ಅಪ್ಪ, ಭಾವನಿಂದಲೇ ಬಾಲಕಿ ಮೇಲೆ ಅತ್ಯಾಚಾರ
ಸ್ವಂತ ಅಪ್ಪ, ಭಾವನೇ ಮೃಗಗಳಂತೆ ಎರಗಿ ಕಾಮತೀಟೆ ತೀರಿಸಿಕೊಂಡರು, ಇವರ ಕಾಮದಾಹದಿಂದ ತಪ್ಪಿಸಿಕೊಳ್ಳಲು ಊರು ಬಿಟ್ಟುಹೋಗೋಣವೆಂದು ರೈಲು ನಿಲ್ದಾಣಕ್ಕೆ ಹೋದರೆ ಅಲ್ಲಿ ಮತ್ತಿಬ್ಬರು ಕಾಮುಕರು ಬೆದರಿಸಿ ಅತ್ಯಾಚಾರ ಎಸಗಿದರು!...

ಕಾರವಾರ: ಸ್ವಂತ ಅಪ್ಪ, ಭಾವನೇ ಮೃಗಗಳಂತೆ ಎರಗಿ ಕಾಮತೀಟೆ ತೀರಿಸಿಕೊಂಡರು, ಇವರ ಕಾಮದಾಹದಿಂದ ತಪ್ಪಿಸಿಕೊಳ್ಳಲು ಊರು ಬಿಟ್ಟುಹೋಗೋಣವೆಂದು ರೈಲು ನಿಲ್ದಾಣಕ್ಕೆ ಹೋದರೆ ಅಲ್ಲಿ ಮತ್ತಿಬ್ಬರು ಕಾಮುಕರು ಬೆದರಿಸಿ ಅತ್ಯಾಚಾರ ಎಸಗಿದರು!
ಹೌದು, ಇದು ಭಟ್ಕಳದ ಬಾಲಕಿಯೊಬ್ಬಳ ಕರುಣಾಜನಕ ಕಥೆ, ಅಪ್ಪ, ಭಾವನಿಂದ ತಪ್ಪಿಸಿಕೊಂಡು ಹೊಸ ಬದುಕು ಕಟ್ಟಿಕೊಳ್ಳೋಣ ಅಂದರೆ ದುರಾದೃಷ್ಟಕ್ಕೆ ಗೋವಾ ರೈಲಿಗಾಗಿ ಕಾಯುತ್ತಿದ್ದಾಗ ಇನ್ನಿಬ್ಬರು ಕಾಮಾಂಧರು ಈಕೆ ಹಾಗೂ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
ನಡೆದದ್ದೇನು...?
ಬಟ್ಕಳ ಸಮೀಪದ ತೆಂಗಿನ ಗುಂಡಿ ಹೆಬಳೆಯ ಮದರಸಾವೊಂದರಲ್ಲಿ ಓದುತ್ತಿದ್ದ ಬಾಲಕಿ ಶಬನಾ (ಹೆಸರು ಬದಲಿಸಲಾಗಿದೆ) ರಜೆಯಲ್ಲಿಮನೆಗೆ ಹೋದಾಗ ಸ್ವಂತ ಅಪ್ಪ, ಅಕ್ಕನ ಪತಿ ಬಲಾತ್ಕಾರ ಮಾಡಿ ಹಿಂಸಿಸುತ್ತಿದ್ದರು. ಹಲವು ದಿನ ನೋವು ನುಂಗಿ ಬದುಕುತ್ತಿದ್ದ ಶಬನಾ ಒಂದು ದಿನ ಸಹಪಾಠಿಗೆ ವಿಚಾರ ತಿಳಿಸಿದಳು.
ನಂತರ ನ.18ರಂದು ಇಬ್ಬರೂ ಊರು ಬಿಟ್ಟು ಗೋವಾಕ್ಕೆ ತೆರಳಿ ಕೆಲಸಕ್ಕೆ ಸೇರುವ ನಿರ್ಧಾರ ತೆಗೆದುಕೊಂಡರು. ಅದರಂತೆ ಕಾರೊಂದರಲ್ಲಿ ರಾತ್ರಿ 11 ಗಂಟೆಗೆ ಕುಮಟಾಕ್ಕೆ ಬಂದು ರೈಲಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಯುವಕರಿಬ್ಬರು ನಮ್ಮೊಂದಿಗೆ ಬರದಿದ್ದರೆ ಫೋಟೋ ತೆಗೆದು ಫೇಸ್ ಬುಕ್ ಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಬೈಕ್ ನಲ್ಲಿ ಕರೆದೊಯ್ದು ಚಾಕು ತೋರಿಸಿ ಅತ್ಯಾಚಾರ ಮಾಡಿದ್ದಾರೆ. ನಂತರ ವಾಪನ್ ಕರೆತಂದು ರೈಲು ಹತ್ತಿಸಿದ್ದಾರೆ. ವಿಚಾರ ಬಾಯ್ಬಿಡದಂತೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ.
ಕೊನೆಗೆ ಆತಂಕದಿಂದ ಬಾಲಕಿಯರು
ರೈಲನ್ನೇರಿ ಗೋವಾ ತಲುಪಿದ್ದು, ಅಲ್ಲಿ ಕೇರ್ ಸೆಂಟರ್ ವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಈ ನಡುವೆ, ಬಾಲಕಿಯರು ನಾಪತ್ತೆಯಾಗಿದ್ದಾರೆಂದು ಮದರಸಾ ಕಾರ್ಯದರ್ಶಿ ನ.23ರಂದು ಭಟ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಅದರಂತೆ ಕಾರ್ಯಾಚರಣೆಗಿಳಿದ ಪೊಲೀಸರು ಗೋವಾದಲ್ಲಿದ್ದ ಬಾಲಕಿಯರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ಬಾಲಕಿಯರು ಅತ್ಯಾಚಾರದ ವಿಚಾರ ತಿಳಿಸುತ್ತಿದ್ದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೋ ಆ್ಯಕ್ಟ್)-2012 ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಬೈಕಿನಲ್ಲಿ ಕರೆದೊಯ್ಯಲು ಸಹಕರಿಸಿದ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


