ಭೂಕಂಪ: ಪಾಕಿಸ್ತಾನದಲ್ಲಿ 52 ಜನರ ಸಾವು
ಅಪ್ಘಾನಿಸ್ಥಾನದ ಕೇಂದ್ರವಾಗಿದ್ದ ಭೂಕಂಪನದಿಂದ ಪಾಕಿಸ್ತಾನದಲ್ಲೂ ಭೂಮಿ ಪ್ರಬಲವಾಗಿ ನಡುಗಿದ್ದು ಇಬ್ಬರು ಮಕ್ಕಳೂ ಸೇರಿ ಕನಿಷ್ಠ 52 ಜನ ಸಾವನ್ನಪ್ಪಿದ್ದಾರೆ...

ಇಸ್ಲಾಮಾಬಾದ್: ಅಪ್ಘಾನಿಸ್ಥಾನದ ಕೇಂದ್ರವಾಗಿದ್ದ ಭೂಕಂಪನದಿಂದ ಪಾಕಿಸ್ತಾನದಲ್ಲೂ ಭೂಮಿ ಪ್ರಬಲವಾಗಿ ನಡುಗಿದ್ದು ಇಬ್ಬರು ಮಕ್ಕಳೂ ಸೇರಿ ಕನಿಷ್ಠ 52 ಜನ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದೆ.
ಇಸ್ಲಾಮಾಬಾದ್, ರಾವಲ್ಪಿಂಡಿ, ಲಾಹೋರ್, ಸರ್ಗೋಡ ಮುಂತಾದ ನಗರಗಳಲ್ಲಿ ಭೂಕಂಪನದ ವರದಿಯಾಗಿದೆ.
ಅಪ್ಘಾನಿಸ್ಥಾನದ ಗಡಿಯಲ್ಲಿರುವ ಬಜೌರ್ ಆದಿವಾಸಿ ಪ್ರದೇಶದಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಈ ಭೂಕಂಪನದಲ್ಲಿ ೧೦ಕ್ಕೂ ಹೆಚ್ಚು ಜನಕ್ಕೆ ಗಾಯಗಳಾಗಿವೆ. ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಮಿಲಿಟರಿ ವಕ್ತಾರ ಮೇಜರ್ ಜನರಲ್ ಆಸಿಮ್ ಬಾಜ್ವಾ ತಿಳಿಸಿದ್ದಾರೆ.
ಭೂಕಂಪನ ತೀವ್ರತೆ ರಿಕ್ಟರ್ ಮಾಪನದಲ್ಲಿ ೭.೭ ರಷ್ಟಿತ್ತು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


