ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ : ಸಚಿವ ವಿಕೆ ಸಿಂಗ್
ನಾನು ಏನು ಹೇಳಿದ್ದೇನೋ, ಈಗ ಏನು ಹೇಳುತ್ತಿದ್ದೇನೋ ಅದರಲ್ಲಿ ಯಾವುದೇ ದ್ವಂದ್ವಾರ್ಥವಿಲ್ಲ. ನಾನು ದಲಿತ ಮಕ್ಕಳ ದಹನ...

Published On :
ನವದೆಹಲಿ: ಹರ್ಯಾಣದಲ್ಲಿ ಇಬ್ಬರು ದಲಿತ ಮಕ್ಕಳ ಸಜೀವ ದಹನ ಪ್ರಕರಣದ ಬಗ್ಗೆ ಮಾತಾಡುವಾಗ ಪ್ರತಿಯೊಂದು ಘಟನೆಗೂ ಕೇಂದ್ರ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಯಾರಾದರೂ ನಾಯಿಗೆ ಕಲ್ಲೆಸೆದರೆ ಅದಕ್ಕೂ ಸಹ ಕೇಂದ್ರ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ವಿ.ಕೆ ಸಿಂಗ್ ಈಗ ಸ್ಪಷ್ಟನೆಯೊಂದಿಗೆ ಮುಂದೆ ಬಂದಿದ್ದಾರೆ.
ಫರೀದಾಬಾದ್‌ನಲ್ಲಿ ಇಬ್ಬರು ಮಕ್ಕಳನ್ನು ಸುಟ್ಟು ಕೊಂದಿರುವುದು ಅಮಾನವೀಯ ಕೃತ್ಯ. ನಮ್ಮ ಸಮಾಜ ಯಾವ ರೀತಿ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.
ಇಬ್ಬರು ಕುಟುಂಬಗಳ ನಡುವಿನ ಕಲಹವೇ ಈ ಘಟನೆಗೆ ಕಾರಣ. ನಮ್ಮ ಸಮಾಜದಲ್ಲಿ ವಿವಿಧ ರೀತಿಯ ಜನರಿರುತ್ತಾರೆ. ಅಸ್ವಸ್ಥ ಮನಸುಗಳ ಹೇಯ ಕೃತ್ಯಕ್ಕೆ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಅದ್ಯಾವುದೇ ಪಕ್ಷವೇ ಇರಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು. ನನ್ನ ಮಾತುಗಳನ್ನು ತಿರುಚಿ ಬೇರೆ ಅಪಾರ್ಥ ಮಾಡಿಕೊಳ್ಳಲಾಗಿದೆ.
ನಾನು ಏನು ಹೇಳಿದ್ದೇನೋ, ಈಗ ಏನು ಹೇಳುತ್ತಿದ್ದೇನೋ ಅದರಲ್ಲಿ ಯಾವುದೇ ದ್ವಂದ್ವಾರ್ಥವಿಲ್ಲ. ನಾನು ದಲಿತ ಮಕ್ಕಳ ದಹನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ದ್ವಂದ್ವಾರ್ಥದ ಹೇಳಿಕೆ ನೀಡಿಲ್ಲ ಎಂದು ವಿಕೆ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


