ಪ್ರಧಾನ ಸುದ್ದಿ

ನೇಪಾಳಕ್ಕೆ ಮೊದಲ ಮಹಿಳಾ ರಾಷ್ಟ್ರಪತಿ

ನೇಪಾಳದ ಆಡಳಿತ ಪಕ್ಷ ಸಿ ಪಿ ಎನ್-ಯು ಎನ್ ಎಲ್ ನ ಉಪಾಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

ನೇಪಾಳಕ್ಕೆ ಮೊದಲ ಮಹಿಳಾ ರಾಷ್ಟ್ರಪತಿ
ನೇಪಾಳದ ಮೊದಲ ಮಹಿಳಾ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ
Published On :

ಖಟ್ಮಂಡು: ನೇಪಾಳದ ಆಡಳಿತ ಪಕ್ಷ ಸಿ ಪಿ ಎನ್-ಯು ಎನ್ ಎಲ್ ನ ಉಪಾಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ ಚುನಾವಣೆಗಳಲ್ಲಿ ನೇಪಾಳದ ಕಾಂಗ್ರೆಸ್ ಅಭ್ಯರ್ಥಿ ಕೌಲ್ ಬಹದೂರ್ ಗುರಂಗ್ ಅವರನ್ನು ಬಂಢಾರಿ ಸೋಲಿಸಿದ್ದಾರೆ. ನೇಪಾಳ ಸಂಸತ್ತಿನ ಸ್ಪೀಕರ್ ಅನ್ಸಾರಿ ಘರ್ತಿ ಮಗರ್ ಅವರು ಈ ವಿಷಯವನ್ನು ಘೋಷಿಸಿದ್ದಾರೆ.

ಮಾಜಿ ಭದ್ರತಾ ಸಚಿವೆ ಭಂಡಾರಿ ಕ್ಯಾನ್ಸರ್ ರೋಗದಿಂದ ಪಾರಾಗಿದ್ದರು ಮತ್ತು ತಮ್ಮ ಪತಿ ಎಡ ಪಕ್ಷದ ನಾಯಕ ಮದನ್ ಭಂಡಾರಿ ಅವರನ್ನು ೧೯೯೧ರಲ್ಲಿ ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದರು.

೨೦೦೮ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ನೇಪಾಳಿ ಕಾಂಗ್ರೆಸ್ ಅಭ್ಯರ್ಥಿ ರಾಮ್ ಬರಣ್ ಯಾದವ್ ಆವರನ್ನು ಬಂಢಾರಿ ಬದಲಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.