮೂರರಷ್ಟು ಬಹುಮತ ಗಳಿಸಲಿದೆ" ಎಂದು ಭಾರತದ ಪ್ರೆಸ್ ಕೌಂಸಿಲ್ ನ ಮಾಜಿ ಅಧ್ಯಕ್ಷ ಫೇಸ್ಬುಕ್ ನಲ್ಲಿ ಬರೆದಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ದಯನೀಯವಾಗಿ ಸೋತ ನಂತರ "ಮೋದಿ ಅವರ ಭವಿಷ್ಯ ಕಳೆಗುಂದಲಿದೆ" ಎಂದು ಅವರು ತಿಳಿಸಿದ್ದಾರೆ.
"ಜನರನ್ನು ಮೂರ್ಖರನ್ನಾಗಿಸುವುದನ್ನು ಹೊರತುಪಡಿಸಿ ಆ ಮನುಷ್ಯನಲ್ಲಿ(ಮೋದಿ) ಮೊದಲಿಗೆ ಯಾವುದೇ ಸತ್ವವಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ.
ಮೇ ೨೦೧೪ರಲ್ಲಿ ಅಧಿಕಾರ ಸ್ವೀಕರಿಸಿದಿಂದಾಗಿಲಿಂದಲೂ ಮೋದಿ ಜನಪ್ರಿಯತೆ ಕುಸಿಯುತ್ತಾ ಬಂದಿದೆ ಅವರು ಹೇಳಿದ್ದಾರೆ.
"ಈಗಾಗಲೇ ಅವರ ಹೆಸರು ಕೆಟ್ಟಿದೆ. ತೊಗರಿ ಕೆಜಿಗೆ ೨೦೦ಕ್ಕೆ ಏರಿಕೆಯಾಗಿದೆ. ನಿರುದ್ಯೋಗ ಹೆಚ್ಚುತ್ತಿದೆ. ಹಿಂದು ಸಮುದಾಯದ ಪಟ್ಟಬದ್ಧ ಉಚ್ಛ ಜಾತಿಯವರಷ್ಟೇ ಅವರ ಬೆಂಬಲಿಗರಾಗಿ ಉಳಿದಿದ್ದಾರೆ" ಎಂದು ಕಾಟ್ಜು ಹೇಳಿದ್ದಾರೆ.
ಕೊನೆಯ ಹಂತದ ಮತದಾನ ನವೆಂಬರ್ ೧ ಕ್ಕೆ ಮುಗಿಯಲಿದ್ದು, ನವೆಂಬರ್ ೮ ರಂದು ಮತ ಎಣಿಕೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


