ಇನ್ಫೋಸಿಸ್: ರಾಜೀವ್ ಸ್ಥಾನಕ್ಕೆ ರಂಗನಾಥ್ ಆಯ್ಕೆ
ದೇಶದ ಎರಡನೇ ಅತೀದೊಡ್ಡ ಸಾಫ್ಟ್ ವೇರ್ ಕಂಪನಿ ಎಂದೇ ಖ್ಯಾತಿಗಳಿಸಿರುವ ಇನ್ಫೋಸಿಸ್ ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ (ಸಿಎಫ್ಒ) ರಾಜೀವ್ ಬನ್ಸಾಲ್ ಅವರು...

ಬೆಂಗಳೂರು: ದೇಶದ ಎರಡನೇ ಅತೀದೊಡ್ಡ ಸಾಫ್ಟ್ ವೇರ್ ಕಂಪನಿ ಎಂದೇ ಖ್ಯಾತಿಗಳಿಸಿರುವ ಇನ್ಫೋಸಿಸ್ ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ (ಸಿಎಫ್ಒ) ರಾಜೀವ್ ಬನ್ಸಾಲ್ ಅವರು ಸೋಮವಾರ ರಾಜೀನಾಮೆ ಘೋಷಿಸಿದ್ದಾರೆಂದು ತಿಳಿದುಬಂದಿದೆ.
ರಾಜೀವ್ ಬನ್ಸಾಲ್ ಅವರು 2012ರಿಂದ ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು. ವಿ.ಬಾಲಕೃಷ್ಣನ್ ಅವರಿಂದ ತೆರವಾಗಿದ್ದ ಸಿಎಫ್ಒ ಸ್ಥಾನವನ್ನು ಬನ್ಸಾಲ್ ಅವರು 15ವರ್ಷಕ್ಕೂ ಹೆಚ್ಚು ಕಾಲ ತುಂಬಿದ್ದರು.
ಬನ್ಸಾಲ್ ಅವರ ಅಧಿಕಾರದ ಅವಧಿ ಡಿಸೆಂಬರ್ 31, 2015ರಂದು ಮುಕ್ತಾಯವಾಗಲಿದ್ದು, ರಾಜೀವ್ ಅವರ ಸ್ಥಾನಕ್ಕೆ ಕಾರ್ಯಕಾರಿ ಉಪಾಧ್ಯಕ್ಷ ರಂಗನಾಥ್ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ಫೋಸಿಸ್ ಕಂಪನಿಯು ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ ಬೆನ್ನಲ್ಲೇ ಈ ಘೋಷಣೆ ಹೊರಬಂದಿದೆ. ಇನ್ಫೋಸಿಸ್ ನ ಹಿರಿಯ ಉದ್ಯೋಗಿಗಳಲ್ಲಿ ಒಬ್ಬರಾದ ರಂಗನಾಥ್ ಅವರೂ ಸಹ ಕಳೆದ 15 ವರ್ಷಗಳಿಂದ ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಇನ್ಫೋಸಿಸ್ ಸಿಎಫ್ಒ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿದ್ದಾರೆಂದು ಇನ್ಫೋಸಿಸ್ ತನ್ನ ಅಧಿಕೃತ ಘೋಷಣೆಯಲ್ಲಿ ತಿಳಿಸಿದೆ.
ರಂಗನಾಥ ನೇಮಕ ಕುರಿತಂತೆ ಮಾಹಿತಿ ನೀಡಿರುವ ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರು, ಕಳೆದ ಒಂದುವರೆ ವರ್ಷದಿಂದಲೂ ರಂಗನಾಥ ಅವರ ಕೆಲಸವನ್ನು ನಾನು ಗಮನಿಸಿದ್ದೇನೆ. ಅವರಲ್ಲಿ ನಾಯಕನಾಗಿರುವ ಎಲ್ಲಾ ಗುಣಗಳಿವೆ. ಯಾವ ಸಮಯದಲ್ಲಿ ಹೇಗೆ ನಾಯಕತ್ವವನ್ನು ನಿಭಾಯಿಸಬೇಕೆಂಬ ಅರಿವು ಅವರಿಗಿದೆ. ಕಂಪನಿಯಲ್ಲಿ ಸಾಕಷ್ಟು ಜ್ಞಾನ ಹಾಗೂ ಸಾಮರ್ಥ್ಯವುಳ್ಳ ರಂಗನಾಥ್ ಅವರನ್ನು ಕಂಪನಿ ಇದೀಗ ಸಿಎಫ್ಒ ಆಗಿ ನೇಮಕ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


