ಪ್ರಧಾನ ಸುದ್ದಿ

ಆಂಧ್ರ ಪ್ರದೇಶ ರಾಜಧಾನಿಯ ಸಂಸ್ಥಾಪನಾ ಕಾರ್ಯಕ್ರಮಕ್ಕೆ ಬರುವುದಿಲ್ಲ: ಜಗನ್

ಆಂಧ್ರಪ್ರದೇಶದ ರಾಜಧಾನಿ ನಗರ 'ಅಮರಾವತಿ' ನಿರ್ಮಾಣದಲ್ಲಿ ಟಿಡಿಪಿ ಸರ್ಕಾರ 'ರಿಯಲ್ ಎಸ್ಟೇಟ್ ವ್ಯವಹಾರ' ನಡೆಸುತ್ತಿದೆ ಎಂದು ದೂರಿರುವ ವೈ ಎಸ ಆರ್ ಕಾಂಗ್ರೆಸ್

ಆಂಧ್ರ ಪ್ರದೇಶ ರಾಜಧಾನಿಯ ಸಂಸ್ಥಾಪನಾ ಕಾರ್ಯಕ್ರಮಕ್ಕೆ ಬರುವುದಿಲ್ಲ: ಜಗನ್
ವೈ ಎಸ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗನ್ಮೋಹನ್ ರೆಡ್ಡಿ
Published On :

ಹೈದರಾಬಾದ್: ಆಂಧ್ರಪ್ರದೇಶದ ರಾಜಧಾನಿ ನಗರ 'ಅಮರಾವತಿ' ನಿರ್ಮಾಣದಲ್ಲಿ ಟಿಡಿಪಿ ಸರ್ಕಾರ 'ರಿಯಲ್ ಎಸ್ಟೇಟ್ ವ್ಯವಹಾರ' ನಡೆಸುತ್ತಿದೆ ಎಂದು ದೂರಿರುವ ವೈ ಎಸ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗನ್ಮೋಹನ್ ರೆಡ್ಡಿ ಅಕ್ಟೋಬರ್ ೨೨ ರಂದು ನಡೆಯಲಿರುವ ರಾಜಧಾನಿಯ ಸಂಸ್ಥಾಪನಾ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

"ನಿಮ್ಮ ಲಂಚಕ್ಕಾಗಿ ನೀವು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದೀರಿ ಮತ್ತು ಜನರ ಹಿತಾಸಕ್ತಿಗೆ ಧಕ್ಕೆ ತರುತ್ತಿದ್ದೀರಿ. ನಿಮ್ಮ ಇಚ್ಛೆಯಂತೆ ಸಿಂಗಪುರದ ಖಾಸಗಿ ಸಂಸ್ಥೆಗಳಿಗೆ ಜಮೀನು ನೀಡುತ್ತಿದ್ದೀರಿ. ನಿಮ್ಮ ಹಗರಣದ ಹಾಗೂ ನಿಮ್ಮ ನಿಲುವಿನ ವಿರುದ್ಧ ಪ್ರತಿಭಟನೆಯಾಗಿ ನಾನು ಅಲ್ಲಿಗೆ (ಸಂಸ್ಥಾಪನಾ ಕಾರ್ಯಕ್ರಮ) ಬರುವುದಿಲ್ಲ" ಎಂದು ಎನ್ ಚಂದ್ರಬಾಬು ನಾಯ್ಡು ಅವರಿಗೆ ಬರೆದಿರುವ ಮುಕ್ತ ಪತ್ರದಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ ೨೨ ರಂದು ವಿಜಯದಶಮಿಯ ದಿನ ಆಂಧ್ರಪ್ರದೇಶದ ಅಮರಾವತಿ ನಗರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯ ವ್ಯಕ್ತಿಗಳಿಗೆ ಅಲ್ಲದೆ, ಸಾಮಾನ್ಯ ಜನಕ್ಕೆ, ರೈತರಿಗೆ ಆಹ್ವಾನ ನೀಡುವ ಮೂಲಕ ಎಲ್ಲರನ್ನೂ ಒಳಗೊಳ್ಳಲು ಪ್ರಯತ್ನಿಸಿದ್ದೇವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಸರ್ಕಾರ ಈ ಒಂದು ದಿನದ ಕಾರ್ಯಕ್ರಮಕ್ಕೆ ೪೦೦ ಕೋಟಿ ರೂಗಳನ್ನು ಅನಗತ್ಯ ವೆಚ್ಚ ಮಾಡುತ್ತಿದೆ ಎಂದು ಕೂಡ ಜಗನ್ ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.