ಪ್ರಧಾನ ಸುದ್ದಿ

ಭೂಮಿಯಲ್ಲಿ ಚಿನ್ನ ಸಿಗಲು ಚಂದ್ರ ಕಾರಣನಂತೆ!

ಭೂಮಿಯಲ್ಲಿ ಚಿನ್ನ ಮತ್ತು ಪ್ಲಾಟಿನಂ ಅದಿರುಗಳಿರುವುದೇಕೆ ಮತ್ತು ಚಂದ್ರ ತನ್ನ ಕಕ್ಷೆಯಲ್ಲಿ 5 ಡಿಗ್ರಿಯಷ್ಟು ಬಾಗಿರುವುದೇಕೆ ಎಂಬುದಕ್ಕೆ ಸಮಾನ ಕಾರಣವೊಂದನ್ನು ವಿಜ್ಞಾನಿಗಳು ಹುಡುಕಿದ್ದಾರೆ...

ಭೂಮಿಯಲ್ಲಿ ಚಿನ್ನ ಸಿಗಲು ಚಂದ್ರ ಕಾರಣನಂತೆ!
ಚಂದ್ರ (ಸಂಗ್ರಹ ಚಿತ್ರ)
Published On :

ನ್ಯೂಯಾರ್ಕ್: ಭೂಮಿಯಲ್ಲಿ ಚಿನ್ನ ಮತ್ತು ಪ್ಲಾಟಿನಂ ಅದಿರುಗಳಿರುವುದೇಕೆ ಮತ್ತು ಚಂದ್ರ ತನ್ನ ಕಕ್ಷೆಯಲ್ಲಿ 5 ಡಿಗ್ರಿಯಷ್ಟು ಬಾಗಿರುವುದೇಕೆ ಎಂಬುದಕ್ಕೆ ಸಮಾನ ಕಾರಣವೊಂದನ್ನು ವಿಜ್ಞಾನಿಗಳು  ಹುಡುಕಿದ್ದಾರೆ.

ಆದರೆ ಇದನ್ನು ಸದ್ಯಕ್ಕೆ ವಾದವೆಂದಷ್ಟೇ ಪರಿಗಣಿಸಲಾಗುತ್ತಿದೆ. ಚಂದ್ರ ಹಾಗೂ ಭೂಮಿಯ ರಚನೆಯ ಕಾಲದಲ್ಲಿ ಉಂಟಾದ ಸಾವಿರಾರು ಚಿಕ್ಕಚಿಕ್ಕ ಕ್ಷುದ್ರಗ್ರಹಗಳ ಹೊಡೆತದಿಂದ ಅವೆರಡೂ  ಉಂಟಾಗಿದೆಯಂತೆ. ವರ್ಷಾನುವರ್ಷಗಳ ಹಿಂದೆ ಸೌರಮಂಡಲದಲ್ಲಿ ಸಂಭವಿಸಿದ ಬೃಹತ್ ಘರ್ಷಣೆಗಳಿಂದ ಉಂಟಾದ ಧೂಮಮಂಡಲದಿಂದ ಭೂಮಿ ಹಾಗೂ ಚಂದ್ರ ಸೃಷ್ಟಿಯಾಗಿವೆ. ಮಂಗಳದಷ್ಟೇ  ದೊಡ್ಡ ಗಾತ್ರದ ಆಕಾಶಕಾಯ ಭೂಮಿಗೆ ಢಿಕ್ಕಿ ಹೊಡೆದ ಪರಿಣಾಮ ಭೂಮಧ್ಯ ರೇಖೆಯ ಬಳಿ ಅವಶೇಷದ ಉಂಗುರ ನಿರ್ಮಾಣ ವಾಯ್ತು. ಕ್ರಮೇಣ ಅದೇ ಚಂದ್ರನಾಗಿ ಪರಿವರ್ತನೆಯಾಯ್ತು ಎಂದು  ವಿಜ್ಞಾನಿಗಳು ಹೇಳಿದ್ದಾರೆ.

ಆ ಸಮಯದಲ್ಲಿ ಚಂದ್ರ ಭೂಮಿಗೆ ಅತ್ಯಂತ ಹತ್ತಿರದಲ್ಲಿ ಅಂದ್ರೆ, ಬರೀ 20 ಸಾವಿರ ಮಮೈಲು ದೂರದಲ್ಲಿದ್ದನಂತೆ. ಸಮುದ್ರ ಉಬ್ಬರವಿಳಿತಗಳ ಕಾರಣದಿಂದ ದಿನೇದಿನೆ ಚಂದ್ರ ಕೊಂಚ ಕೊಂಚವೇ  ಕಕ್ಷೆಯಿಂದ ದೂರ ಸರಿಯುತ್ತಾ ಹೋಗಿ ಇಂದಿನ ಅಂತರ ಕಾಯ್ದುಕೊಂಡಿದ್ದಾನೆ. ಚಂದ್ರನ ಮೇಲಿನ ಭೂಮಿಯ ಸೆಳೆತ ಕಡಿಮೆಯಾದಾಗಲೆಲ್ಲ ಸೂರ್ಯನ ಸೆಳೆತ ಹೆಚ್ಚಾಗುತ್ತದೆ. ಇದೀಗ ಚಂದ್ರ ಭೂಮಿಯಿಂದ ಸುಮಾರು 2.5ಲಕ್ಷ ಮೈಲು ದೂರ ಹೋಗಿದ್ದಾನೆ. ಆದರೆ ಚಂದ್ರನ ಕಕ್ಷೆ ಐದು ಡಿಗ್ರಿಗಳಷ್ಟು ವಕ್ರಗೊಂಡಿದೆ ಎಂಬುದು ವಿಜ್ಞಾನಿಗಳ ವಾದ. ಇದು ಈ ವಾರದ ನೇಚರ್ ಜರ್ನಲ್ನಲ್ಲಿ  ಪ್ರಕಟವಾಗಿದೆ.

ಸಾವಿರಾರು ಗ್ರಹ ಉಪಗ್ರಹಗಳು ಆದಿಕಾಲದಲ್ಲಿ ನಡೆಸಿದ ಘರ್ಷಣೆಯೇ ಇಂಥ ಅವಘಡಗಳಿಗೆ ಕಾರಣ ಎಂದಿರುವ ಬೆನ್ನಲ್ಲೇ ಈ ರೀತಿಯ ಘರ್ಷಣೆಯೇ ಭೂಗ್ರಹದಲ್ಲಿ ಚಿನ್ನ, ಪ್ಲಾಟಿನಂ ಮತ್ತಿತರ ಅಮೂಲ್ಯ ಲೋಹಗಳು ಸೃಷ್ಟಿಯಾಗುವುದಕ್ಕೂ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಈ ಥರದ ಢಿಕ್ಕಿಗಳಿಂದ ಚಂದ್ರನ ಗರ್ಭದಲ್ಲಿ ಯಾವ ಲೋಹದ ಅದಿರೂ ಉತ್ಪತ್ತಿಯಾಗಿಲ್ಲ ಎಂಬುದು ಇನ್ನೊಂದು ಅಚ್ಚರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.